Hrithik Roshan: ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?

|

Updated on: May 04, 2023 | 4:41 PM

Hrithik Roshan Remuneration: ಕಲಾವಿದರ ಸಂಭಾವನೆ ಹೆಚ್ಚಾಗಿರುವುದರಿಂದ ‘ಫೈಟರ್​’ ಚಿತ್ರದ ಬಜೆಟ್​ ಮಿತಿ ಮೀರಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಮಾಲ್​ ಆರ್​. ಖಾನ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Hrithik Roshan: ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?
ದೀಪಿಕಾ ಪಡುಕೋಣೆ, ಸಿದ್ದಾರ್ಥ್ ಆನಂದ್, ಹೃತಿಕ್ ರೋಷನ್
Follow us on

ಈ ವರ್ಷದ ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಫೈಟರ್​’ ಸಿನಿಮಾ (Fighter Movie) ಕೂಡ ಸ್ಥಾನ ಪಡೆದುಕೊಂಡಿದೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ಅದ್ದೂರಿ ವೆಚ್ಚದಲ್ಲಿ ‘ಫೈಟರ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಬಜೆಟ್​ನಲ್ಲಿ ಕಲಾವಿದರ ಸಂಭಾವನೆಗೆ (Remuneration) ನೂರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ‘ಪಠಾಣ್​’ ಸಿನಿಮಾವನ್ನು ನಿರ್ದೇಶಿಸಿ ದೊಡ್ಡ ಯಶಸ್ಸು ಕಂಡಿರುವ ಸಿದ್ಧಾರ್ಥ್​ ಆನಂದ್​ ಅವರು ‘ಫೈಟರ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಕಿಂಗ್​ ಸಖತ್​ ಅದ್ದೂರಿಯಾಗಿ ಇರಲಿದೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ನಟಿಸಲು ಹೃತಿಕ್​ ರೋಷನ್​ (Hrithik Roshan) ಅವರು ಬರೋಬ್ಬರಿ 85 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ನಿರ್ದೇಶಕ ಸಿದ್ದಾರ್ಥ್​ ಆನಂದ್​ ಹಾಗೂ ನಾಯಕಿ ದೀಪಿಕಾ ಪಡುಕೋಣೆ ಅವರಿಗೂ ಕೈ ತುಂಬ ಸಂಬಳ ಸಿಗುತ್ತಿದೆ.

ಕಮಾಲ್​ ಆರ್​. ಖಾನ್​ ಅವರು ಬಾಲಿವುಡ್​ನ ಇನ್​ಸೈಡ್​ ವಿಚಾರಗಳ ಬಗ್ಗೆ ಆಗಾಗ ಟ್ವೀಟ್​ ಮಾಡುತ್ತಾ ಇರುತ್ತಾರೆ. ಈಗ ಅವರು ‘ಫೈಟರ್​’ ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ಸಂಭಾವನೆ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ಬಹುಕೋಟಿ ರೂಪಾಯಿ ಸಂಭಾವನೆ ನೀಡುತ್ತಿರುವುದರಿಂದ ಈ ಸಿನಿಮಾದ ಬಜೆಟ್​ ಕೈ ಮೀರಿಹೋಗಿದೆ ಎಂಬುದು ಕಮಾಲ್​ ಆರ್​. ಖಾನ್​ ಅಭಿಪ್ರಾಯ.

ಇದನ್ನೂ ಓದಿ
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಇದನ್ನೂ ಓದಿ: Hrithik Roshan: ‘ಫೈಟರ್​’ ಚಿತ್ರದಲ್ಲಿ 25 ನಿಮಿಷದ ಕ್ಲೈಮ್ಯಾಕ್ಸ್​; 120 ಗಂಟೆಯ ಫೈಟಿಂಗ್​ ಚಿತ್ರೀಕರಣಕ್ಕೆ ಹೃತಿಕ್​ ಸಜ್ಜು

‘ಹೃತಿಕ್​ ರೋಷನ್​ ನಟನೆಯ ಫೈಟರ್​ ಸಿನಿಮಾದ ಬಜೆಟ್​ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್​ ರೋಷನ್​ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಬಜೆಟ್​ ಮತ್ತು ಸಂಭಾವನೆಗೆ ಸಂಬಂಧಿಸಿದಂತೆ ‘ಫೈಟರ್​’ ಚಿತ್ರತಂಡದ ಯಾರೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಸಾಹಸ ಪ್ರಧಾನ ಸಿನಿಮಾಗಳನ್ನು ಮಾಡುವಲ್ಲಿ ಸಿದ್ದಾರ್ಥ್​ ಆನಂದ್​ ಅವರು ಸೈ ಎನಿಸಿಕೊಂಡಿದ್ದಾರೆ. ಹೃತಿಕ್​ ರೋಷನ್​ ಜೊತೆ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.