Raj Babbar: ನಟ ರಾಜ್​ ಬಬ್ಬರ್​ಗೆ 2 ವರ್ಷ ಜೈಲು ಶಿಕ್ಷೆ; 26 ವರ್ಷ ಹಿಂದಿನ ಕೇಸ್​ಗೆ ಈಗ ತೀರ್ಪು

Raj Babbar | Jail: 1996ರಲ್ಲಿ ರಾಜ್​ ಬಬ್ಬರ್​ ಅವರು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದರು. ಆ ಕೇಸ್​ ಸಂಬಂಧ ಈಗ ತೀರ್ಪು ಪ್ರಕಟ ಆಗಿದೆ.

Raj Babbar: ನಟ ರಾಜ್​ ಬಬ್ಬರ್​ಗೆ 2 ವರ್ಷ ಜೈಲು ಶಿಕ್ಷೆ; 26 ವರ್ಷ ಹಿಂದಿನ ಕೇಸ್​ಗೆ ಈಗ ತೀರ್ಪು
ರಾಜ್ ಬಬ್ಬರ್
Edited By:

Updated on: Jul 08, 2022 | 8:40 AM

ಖ್ಯಾತ ನಟ ರಾಜ್​ ಬಬ್ಬರ್​ (Raj Babbar) ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಬರೋಬ್ಬರಿ 26 ವರ್ಷಗಳ ಹಿಂದೆ ಅವರು ಮಾಡಿದ್ದ ತಪ್ಪಿಗೆ ಈಗ ಈ ಸಜೆ ನೀಡಲಾಗಿದೆ. ಮುಂಬೈ ಕೋರ್ಟ್​ನಲ್ಲಿ ಪ್ರಕರಣದ ತೀರ್ಪು ನೀಡಲಾಗಿದ್ದು, ಜೈಲು (Jail) ಶಿಕ್ಷೆಯ ಜೊತೆಗೆ 8,500 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಚುನಾವಣಾ ಅಧಿಕಾರಿ (Polling Officer) ಮೇಲೆ ಹಲ್ಲೆ ಮಾಡಿದ ಆರೋಪ ರಾಜ್​ ಬಬ್ಬರ್​ ಅವರ ಮೇಲಿತ್ತು. 1996ರ ಮೇ ತಿಂಗಳಲ್ಲಿ ನಡೆದ ಚುನಾವಣೆ ವೇಳೆ ಅವರು ಈ ಕೃತ್ಯ ಎಸಗಿದ್ದರು. ವಜೀರ್​ಗಂಜ್​ ಪೊಲೀಸ್​ ರಾಣೆಯಲ್ಲಿ ಈ ಸಂಬಂಧ ದೂರು​ ದಾಖಲಾಗಿತ್ತು. ಆ ಸಂದರ್ಭದಲ್ಲಿ ರಾಜ್​ ಬಬ್ಬರ್​ ಅವರು ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಕೇಸ್​ನ ತೀರ್ಪಿನ ವೇಳೆ ರಾಜ್​ ಬಬ್ಬರ್ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು.​ ನಟನಾಗಿ, ರಾಜಕಾರಣಿಯಾಗಿ ರಾಜ್​ ಬಬ್ಬರ್​ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ, ಸೀರಿಯಲ್​ ಹಾಗೂ ವೆಬ್​ ಸೀರಿಸ್​ಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. ಹಾಟ್​ ಸ್ಟಾರ್​ನಲ್ಲಿ ಇತ್ತೀಚೆಗೆ ರಿಲೀಸ್​ ಆದ ‘ದಿಲ್​ ಬೇಕರಾರ್​’ ವೆಬ್​ ಸಿರೀಸ್​ನಲ್ಲಿ ಅವರು ನಟಿಸಿದ್ದಾರೆ. 150ಕ್ಕೂ ಅಧಿಕ ಸಿನಿಮಾ, 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಬಳಿಕ ರಾಜ್ ಬಬ್ಬರ್​ ಅವರು ರಾಜಕೀಯದ ಕಡೆಗೆ ಆಸಕ್ತಿ ತೋರಿದರು.

ಇದನ್ನೂ ಓದಿ
ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಡ್ಯ ಕೋರ್ಟ್
ಕೊಲೆ ಅಪರಾಧದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಇತರ 8 ಕೈದಿಗಳ ಬರಾಕ್​ನಲ್ಲಿ ನವಜೋತ್ ಸಿಧುರನ್ನು ಇರಿಸಲಾಗಿದೆ
DK Shivakumar: ಡಿ.ಕೆ. ಶಿವಕುಮಾರ್​ಗೆ ನಿಂದಿಸಿದ್ದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!

90ರ ದಶಕದಲ್ಲಿ ರಾಜ್​ ಬಬ್ಬರ್​ ಅವರು ಸಮಾಜವಾದಿ ಪಕ್ಷ ಸೇರಿಕೊಂಡರು. 1994ರಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶಕಗೊಂಡರು. 2008ರಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರಿದರು. ಮೂರು ಬಾರಿ ಅವರು ಸಂಸದರಾಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜ್​ ಬಬ್ಬರ್​ ಅವರ ಅನುಭವ ಅಪಾರ. 1977ರಿಂದಲೂ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ರಂಗಭೂಮಿಯಲ್ಲಿ ಪದವಿ ಪಡೆದು, ನ್ಯಾಷನಲ್​ ಸ್ಕೂಲ್​ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.