ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಅವರು ಹಲವು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ‘ಫೈಟರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್ ಹೊಸ್ತಿಲಿನಲ್ಲಿ ಅವರು ಬೇರೆ ನಟರ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿದ್ದಾರೆ. ಹೌದು, ಹೃತಿಕ್ ರೋಷನ್ ಅವರು ಇತ್ತೀಚೆಗೆ ‘12th ಫೇಲ್’ ಸಿನಿಮಾ (12th Fail Movie) ನೋಡಿದ್ದಾರೆ. ಈ ಚಿತ್ರ ಅವರಿಗೆ ಸಖತ್ ಇಷ್ಟ ಆಗಿದೆ. ನೈಜ ಘಟನೆ ಆಧರಿಸಿ ನಿರ್ಮಾಣ ಆಗಿರುವ ಈ ಸಿನಿಮಾದಿಂದ ತಾವು ತುಂಬ ಸ್ಫೂರ್ತಿ ಪಡೆದಿರುವುದಾಗಿ ಹೃತಿಕ್ ರೋಷನ್ ಹೇಳಿದ್ದಾರೆ. ಇಡೀ ತಂಡದ ಪ್ರಯತ್ನವನ್ನು ಅವರು ಕೊಂಡಾಡಿದ್ದಾರೆ. ನಿರ್ದೇಶಕ ವಿಧು ವಿನೋದ್ ಚೋಪ್ರ ಅವರಿಗೂ ಹೃತಿಕ್ ರೋಷನ್ ಅಭಿನಂದನೆ ತಿಳಿಸಿದ್ದಾರೆ.
ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಬಂದ ಬಡ ಹುಡುಗನೊಬ್ಬ ಕಷ್ಟಪಟ್ಟು ಐಪಿಎಸ್ ಅಧಿಕಾರಿ ಆಗುವ ಕಥೆಯನ್ನು ‘12th ಫೇಲ್’ ಸಿನಿಮಾ ಒಳಗೊಂಡಿದೆ. ಈ ಸಿನಿಮಾಗೆ ವಿಧು ವಿನೋದ್ ಚೋಪ್ರ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಮೇಧಾ ಶಂಕರ್ ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಹಿಟ್ ಆದ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿಯೂ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಮಿತಿ ಇಲ್ಲದ ದೀಪಿಕಾ ಪಡುಕೋಣೆ ಗ್ಲಾಮರ್; ಹೃತಿಕ್ ಡ್ಯಾನ್ಸ್ ಖದರ್
ತಮ್ಮ ಬ್ಯುಸಿ ದಿನಚರಿ ನಡುವೆಯೂ ಹೃತಿಕ್ ರೋಷನ್ ಅವರು ‘12th ಫೇಲ್’ ಚಿತ್ರ ವೀಕ್ಷಿಸಿದ್ದಾರೆ. ‘ಕೊನೆಯೂ 12th ಫೇಲ್ ಚಿತ್ರ ನೋಡಿದೆ. ಸಿನಿಮಾ ಮೇಕಿಂಗ್ನಲ್ಲಿ ಇದು ಮಾಸ್ಟರ್ ಕ್ಲಾಸ್. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾದಲ್ಲಿ ಸೌಂಡ್ ಎಫೆಕ್ಟ್ ಚೆನ್ನಾಗಿದೆ. ಅಭಿನಯ ತುಂಬ ಚೆನ್ನಾಗಿದೆ. ಮಿಸ್ಟರ್ ಚೋಪ್ರ.. ಎಂಥಾ ಸಿನಿಮಾ! ಈ ಚಿತ್ರ ನೀಡಿದ್ದಕ್ಕೆ ಧನ್ಯವಾದಗಳು. ನಾನು ಇದರಿಂದ ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೃತಿಕ್ ರೋಷನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Finally saw 12th Fail. It’s quite a masterclass in film making. Above everything else I was inspired by the use of sound and sound effects play in enhancing the moments. Brilliant performances. Mr. Chopra , what a movie ! Thank you for the brilliance. I am deeply inspired by this…
— Hrithik Roshan (@iHrithik) January 14, 2024
ಬಾಕ್ಸ್ ಆಫೀಸ್ನಲ್ಲಿ ‘12th ಫೇಲ್’ ಸಿನಿಮಾ 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಸಿನಿಮಾ ನೋಡಿ ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜಾನ್ವಿ ಕಪೂರ್, ಕತ್ರಿನಾ ಕೈಫ್, ಅನುರಾಗ್ ಕಶ್ಯಪ್ ಮುಂತಾದವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರ ನಟನೆಗೆ ಪ್ರಶಂಸೆ ಸಿಗುತ್ತಿದೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಈ ಸಿನಿಮಾ ಸ್ಫೂರ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ