ಕೊವಿಡ್ ಎರಡನೇ ಅಲೆ (Covid Second Wave) ತಣ್ಣಗಾಗುತ್ತಿದ್ದಂತೆ ಸ್ಟಾರ್ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿವೆ. ಸ್ಟಾರ್ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಏರ್ಪಡುತ್ತಿದೆ. ಸಾಲುಸಾಲು ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ವೀಕ್ಷಕರಿಗೆ ಯಾವ ಸಿನಿಮಾ ವೀಕ್ಷಿಸಬೇಕು ಎನ್ನುವ ಗೊಂದಲ ಏರ್ಪಡುತ್ತಿದೆ. ಈ ಮಧ್ಯೆ ಕೆಲ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡುತ್ತಿವೆ. ಸಿನಿಮಾ ಕೆಲಸಗಳು ಪೂರ್ಣಗೊಳ್ಳದೇ ಇರೋದು ಒಂದು ಕಾರಣವಾದರೆ, ಒಟ್ಟೊಟ್ಟಿಗೆ ಹಲವು ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಚಿತ್ರಮಂದಿರದ ಅಭಾವದಿಂದಲೂ ಕೆಲವರು ರೇಸ್ನಿಂದ ಹಿಂದೆ ಸರಿದಿದ್ದಾರೆ. ಈಗ ಆಲಿಯಾ ಭಟ್ (Alia Bhat) ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ಕಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಮೊದಲು ಬಿಡುಗಡೆ ಆದ ಚಿತ್ರದ ಟೀಸರ್ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಬನ್ಸಾಲಿ ಸಿನಿಮಾ ಕೆಲಸದ ಬಗ್ಗೆ ಗೊತ್ತಿದ್ದವರು ಖಂಡಿತವಾಗಿಯೂ ಸಿನಿಮಾ ನೋಡೋಕೆ ತೆರಳುತ್ತಾರೆ. ಸಿನಿಮಾ ಜನವರಿ 6ರಂದು ತೆರೆಗೆ ಬರಬೇಕಿತ್ತು. ಆದರೆ, ಈಗ ರಿಲೀಸ್ ದಿನಾಂಕ ಫೆಬ್ರವರಿ 18, 2022ಕ್ಕೆ ಮುಂದೂಡಲ್ಪಟ್ಟಿದೆ.
Watch her rise with power, courage & fearlessness. #GangubaiKathiawadi coming to take over 2022 on 18th February, in cinemas near you.#SanjayLeelaBhansali @ajaydevgn @aliaa08 @prerna982 @jayantilalgada @bhansali_produc@saregamaglobal pic.twitter.com/Z4uOEDJpAT
— PEN INDIA LTD. (@PenMovies) November 15, 2021
‘ಗಂಗೂಬಾಯಿ ಕಾಠಿಯಾವಾಡಿ’ ಕೆಲಸಗಳು ಪೂರ್ಣಗೊಂಡು ಹಲವು ತಿಂಗಳೇ ಆಗಿದೆ. ಕೊವಿಡ್ ಕಾರಣದಿಂದ ರಿಲೀಸ್ ದಿನಾಂಕ ಈಗಾಗಲೇ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದೆ. ಚಿತ್ರತಂಡ ಮತ್ತೆ ಬಿಡುಗಡೆ ದಿನಾಂಕ ಮುಂದೂಡ್ಡಿದ್ದೇಕೆ ಎಂಬುದಕ್ಕೆ ಕಾರಣ ನೀಡಿಲ್ಲ. ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಕಾರಣಕ್ಕೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ತಂಡ ರಿಲೀಸ್ ದಿನಾಂಕ ಮುಂದೂಡಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Nykaa IPO: ಅಬ್ಬಬ್ಬಾ.. ನೈಕಾ ಕಂಪನಿಯಲ್ಲಿ ಹೂಡಿಕೆ ಮಾಡಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಗಳಿಸಿದ್ದು ಇಷ್ಟೊಂದಾ?
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೆ ಸಂಕಷ್ಟ; ಆಲಿಯಾ, ಬನ್ಸಾಲಿಗೆ ಸಮನ್ಸ್