‘ನಾನು ದೊಡ್ಡ ಸ್ಟಾರ್ ಅಲ್ಲ’; ‘ಆದಿಪುರುಷ್’ ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ಸೈಫ್  

‘ಆದಿಪುರುಷ್’ ಸಿನಿಮಾ ಬಳಿಕ ನಟ ಸೈಫ್ ಅಲಿ ಖಾನ್​ಗೆ ದಕ್ಷಿಣ ಭಾರತದಿಂದ ಹೆಚ್ಚು ಆಫರ್​ಗಳು ಬರುತ್ತಿವೆ. ಅವರು ಜೂನಿಯರ್ ಎನ್​ಟಿಆರ್ ಅಭಿನಯದ ‘ದೇವರ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನೆಗೆಟಿವ್ ರೋಲ್​ ಬಂದಿದೆ. ಸೈಫ್ ವೆಬ್​ ಸೀರಿಸ್​ಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.

‘ನಾನು ದೊಡ್ಡ ಸ್ಟಾರ್ ಅಲ್ಲ’; ‘ಆದಿಪುರುಷ್’ ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ಸೈಫ್  
ಸೈಫ್ ಅಲಿ ಖಾನ್

Updated on: Feb 08, 2024 | 11:44 AM

ನಟ ಸೈಫ್ ಅಲಿ ಖಾನ್ (Saif Ali Khan) ಅವರು ಹೀರೋ ಆಗಿ ಗಮನ ಸೆಳೆದ ಸಿನಿಮಾಗಳು ಕಡಿಮೆ. ಅವರು ಪೋಷಕ ಪಾತ್ರಗಳ ಮೂಲಕ ಮಿಂಚಿದ್ದೇ ಹೆಚ್ಚು. ಅವರನ್ನು ಸ್ಟಾರ್ ಎಂದು ಒಪ್ಪಿಕೊಳ್ಳೋಕೆ ಅನೇಕರಿಗೆ ಸಾಧ್ಯವಿಲ್ಲ. ಅಚ್ಚರಿ ಎಂದರೆ ಸೈಫ್ ಅಲಿ ಖಾನ್​ಗೂ ಈ ವಿಚಾರ ಮನವರಿಕೆ ಆಗಿದೆ. ತಾವು ಸ್ಟಾರ್ ಅಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ‘ಆದಿಪುರುಷ್’ ಸೋಲಿನ ಬಳಿಕ ಮೊದಲ ಬಾರಿಗೆ ಅವರು ಈ ಚಿತ್ರದ ಬಗ್ಗೆ ಹಾಗೂ ತಮ್ಮ ಸ್ಟಾರ್​ಡಂ ಬಗ್ಗೆ ಮಾತನಾಡಿದ್ದಾರೆ.

ಫಿಲ್ಮ್ ಕಂಪಾನಿಯನ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರು ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ದೊಡ್ಡ ಗಳಿಕೆ ಮಾಡುವಲ್ಲಿ ವಿಫಲವಾಗಿತ್ತು. ಇದನ್ನು ಸೈಫ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ. ‘ನಾನು ಏಕಾಂಗಿಯಾಗಿ ಯಾವ ಚಿತ್ರವನ್ನೂ ಹಿಟ್ ಮಾಡುವ ಶಕ್ತಿ ಹೊಂದಿಲ್ಲ’ ಎಂದಿದ್ದಾರೆ ಅವರು.

‘ವಾಸ್ತವವನ್ನು ಒಪ್ಪಿಕೊಳ್ಳೋದು ಖುಷಿ ನೀಡುತ್ತದೆ. ನಾನು ಎಂದಿಗೂ ನನ್ನನ್ನು ಸ್ಟಾರ್ ಎಂದು ಭಾವಿಸಿಲ್ಲ. ನಾನು ಸ್ಟಾರ್ ಆಗಲು ಇಷ್ಟಪಡುತ್ತೇನೆ. ಆದರೆ ಭ್ರಮೆಯನ್ನು ಹೊಂದಲು ಇಷ್ಟಪಡುವುದಿಲ್ಲ. ನನ್ನ ಪಾಲಕರು ದೊಡ್ಡ ಸ್ಟಾರ್​ಗಳಾಗಿದ್ದರು. ತುಂಬಾ ಸಾಮಾನ್ಯವಾಗಿ ಇರುತ್ತಿದ್ದರು’ ಎಂದಿದ್ದಾರೆ ಅವರು.

‘ಆದಿಪುರುಷ್ ಉದಾಹರಣೆ ತೆಗೆದುಕೊಂಡರೆ ಜನರು ರಿಸ್ಕ್ ಬಗ್ಗೆ ಮಾತನಾಡುತ್ತಾರೆ. ಯಾವುದೇ ಸಿನಿಮಾ ಸೋತಾಗ ನಮಗೆ ನಾವೇ ಒಂದು ಮಾತನ್ನು ಹೇಳಿಕೊಳ್ಳಬೇಕು. ಉತ್ತಮ ಪ್ರಯತ್ನ. ಆದರೆ, ಅದೃಷ್ಟ ಇರಲಿಲ್ಲ ಎಂದು ಮುಂದೆ ಸಾಗಬೇಕು’ ಎಂದಿದ್ದಾರೆ ಸೈಫ್. ‘ಆದಿಪುರುಷ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿದ್ದರು. ಅವರ ಗೆಟಪ್ ಬಗ್ಗೆ, ಅವರು ಸಾಕಿದ್ದ ಬಾವಲಿ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದರು.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾದಲ್ಲಿ ಆಯ್ತಾ ಅಪಘಾತ?

ಸೈಫ್ ಅಲಿ ಖಾನ್ ಅವರಿಗೆ ‘ಆದಿಪುರುಷ್’ ಬಳಿಕ ದಕ್ಷಿಣ ಭಾರತದಿಂದ ಹೆಚ್ಚು ಆಫರ್​ಗಳು ಬರುತ್ತಿವೆ. ಅವರು ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನೆಗೆಟಿವ್ ರೋಲ್​ ಬಂದಿದೆ. ಸೈಫ್ ಅಲಿ ಖಾನ್ ಅವರು ವೆಬ್​ ಸೀರಿಸ್​ಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us