Shah Rukh Khan: ಶಾರುಖ್ ಖಾನ್‌ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದ ಪತ್ನಿ ಗೌರಿ ಖಾನ್​; ಕಾರಣ ಏನು?

|

Updated on: Nov 02, 2023 | 1:10 PM

Shah Rukh Khan Birthday: ಮದುವೆಯಾಗಿ ಹಲವು ವರ್ಷಗಳು ಕಳೆದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೌರಿ ಖಾನ್​ ಈ ಬಗ್ಗೆ ಮಾತಾಡಿದ್ದರು. ‘ಈಗ ಆ ದಿನಗಳನ್ನು ನೆನಪಿಸಿಕೊಂಡರೆ ಬಹಳ ಹುಡುಗಾಟಿಕೆ ಅನಿಸುತ್ತದೆ’ ಎಂದು ಅವರು ಹೇಳಿದ್ದರು. ಮದುವೆ ನಂತರ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮವನ್ನು ಈ ದಂಪತಿ ಪಾಲಿಸುತ್ತಿದ್ದಾರೆ.

Shah Rukh Khan: ಶಾರುಖ್ ಖಾನ್‌ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದ ಪತ್ನಿ ಗೌರಿ ಖಾನ್​; ಕಾರಣ ಏನು?
ಗೌರಿ ಖಾನ್​, ಶಾರುಖ್​ ಖಾನ್​
Follow us on

ಭಾರತೀಯ ಚಿತ್ರರಂಗದಲ್ಲಿ ನಟ ಶಾರುಖ್ ಖಾನ್ (Shah Rukh Khan) ಅವರು ಮಾಡಿರುವ ಸಾಧನೆ ಅಪಾರ. ಯಾವುದೇ ಗಾಢ್​ ಫಾದರ್​ ಇಲ್ಲದೇ ಬಂದ ಅವರು ನಂತರ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಈಗ ಶಾರುಖ್​ ಖಾನ್​ ಅವರಿಗೆ ಹೊಸದಾಗಿ ಯಾವುದೇ ಪರಿಚಯ ಬೇಕಿಲ್ಲ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಅವರು ನೆಲೆ ಕಂಡುಕೊಂಡಿದ್ದಾರೆ. ಇಂದು (ನವೆಂಬರ್​ 2) ಅವರಿಗೆ ಜನ್ಮದಿನದ (Shah Rukh Khan Birthday) ಸಂಭ್ರಮ. ಆ ಪ್ರಯುಕ್ತ ಒಂದಷ್ಟು ಹಳೇ ಘಟನೆಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. ಆಸಕ್ತಿಕರ ವಿಚಾರವೇನೆಂದರೆ ಶಾರುಖ್ ಖಾನ್​ಗೆ ಅಭಿನವ್ ಎಂಬ ಮತ್ತೊಂದು ಹೆಸರು ಸಹ ಇದೆ. ಅವರಿಗೆ ಅಭಿನವ್​ ಎಂದು ನಾಮಕರಣ ಮಾಡಿದ್ದು ಅವರ ಹೆಂಡತಿ ಗೌರಿ ಖಾನ್ (Gauri Khan)!

ಶಾರುಖ್​ ಖಾನ್​ಗೆ ಅಭಿನವ್​ ಎಂದು ಹೆಸರು ಇಟ್ಟಿದ್ದಕ್ಕೆ ಕಾರಣ ಏನು? ಇದಕ್ಕೆ ಉತ್ತರ ಬೇಕು ಎಂದರೆ 32 ವರ್ಷ ಹಿಂದಿನ ಘಟನೆ ಕೆದಕಬೇಕು. ಗೌರಿ ಮತ್ತು ಶಾರುಖ್​ ಅವರದ್ದು ಪ್ರೇಮ ವಿವಾಹ. 1991ರಲ್ಲಿ ಅವರಿಬ್ಬರು ಮದುವೆಯಾದರು. ಆಗ ಶಾರುಖ್​ ಖಾನ್​ ಇನ್ನೂ ಫೇಮಸ್​ ಆಗಿರಲಿಲ್ಲ. ಗೌರಿ ಮತ್ತು ಶಾರುಖ್​ ಖಾನ್​ ಅವರದ್ದು ಅಂತರ್​ ಧರ್ಮೀಯ ವಿವಾಹ. ಆ ಕಾರಣದಿಂದ ಈ ಮದುವೆಗೆ ಗೌರಿ ಮನೆಯವರು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಹೇಗೋ ಕಷ್ಟಪಟ್ಟು ಫ್ಯಾಮಿಲಿಯವರನ್ನು ಒಪ್ಪಿಸಿದ ಬಳಿಕ ಗೌರಿ ಮತ್ತು ಶಾರುಖ್ ಮದುವೆ ನಡೆಯಿತು. ಆಗಲೇ ಹೆಸರು ಬದಲಾಯಿಸುವ ಪ್ರಸಂಗ ನಡೆಯಿತು.

ಇದನ್ನೂ ಓದಿ: ಮಾಸ್​ ಬಿಟ್ಟು ಕ್ಲಾಸ್ ಆದ ಶಾರುಖ್​ ಖಾನ್; ಬರ್ತ್​ಡೇಗೆ ‘ಡಂಕಿ’ ಸಿನಿಮಾ ಟೀಸರ್ ರಿಲೀಸ್

ಗೌರಿ ಖಾನ್​ ಕುಟುಂಬದ ಸದಸ್ಯರಿಗೆ ಶಾರುಖ್ ಕೂಡ ಹಿಂದೂ ಧರ್ಮದವರು ಎಂಬ ಫೀಲಿಂಗ್ ಬರಬೇಕು ಎನ್ನುವ ಕಾರಣಕ್ಕೆ ಅಭಿನವ್ ಎಂದು ಹೆಸರು ಇಡಲು ಗೌರಿ ಖಾನ್ ಅವರು ನಿರ್ಧರಿಸಿದ್ದರು. ಮದುವೆಯಾಗಿ ಹಲವು ವರ್ಷಗಳು ಕಳೆದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೌರಿ ಖಾನ್​ ಅವರು ಈ ಬಗ್ಗೆ ಮಾತನಾಡಿದ್ದರು. ‘ಈಗ ಆ ದಿನಗಳನ್ನು ನೆನಪಿಸಿಕೊಂಡರೆ ಬಹಳ ಹುಡುಗಾಟಿಕೆ ಅನಿಸುತ್ತದೆ’ ಎಂದು ಅವರು ಹೇಳಿದ್ದರು. ಮದುವೆ ಬಳಿಕ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮವನ್ನು ಈ ದಂಪತಿ ಪಾಲಿಸುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಜನ್ಮದಿನ: 6,300 ಕೋಟಿ ರೂಪಾಯಿ ಒಡೆಯನಿಗೆ ಹಣ ಹೇಗೆಲ್ಲ ಬರುತ್ತೆ ಗೊತ್ತಾ?

ಗೌರಿ ಖಾನ್​ ಅವರು ಅಭಿನವ್​ ಎಂದು ನಾಮಕರಣ ಮಾಡಿದ್ದೇನೋ ನಿಜ. ಆದರೆ ಚಿತ್ರರಂಗದಲ್ಲಿ ಶಾರುಖ್​ ಖಾನ್​ ಎಂಬ ಹೆಸರಿನಿಂದಲೇ ಅವರು ಗುರುತಿಸಿಕೊಂಡರು. ಹಾಗಾಗಿ ಅಭಿನವ್​ ಎಂಬ ಹೆಸರು ಹೆಚ್ಚು ಬಳಕೆಗೆ ಬರಲಿಲ್ಲ. ಬಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಶಾರುಖ್ ಖಾನ್ ನೀಡಿದರು. ವಿಶ್ವಾದ್ಯಂತ ಅವರಿಗೆ ಖ್ಯಾತಿ ಸಿಕ್ಕಿತು. ಈಗ ಅವರಿಗೆ 58 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಸಖತ್​ ಬೇಡಿಕೆ ಉಳಿಸಿಕೊಂಡಿದ್ದಾರೆ. 2023ರಲ್ಲಿ ಅವರು ನಟಿಸಿದ ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ‘ಡಂಕಿ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.