‘ನಾವು ಒಳ್ಳೆಯ ಗೆಳೆಯರಷ್ಟೇ’; ಮದುವೆ ನಂತರ ಹುಟ್ಟಿಕೊಂಡ ಅನುಮಾನಕ್ಕೆ ವಿಕ್ಕಿ ಕೌಶಲ್ ತೆರೆ

ಫರ್ಹಾ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ವಿಕ್ಕಿ ಕೌಶಲ್ ಜತೆಗೆ ನಿಂತಿರುವ ಫೋಟೋ ಇತ್ತು. ಅಷ್ಟೇ ಅಲ್ಲ, ಈ ಪೋಸ್ಟ್​ನಲ್ಲಿ ಕತ್ರಿನಾ ಕಾಲೆಳೆಯುವ ಪ್ರಯತ್ನ ಮಾಡಿದ್ದರು.

‘ನಾವು ಒಳ್ಳೆಯ ಗೆಳೆಯರಷ್ಟೇ’; ಮದುವೆ ನಂತರ ಹುಟ್ಟಿಕೊಂಡ ಅನುಮಾನಕ್ಕೆ ವಿಕ್ಕಿ ಕೌಶಲ್ ತೆರೆ
ಕತ್ರಿನಾ-ವಿಕ್ಕಿ
Edited By:

Updated on: Jun 12, 2022 | 3:59 PM

ಸೋಶಿಯಲ್ ಮೀಡಿಯಾದಲ್ಲಿ (Social Media) ಅನೇಕ ಸೆಲೆಬ್ರಿಟಿಗಳು ಆ್ಯಕ್ಟೀವ್ ಆಗಿದ್ದಾರೆ. ಹಲವು ಪೋಸ್ಟ್​ಗಳನ್ನು ಹಂಚಿಕೊಂಡು ಫ್ಯಾನ್ಸ್​ಗೆ ಖುಷಿ ನೀಡುತ್ತಾರೆ. ಇದರ ಜತೆಗೆ ಮತ್ತೊಬ್ಬರ ಕಾಲೆಳೆಯುವ ಕೆಲಸ ಕೂಡ ಇಲ್ಲಿ ಆಗುತ್ತದೆ. ಈಗ ನಿರ್ದೇಶಕಿ ಫರ್ಹಾ ಖಾನ್ (Farah Khan)​ ಹಾಗೂ ನವ ದಂಪತಿ ಕತ್ರಿನಾ ಕೈಫ್ವಿಕ್ಕಿ ಕೌಶಲ್ ನಡುವೆ ನಡೆದ ಫನ್ನಿ ಸಂಭಾಷಣೆ ವೈರಲ್ ಆಗಿದೆ. ಈ ಪೋಸ್ಟ್​ಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಫರ್ಹಾ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ವಿಕ್ಕಿ ಕೌಶಲ್ ಜತೆಗೆ ನಿಂತಿರುವ ಫೋಟೋ ಇತ್ತು. ಅಷ್ಟೇ ಅಲ್ಲ, ಈ ಪೋಸ್ಟ್​ನಲ್ಲಿ ಕತ್ರಿನಾ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ‘ಕ್ಷಮಿಸಿ ಕತ್ರಿನಾ ಕೈಫ್ ಅವರೇ, ವಿಕ್ಕಿ ಕೌಶಲ್​ಗೆ ಬೇರೊಬ್ಬರು ಸಿಕ್ಕಿದ್ದಾರೆ’ ಎಂದು ಬರೆದುಕೊಂಡಿದ್ದರು. ಕತ್ರಿನಾ ಕೈಫ್ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಕೂಡ ಫನ್ನಿಯಾಗಿ ಉತ್ತರಿಸಿದ್ದಾರೆ. ‘ನಿಮಗೆ ನನ್ನ ಒಪ್ಪಿಗೆ ಇದೆ’ ಎಂದು ಕತ್ರಿನಾ ಹೇಳಿದ್ದರು.

ಕತ್ರಿನಾ ಉತ್ತರವನ್ನು ನೋಡಿ ಈ ಚರ್ಚೆಗೆ ವಿಕ್ಕಿ ಕೌಶಲ್ ಕೂಡ ಎಂಟ್ರಿ ನೀಡಿದ್ದಾರೆ. ‘ನಾವಿಬ್ಬರೂ ಒಳ್ಳೆಯ ಗೆಳೆಯರಷ್ಟೇ’ ಎಂದಿದ್ದಾರೆ. ಈ ಮೂಲಕ ಅವರು ಕತ್ರಿನಾ ಕೈಫ್ ಪರ ವಹಿಸಿಕೊಂಡು ಬಂದಿದ್ದಾರೆ. ಈ ಪೋಸ್ಟ್​ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ
ನಟಿ ಕತ್ರಿನಾ ಕೈಫ್​ ತಾಯಿ ಆಗ್ತಿದ್ದಾರಾ? ಪತಿ ವಿಕ್ಕಿ ಕೌಶಲ್​ ಟೀಮ್​ ಕಡೆಯಿಂದ ಬಂತು ಸ್ಪಷ್ಟನೆ
‘ನಾನು ಮತ್ತು ನನ್ನವನು’; ಸ್ವಿಮ್ಮಿಂಗ್​ಪೂಲ್​ನಲ್ಲಿ ವಿಕ್ಕಿಯನ್ನು ತಬ್ಬಿ ಫೋಟೋ ಹಂಚಿಕೊಂಡ ಕತ್ರಿನಾ
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

ವಿಕ್ಕಿ ಹಾಗೂ ಕತ್ರಿನಾ ಕೈಫ್ ಹಲವು ವರ್ಷಗಳ ಕಾಲ ಸುತ್ತಾಟ ನಡೆಸಿದವರು. 2021ರ ಡಿಸೆಂಬರ್​ನಲ್ಲಿ ಇಬ್ಬರೂ ಮದುವೆ ಆದರು. ಮದುವೆ ಆದ ಕೆಲವೇ ತಿಂಗಳು ಕಳೆಯುವುದರೊಳಗೆ ಇವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವರದಿ ಕೂಡ ಬಿತ್ತರವಾಗಿತ್ತು. ಆದರೆ, ಇದನ್ನು ವಿಕ್ಕಿ ಕೌಶಲ್ ಅಲ್ಲಗಳೆದಿದ್ದರು. ಸದ್ಯ, ಇಬ್ಬರೂ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇಬ್ಬರನ್ನೂ ತೆರೆಮೇಲೆ ಒಟ್ಟಾಗಿ ನೋಡುವ ಆಸೆ ಅಭಿಮಾನಿಗಳಲ್ಲಿದೆ. ಈ ವರೆಗೆ ಈ ಜೋಡಿ ಒಟ್ಟಾಗಿ ನಟಿಸಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.