‘15 ಲಕ್ಷ ಸಂಬಳ ಕೊಡಬೇಕು’; ಪ್ರವಾಹ ಸಂತ್ರಸ್ತರ ಬಳಿ ಕಷ್ಟ ಹೇಳಿಕೊಂಡ ಕಂಗನಾ

ಕುಲು-ಮನಾಲಿ ಪ್ರವಾಹದಿಂದಾಗಿ ಸಂತ್ರಸ್ತರಾದ ಜನರಿಗೆ ಕಂಗನಾ ರಣಾವತ್ ಅವರ ಪ್ರತಿಕ್ರಿಯೆ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರು ತಮ್ಮ ವ್ಯಾಪಾರದಲ್ಲಿನ ನಷ್ಟದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ವಿವಾದ ಸೃಷ್ಟಿಸಿದೆ. ಜುಲೈನಲ್ಲಿಯೂ ಇದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

‘15 ಲಕ್ಷ ಸಂಬಳ ಕೊಡಬೇಕು’; ಪ್ರವಾಹ ಸಂತ್ರಸ್ತರ ಬಳಿ ಕಷ್ಟ ಹೇಳಿಕೊಂಡ ಕಂಗನಾ
ಕಂಗನಾ

Updated on: Sep 20, 2025 | 8:40 AM

ಕುಲು ಮನಾಲಿ ಭಾಗದಲ್ಲಿ ಮಳೆಯಿಂದ ಸಾಕಷ್ಟು ಅವಾಂತರಗಳು ನಡೆದಿವೆ. ಆ ಭಾಗದ ನದಿ ಉಕ್ಕಿ ಹರಿದಿದ್ದು, ನದಿ ತಟದ ಮನೆಗಳು ನಾಶವಾಗಿವೆ. ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹೀಗಿರುವಾಗಲೇ ಬಿಜೆಪಿ ಪಕ್ಷದ ಮಂಡಿ ಸಂಸದೆ ಕಂಗನಾ (Kangana Ranaut) ಅವರು ಜನರಿಂದ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಅವರು ಪ್ರವಾಹ ಪೀಡಿತ ಭಾಗ ಆಗಮಿಸುತ್ತಿದ್ದಂತೆ ‘ಹೊರಟು ಹೋಗಿ’ ಎಂಬ ಕೂಗನ್ನು ಕೇಳಬೇಕಾಯಿತು. ಈ ವೇಳೆ ತಮಗೂ ನಷ್ಟ ಆಗಿದೆ ಎಂಬುದನ್ನು ಕಂಗನಾ ವಿವರಿಸಿದರು.

ಕಂಗನಾ ಬಳಿ ಮಾಧ್ಯಮದವರು ಸ್ವಲ್ಪ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದರು. ಇದರಿಂದ ಕಂಗನಾ ಭಯಗೊಂಡರು. ‘ನೀವು ನನ್ನ ಮೇಲೆ ಅಟ್ಯಾಕ್ ಮಾಡೋಕೆ ಬಂದಿದ್ದೀರಾ ಅಥವಾ ಪ್ರಶ್ನೆ ಮಾಡುತ್ತಿದ್ದೀರಾ’ ಎಂದು ಕಂಗನಾ ಅವರು ಕೇಳಿದರು. ಆ ಬಳಿಕ ಅವರು ತಮ್ಮ ಕಷ್ಟ ಹೇಳಿಕೊಂಡರು.

‘ನೀವು ನನ್ನ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಕೂಡ ಮನುಷ್ಯ. ನನಗೂ ಇಲ್ಲಿ ಮನೆ ಇದೆ, ರೆಸ್ಟೋರೆಂಟ್ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ 50 ರೂಪಾಯಿ ಬಿಸ್ನೆಸ್ ಮಾಡಿದೆ. ನಾನು ತಿಂಗಳಿಗೆ ಸಿಬ್ಬಂದಿಗೆ 15 ಲಕ್ಷ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ’ ಎಂದು ಕಂಗನಾ ಬೇಸರ ಮಾಡಿಕೊಂಡರು.

ಇದನ್ನೂ ಓದಿ
ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ ತನುಶ್ರೀ ದತ್ತಾ
ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ?
ಬದಲಾಗೋದೇ ಇಲ್ಲ ಅಕ್ಷಯ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
‘ಕಲ್ಕಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ

‘ನಾನು ಇಂಗ್ಲೆಂಡ್​ನ ಕ್ವೀನ್, ಇಲ್ಲಿನ ಸಂತ್ರಸ್ತರಿಗೆ ಏನೂ ಮಾಡುತ್ತಿಲ್ಲ ಎಂಬ ರೀತಿಯಲ್ಲಿ ನನ್ನ ಮೇಲೆ ಅಟ್ಯಾಕ್ ಮಾಡಬೇಡಿ. ನಾನು ಕೂಡ ನಿಮ್ಮಂತೆಯೇ’ ಎಂದು ಕಂಗನಾ ಅವರು ಹೇಳಿದರು. ಇದು ಅಲ್ಲಿನ ಜನರನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ: ಈಗ ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಪ್ರವಾಹ ಸಂತ್ರಸ್ತೆಯ ಪ್ರಶ್ನೆಗೆ ಮಳೆಯಲ್ಲೂ ಬೆವರಿದ ಕಂಗನಾ ರಣಾವತ್

ಜುಲೈ ತಿಂಗಳಲ್ಲೂ ಕಂಗನಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಸಹಾಯಕ್ಕಾಗಿ ಜನರು ಇವರ ಬಳಿ ಬಂದಾಗ, ‘ನನಗೆ ಹಣ ಬಿಡುಗಡೆ ಮಾಡಲು ಮಂತ್ರಿ ಹುದ್ದೆ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ತಾವು ರಾಜಕೀಯ ಅಂದರೆ ಅಂದುಕೊಂಡಿದ್ದೇ ಬೇರೆ ಮತ್ತು ಇಲ್ಲಾಗುತ್ತಿರುವುದೇ ಬೇರೆ ಎಂಬ ಪರಿಸ್ಥಿತಿ ಇದೆ ಎಂದು ಕಂಗನಾ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us