ಯಾರು ನೀವು? ಮೆಟ್​ ಗಾಲಾದಲ್ಲಿ ಶಾರುಖ್​ ಖಾನ್​ಗೆ ವಿದೇಶಿ ಮಾಧ್ಯಮಗಳ ಪ್ರಶ್ನೆ

ನಟ ಶಾರುಖ್ ಖಾನ್ ಅವರನ್ನು ನೋಡಿ ‘ನೀವು ಯಾರು’ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯಿಂದ ಶಾರುಖ್ ಖಾನ್ ಬೇಸರ ಮಾಡಿಕೊಂಡಿಲ್ಲ. ಬಹಳ ತಾಳ್ಮೆಯಿಂದ ಅವರು ಉತ್ತರ ನೀಡಿದ್ದಾರೆ. ಮೆಟ್ ಗಾಲಾ ಇವೆಂಟ್​ನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ.

ಯಾರು ನೀವು? ಮೆಟ್​ ಗಾಲಾದಲ್ಲಿ ಶಾರುಖ್​ ಖಾನ್​ಗೆ ವಿದೇಶಿ ಮಾಧ್ಯಮಗಳ ಪ್ರಶ್ನೆ
Shah Rukh Khan

Updated on: May 06, 2025 | 5:15 PM

2025ನೇ ಸಾಲಿನ ಮೆಟ್​ ಗಾಲಾ (Met Gala) ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಅಮೆರಿಕದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಫ್ಯಾಷನ್ ಹಬ್ಬದಲ್ಲಿ ಹಲವು ದೇಶಗಳ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ. ವಿವಿಧ ಫ್ಯಾಷನ್ ಬ್ರ್ಯಾಂಡ್​ಗಳ ಪ್ರಚಾರ ರಾಯಭಾರಿಗಳ ರೆಡ್​ ಕಾರ್ಪೆಟ್​​ನಲ್ಲಿ ಕಾಣಿಸಿಕೊಂಡು ಕಣ್ಮನ ಸೆಳೆಯುತ್ತಾರೆ. ಈ ವರ್ಷ ಇದೇ ಮೊದಲ ಬಾರಿಗೆ ಶಾರುಖ್ ಖಾನ್ (Shah Rukh Khan) ಅವರು ಮೆಟ್​ ಗಾಲಾ ಇವೆಂಟ್​​ನಲ್ಲಿ ಹಾಜರಿ ಹಾಕಿದ್ದಾರೆ. ಅಚ್ಚರಿ ಎಂದರೆ, ಅವರು ಯಾರು ಎಂಬುದೇ ಅಲ್ಲಿನ ಮಾಧ್ಯಮಗಳಿಗೆ ತಿಳಿದಿಲ್ಲ!

ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ ಎಂಬುದು ನಿಜ. ಅವರ ಸಿನಿಮಾಗಳು ಅಮೆರಿಕದಲ್ಲಿ ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತವೆ. ಹಾಗಿದ್ದರೂ ಕೂಡ ಶಾರುಖ್ ಖಾನ್ ಯಾರು ಎಂಬುದು ವಿದೇಶಿ ಮಾಧ್ಯಮಗಳಿಗೆ ಸರಿಯಾಗಿ ತಿಳಿದಿಲ್ಲ. ಹಾಗಾಗಿ ಈ ರೀತಿ ಪ್ರಶ್ನೆ ಕೇಳಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ
ಹೊಸ ಮನೆಗೆ ವಾಸ್ತವ್ಯ ಬದಲಿಸಿದ ಶಾರುಖ್ ಖಾನ್, ಕೊಡುತ್ತಿರುವ ಬಾಡಿಗೆ ಎಷ್ಟು?
‘ಕಾಶ್ಮೀರಕ್ಕೆ ಯಾವಾಗಲೂ ಹೋಗೋಲ್ಲ’; ಗಟ್ಟಿ ನಿರ್ಧಾರ ಮಾಡಿದ್ದ ಶಾರುಖ್
ಐಶಾರಾಮಿ ಮನೆ ‘ಮನ್ನತ್’ ಬಿಟ್ಟು ಬಾಡಿಗೆ ಮನೆಗೆ ಹೋಗುತ್ತಿರುವುದೇಕೆ ಶಾರುಖ್
ಸಾಫ್ಟ್ ಡ್ರಿಂಕ್ಸ್ ಜಾಹೀರಾತು ಮಾಡಬೇಡಿ ಎಂದವರಿಗೆ ಶಾರುಖ್ ಉತ್ತರ ಏನು?

ಮೆಟ್ ಗಾಲಾ ಸಮಾರಂಭದ ಬ್ಲ್ಯೂ ಕಾರ್ಪೆಟ್​ನಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಅವರನ್ನು ಮಾಧ್ಯಮದ ಪ್ರತಿನಿಧಿಗಳು ಮಾತನಾಡಿಸಿದ್ದಾರೆ. ‘ನೀವು ಯಾರು’ ಎಂದು ಪ್ರಶ್ನೆ ಕೇಳಿದ್ದಾರೆ. ಅದರಿಂದ ಶಾರುಖ್ ಕಿಂಚಿತ್ತೂ ಬೇಸರ ಮಾಡಿಕೊಂಡಿಲ್ಲ. ‘ನಾನು ಶಾರುಖ್ ಖಾನ್’ ಎಂದು ಅವರು ವಿನಮ್ರವಾಗಿಯೇ ಉತ್ತರ ನೀಡಿದ್ದಾರೆ.

ಸಭ್ಯಸಾಚಿ ವಿನ್ಯಾಸ ಮಾಡಿದ ವಿಶೇಷ ಕಾಸ್ಟ್ಯೂಮ್ ಧರಿಸಿ ಶಾರುಖ್ ಖಾನ್ ಅವರು ಮೆಟ್ ಗಾಲಾ ಇವೆಂಟ್​ನಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್​ನಿಂದ ಮೆಟ್​ ಗಾಲಾಗೆ ಹೋದ ಮೊದಲ ನಟ ಎಂಬ ಖ್ಯಾತಿ ಅವರಿಗೆ ಇದೆ. ‘ನಾನು ತುಂಬ ನರ್ವಸ್ ಆಗಿದ್ದೇನೆ. ನಾನು ನಾಚಿಕೆ ಸ್ವಭಾವದವನು. ಹೆಚ್ಚು ರೆಟ್ ಕಾರ್ಪೆಟ್​ಗಳಿಗೆ ಹೋಗಿಲ್ಲ’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ತಮ್ಮ ಮಕ್ಕಳಿಗಾಗಿ ಅವರು ಮೆಟ್ ಗಾಲಾ ಇವೆಂಟ್​ಗೆ ಬರಲು ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ:  Met Gala 2025: ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಶಾರುಖ್ ಖಾನ್ ಐಕಾನಿಕ್ ಪೋಸ್

ಶಾರುಖ್ ಖಾನ್ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ಕ್ರಿಪ್ಟ್​ಗಳ ಆಯ್ಕೆಯಲ್ಲಿ ಅವರು ಬಹಳ ಕಾಳಜಿ ವಹಿಸುತ್ತಿದ್ದಾರೆ. ಅವರ ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮಗಳು ಸುಹಾನಾ ಖಾನ್ ನಟಿಯಾಗಿ, ಮಗ ಆರ್ಯನ್ ಖಾನ್ ನಿರ್ದೇಶಕನಾಗಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.