Abhishek Bachchan: ‘ಪತ್ನಿಗೆ ಹೆಚ್ಚು ಸಿನಿಮಾ ಮಾಡಲು ಬಿಡಿ, ಮಗಳನ್ನು ನೀವು ನೋಡಿಕೊಳ್ಳಿ’ ಎಂದ ಅಭಿಮಾನಿ; ಅಭಿಷೇಕ್ ಉತ್ತರ ಏನು?
Ponniyin Selvan 2: ಅಭಿಷೇಕ್ ಬಚ್ಚನ್ ಅವರಿಗೆ ಟ್ವಿಟರ್ನಲ್ಲಿ ಟ್ರೋಲ್ ಕಾಟ ಹೊಸದೇನೂ ಅಲ್ಲ. ಅನೇಕ ಕಟು ಟೀಕೆಗಳಿಗೆ ಅವರು ಸೂಕ್ತ ಉತ್ತರ ನೀಡಿದ್ದುಂಟು.
ನಟ ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಕೂಡ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆರಂಭದ ದಿನಗಳಿಗೆ ಹೋಲಿಕೆ ಮಾಡಿದರೆ ಈಗ ಐಶ್ವರ್ಯಾ ಅವರು ಸಿನಿಮಾ ವಿಚಾರದಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ನಟಿಸಿದ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾ ಬಿಡುಗಡೆಯಾಗಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿನ ಐಶ್ವರ್ಯಾ ರೈ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬುದು ಫ್ಯಾನ್ಸ್ ಆಸೆ. ಈ ವಿಷಯದಲ್ಲಿ ನೆಟ್ಟಿಗರೊಬ್ಬರು ಅಭಿಷೇಕ್ ಬಚ್ಚನ್ಗೆ ಸಲಹೆ ನೀಡಿದ್ದಾರೆ. ಅದಕ್ಕೆ ಅಭಿಷೇಕ್ ಬಚ್ಚನ್ (Abhishek Bachchan) ಕಡೆಯಿಂದ ನೇರ ಉತ್ತರ ಸಿಕ್ಕಿದೆ.
ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಅದೇ ರೀತಿ ಅಭಿಷೇಕ್ ಬಚ್ಚನ್ ಕೂಡ ಟ್ವಿಟರ್ನಲ್ಲಿ ಸಕ್ರಿಯರಾಗಿದ್ದಾರೆ. ಕೆಲವೊಮ್ಮೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೇರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಈಗ ಅಭಿಷೇಕ್ ಬಚ್ಚನ್ ಅವರಿಗೆ ಹಾಗೆಯೇ ಆಗಿದೆ. ‘ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಿ. ಮಗಳು ಆರಾಧ್ಯಾಳನ್ನು ನೀವು ನೋಡಿಕೊಳ್ಳಿ’ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ
ಅಭಿಷೇಕ್ ಬಚ್ಚನ್ ಅವರಿಗೆ ಟ್ವಿಟರ್ನಲ್ಲಿ ಟ್ರೋಲ್ ಕಾಟ ಹೊಸದೇನೂ ಅಲ್ಲ. ಅನೇಕ ಕಟು ಟೀಕೆಗಳಿಗೆ ಅವರು ಸೂಕ್ತ ಉತ್ತರ ನೀಡಿದ್ದುಂಟು. ಅಭಿಮಾನಿಗಳ ಸಲಹೆಯನ್ನು ಅವರು ಪಾಸಿಟಿವ್ ಆಗಿ ಸ್ವೀಕರಿಸುತ್ತಾರೆ. ‘ಐಶ್ವರ್ಯಾಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಬೇಕಾ? ಸರ್.. ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟಪಡುವ ವಿಚಾರದಲ್ಲಿ ನನ್ನ ಅನುಮತಿಯ ಅವಶ್ಯಕತೆ ಇಲ್ಲ’ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
As you should! Now let her sign more movies and you take care of Aaradhya ??
— Unpaid PS2 marketing manager (@SilamSiva) April 29, 2023
‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಷೇಕ್ ಬಚ್ಚನ್ ಕೂಡ ಟ್ವಿಟರ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 2007ರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮದುವೆ ಆಯಿತು. 2011ರಲ್ಲಿ ಆರಾಧ್ಯಾ ಜನಿಸಿದಳು. ‘ಗುರು’, ‘ಧೂಮ್ 2’, ‘ರಾವಣ್’, ‘ಕುಚ್ ನಾ ಕಹೋ’ ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರೂ ಒಂದಾಗಿ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂಬ ಆಸೆಯನ್ನೂ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Sun, 30 April 23