AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ರಿಶ್ 4’ ಚಿತ್ರೀಕರಣ ಯಾವಾಗ? ಉತ್ತರ ನೀಡಿದ ರಾಕೇಶ್ ರೋಷನ್

Krrish 4 movie shooting: ಭಾರತದ ಜನಪ್ರಿಯ ಸೂಪರ್ ಹೀರೋ ಸಿನಿಮಾ ಆಗಿರುವ ‘ಕ್ರಿಶ್’ ಸರಣಿಯ ಹೊಸದೊಂದು ಸಿನಿಮಾ ಚಿತ್ರೀಕರಣಕ್ಕೆ ವೇದಿಕೆ ಸಜ್ಜಾಗುತ್ತಿದೆ. ಹೃತಿಕ್ ರೋಷನ್ ‘ಕ್ರಿಶ್’ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ. ಆದರೆ ಇದೀಗ ಹೃತಿಕ್ ಅವರೇ ಈ ಸಿನಿಮಾದ ನಿರ್ದೇಶನವನ್ನೂ ಮಾಡಲಿದ್ದಾರೆ. ಸಿನಿಮಾದ ಶೂಟಿಂಗ್ ಶುರು ಯಾವಾಗ? ಇಲ್ಲಿದೆ ಉತ್ತರ...

‘ಕ್ರಿಶ್ 4’ ಚಿತ್ರೀಕರಣ ಯಾವಾಗ? ಉತ್ತರ ನೀಡಿದ ರಾಕೇಶ್ ರೋಷನ್
Krrish 4
ಮಂಜುನಾಥ ಸಿ.
|

Updated on:Sep 09, 2025 | 11:26 AM

Share

ವಿದೇಶದಲ್ಲಿ ಸೂಪರ್ ಹೀರೋ ಸಿನಿಮಾಗಳು ಅನೇಕ. ‘ಸೂಪರ್ ಮ್ಯಾನ್’, ‘ಐರನ್ ಮ್ಯಾನ್’, ‘ಬ್ಯಾಟ್​​ಮ್ಯಾನ್’, ‘ಹಲ್ಕ್’, ‘ಕ್ಯಾಪ್ಟನ್ ಅಮೆರಿಕ’, ‘ಸ್ಪೈಡರ್​ಮ್ಯಾನ್’ ಇನ್ನೂ ಅನೇಕ ಸೂಪರ್ ಹೀರೋಗಳು ಹಾಲಿವುಡ್​​ನಲ್ಲಿದ್ದಾರೆ. ಭಾರತದಲ್ಲಿ ಸೂಪರ್ ಹೀರೋ ಸಿನಿಮಾಗಳು ಕಡಿಮೆಯೇ. 2006 ರಲ್ಲಿ ಬಿಡುಗಡೆ ಆದ ‘ಕ್ರಿಶ್’ ಸಿನಿಮಾ ಭಾರತದ ಮೊದಲ ಅಧಿಕೃತ ಸೂಪರ್ ಹೀರೋ ಎನ್ನಬಹುದು. ಅದಕ್ಕೂ ಮುಂಚೆ ಕೆಲ ಸಿನಿಮಾಗಳು ಬಿಡುಗಡೆ ಆಗಿದ್ದವರಾದರೂ ತಾಂತ್ರಿಕವಾಗಿ ಗಟ್ಟಿಯಾಗಿದ್ದ ಮೊದಲ ಸೂಪರ್ ಹೀರೋ ಸಿನಿಮಾ ‘ಕ್ರಿಶ್’ ಆಗಿತ್ತು. ‘ಕ್ರಿಶ್’ ಈಗ ಭಾರತದ ಜನಪ್ರಿಯ ಸೂಪರ್ ಹೀರೋ ಸಿನಿಮಾ ಆಗಿದ್ದು, ಇದೀಗ ಸಿನಿಮಾದ ನಾಲ್ಕನೇ ಆವೃತ್ತಿ ತೆರೆಗೆ ಬರಲು ವೇದಿಕೆ ಸಜ್ಜುಗೊಳ್ಳುತ್ತಿದೆ.

ಹೃತಿಕ್ ರೋಷನ್ ‘ಕ್ರಿಶ್’ ಪಾತ್ರದಲ್ಲಿ ಮಿಂಚುತ್ತಾ ಬಂದಿದ್ದಾರೆ. ಈ ವರೆಗೆ ಮೂರು ಕ್ರಿಶ್ ಸಿನಿಮಾಗಳು ತೆರೆಗೆ ಬಂದಿದ್ದು, ಮೂರೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಆದರೆ ಇದೇ ಮೊದಲ ಬಾರಿಗೆ ‘ಕ್ರಿಶ್ 4’ ಸಿನಿಮಾ ಅನ್ನು ಹೃತಿಕ್ ರೋಷನ್ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಸಹ. ಈ ಹಿಂದಿನ ‘ಕ್ರಿಶ್’ ಸಿನಿಮಾಗಳನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಆದರೆ ವಯಸ್ಸಿನ ಕಾರಣಕ್ಕೆ ಅವರು ಈ ಬಾರಿ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಕೇಶ್ ರೋಷನ್ ಅವರು ‘ಕ್ರಿಶ್ 4’ ಸಿನಿಮಾದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ‘ಕ್ರಿಶ್ 4’ ಸಿನಿಮಾದ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಸಿನಿಮಾದ ನಿಖರವಾದ ಬಜೆಟ್ ಎಷ್ಟಾಗಬಹುದು ಎಂಬ ಐಡಿಯಾ ನಮಗೆ ಈಗ ಸಿಕ್ಕಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಬಹಳ ಇದೆ. ಹಾಗಾಗಿ ನಾವು ಚಿತ್ರೀಕರಣ ಪ್ರಾರಂಭ ಮಾಡಲು ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದೇವೆ. ಪ್ರೀ ಪ್ರೊಡಕ್ಷನ್ ಸಂಪೂರ್ಣವಾದ ಬಳಿಕವಷ್ಟೆ ನಾವು ಚಿತ್ರೀಕರಣ ಶುರು ಮಾಡಲಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್

‘ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಂದಿನ ವರ್ಷ ಮುಗಿಯಲಿದೆ. ನಾವು ಜೂನ್ ಅಥವಾ ಜುಲೈ ತಿಂಗಳಲ್ಲಿ ‘ಕ್ರಿಶ್ 4’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಚಿತ್ರೀಕರಣ ಬೇಗನೆ ಮುಗಿಯಲಿದೆಯಾದರೂ ಮತ್ತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದರಿಂದಾಗಿ ಸಿನಿಮಾದ ಬಿಡುಗಡೆ ಬಹುಷಃ 2027ರ ಅಂತ್ಯಕ್ಕೆ ಅಥವಾ 2028ರ ಆರಂಭದಲ್ಲಿ ಆಗುವ ನಿರೀಕ್ಷೆ ಇದೆ. ಸಿನಿಮಾದ ಅಧಿಕೃತ ಘೋಷಣೆಯನ್ನು ನಾವು ಶೀಘ್ರವೇ ಮಾಡಲಿದ್ದೇವೆ’ ಎಂದಿದ್ದಾರೆ ರಾಕೇಶ್.

ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಜೂ ಎನ್​​ಟಿಆರ್ ಸಹ ಜೊತೆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ‘ವಾರ್ 2’ ಸಿನಿಮಾದ ಬಳಿಕ ಹೃತಿಕ್ ರೋಷನ್ ಕೈಯಲ್ಲಿ ಈಗ ಮತ್ತೊಂದು ಆಕ್ಷನ್ ಸಿನಿಮಾ ಇದೆ. ಆ ಸಿನಿಮಾದ ಚಿತ್ರೀಕರಣದ ಬಳಿಕವಷ್ಟೆ ಹೃತಿಕ್ ಅವರು ‘ಕ್ರಿಶ್ 4’ ಸಿನಿಮಾ ಕೈಗೆತ್ತುಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Tue, 9 September 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ