ಫಿಲಂ ಫೇರ್ ಅವಾರ್ಡ್ 2025: ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ
Filmfare 2025 award: ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರು, ನಟ-ನಟಿಯರನ್ನು ಗುರುತಿಸಿ ನೀಡಲಾಗುವ ಫಿಲಂಫೇರ್ ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಹಲವಾರು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯ್ತು. ‘ಲಾಪತಾ ಲೇಡೀಸ್’, ‘ಐ ವಾಂಟ್ ಟು ಟಾಕ್’ ಸಿನಿಮಾಗಳು ಹೆಚ್ಚು ಪ್ರಶಸ್ತಿ ಬಾಚಿಕೊಂಡವು.

ಹಿಂದಿ ಚಿತ್ರರಂಗದ (Bollywood) ಅತ್ಯುತ್ತಮ ಸಿನಿಮಾ, ತಂತ್ರಜ್ಞರು ಮತ್ತು ನಟ-ನಟಿಯರಿಗೆ ನೀಡಲಾಗುವ ಫಿಲಂಫೇರ್ ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದ್ದು, ಬಲು ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಟ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್, ಅಭಿಷೇಕ್ ಬಚ್ಚನ್, ಕಾಜೋಲ್, ಐಶ್ವರ್ಯಾ ರೈ, ಕರಣ್ ಜೋಹರ್, ಕಾರ್ತಿಕ್ ಆರ್ಯನ್ ಇನ್ನೂ ಹಲವಾರು ಬಾಲಿವುಡ್ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದರು. ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ ನೋಡಿ…
ಫಿಲಂಫೇರ್ 2025 ಗೆದ್ದವರ ಪಟ್ಟಿ
ಅತ್ಯುತ್ತಮ ಚಿತ್ರ: ಲಾಪತಾ ಲೇಡೀಸ್
ಅತ್ಯುತ್ತಮ ನಿರ್ದೇಶಕ: ಕಿರಣ್ ರಾವ್ (ಲಾಪತಾ ಲೇಡೀಸ್)
ಅತ್ಯುತ್ತಮ ಚಿತ್ರ ವಿಮರ್ಶಕರ ಆಯ್ಕೆ: ಐ ವಾಂಟ್ ಟು ಟಾಕ್
ಅತ್ಯುತ್ತಮ ನಟ: ಅಭಿಷೇಕ್ ಬಚ್ಚನ್ ಮತ್ತು ಕಾರ್ತಿಕ್ ಆರ್ಯನ್ (ಐ ವಾಂಟ್ ಟು ಟಾಕ್-ಚಂದು ಚಾಂಪಿಯನ್)
ಅತ್ಯುತ್ತಮ ನಟಿ: ಆಲಿಯಾ ಭಟ್ (ಜಿಗ್ರಾ)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಾಜ್ಕುಮಾರ್ ರಾವ್ (ಶ್ರೀಕಾಂತ್)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಪ್ರತಿಭಾ ರಂತ (ಲಾಪತಾ ಲೇಡೀಸ್)
ಅತ್ಯುತ್ತಮ ಪೋಷಕ ನಟಿ: ಛಾಯಾ ಕದಮ್ (ಲಾಪತಾ ಲೇಡೀಸ್)
View this post on Instagram
ಅತ್ಯುತ್ತಮ ಪೋಷಕ ನಟ: ರವಿ ಕಿಶನ್ (ಲಾಪತಾ ಲೇಡೀಸ್)
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಐ ವಾಂಟ್ ಟು ಟಾಕ್
ಅತ್ಯುತ್ತಮ ಹೊಸ ನಟ: ನಿತಾಂಶಿ ಘೋಯಲ್
ಅತ್ಯುತ್ತಮ ಹೊಸ ನಟಿ: ಲಕ್ಷ್ಯ
ಅತ್ಯುತ್ತಮ ಹೊಸ ನಿರ್ದೇಶಕ: ಕುಮಾಲ್ ಕೇಮು
ಅತ್ಯುತ್ತಮ ಚಿತ್ರಕತೆ: ಸ್ನೇಹಾ ದೇಸಾಯಿ (ಲಾಪತಾ ಲೇಡೀಸ್)
ಅತ್ಯುತ್ತಮ ಕತೆ: ಆದಿತ್ಯ ಧಾರ್-ಮೋನಲ್ ಠಕ್ಕರ್ (ಆರ್ಟಿಕಲ್ 370)
ಅತ್ಯುತ್ತಮ ಸಂಭಾಷಣೆ: ಸ್ನೇಹಾ ದೇಸಾಯಿ (ಲಾಪತಾ ಲೇಡೀಸ್)
ಅತ್ಯುತ್ತಮ ಗೀತ ಸಾಹಿತ್ಯ: ಪ್ರಶಾಂತ್ ಪಾಂಡೆ (ಲಾಪತಾ ಲೇಡೀಸ್)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಲಾಪತಾ ಲೇಡೀಸ್)
ಅತ್ಯುತ್ತಮ ಗಾಯಕಿ: ಮಧುಬಂತಿ ಭಾಗ್ಚಿ (ಸ್ತ್ರೀ 2)
ಜೀವಮಾನ ಸಾಧನೆ: ಜೀನತ್ ಅಮಾನ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




