ನಟಿ ಮಲೈಕಾ ಅರೋರಾ ವಯಸ್ಸು 47. ಆದರೆ, ಫಿಟ್ನೆಸ್ ಹಾಗೂ ಹಾಟ್ನೆಸ್ ವಿಚಾರದಲ್ಲಿ ಯುವ ನಟಿಯರನ್ನೂ ಅವರು ನಾಚಿಸುತ್ತಾರೆ. ಇನ್ನೂ ಯಂಗ್ ನಟಿಯರಂತೆ ಕಾಣುವ ಅವರು, ನಟ ಅರ್ಜುನ್ ಕಪೂರ್ ಜತೆ ಸುತ್ತಾಟ ನಡೆಸುತ್ತಿದ್ದಾರೆ. ಆರಂಭದಲ್ಲಿ ಈ ವಿಚಾರವನ್ನು ಇಬ್ಬರೂ ಸೀಕ್ರೆಟ್ ಆಗಿ ಇಟ್ಟಿದ್ದರು. ಆದರೆ, ಈಗ ಅವರ ರಿಲೇಶನ್ಶಿಪ್ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇಬ್ಬರೂ ಯಾವುದೇ ಅಂಜಿಕೆ ಇಲ್ಲದೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮಲೈಕಾ ಯಾವ ರೀತಿಯ ಪುರಷರು ಹೆಚ್ಚು ಇಷ್ಟವಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಮಲೈಕಾ ಇತ್ತೀಚೆಗೆ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೆಳೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಅಚ್ಚರಿ ನೀಡಿದೆ. ಅದ್ಭುತವಾಗಿ ಕಿಸ್ ಮಾಡುವ ಪುರುಷರು ಎಂದರೆ ನನಗೆ ಇಷ್ಟ ಎಂದಿದ್ದಾರೆ ಅವರು.
‘ಮುಖ ಸ್ವಲ್ಪ ಒರಟಾಗಿರಬೇಕು. ಗಡ್ಡ ಇರಬೇಕು. ಸಂಪೂರ್ಣವಾಗಿ ಶೇವ್ ಮಾಡಿಕೊಂಡರೆ ಇಷ್ಟ ಆಗುವುದಿಲ್ಲ. ಯಾವ ಪುರುಷ ಅದ್ಭುತವಾಗಿ ಕಿಸ್ ಮಾಡುತ್ತಾನೋ ಅವರನ್ನು ನಾನು ಇಷ್ಟಪಡುತ್ತೇನೆ’ ಎಂದಿದ್ದಾರೆ ಮಲೈಕಾ.
ಅರ್ಜುನ್ ಕಪೂರ್ ಹಾಗೂ ಮಲೈಕಾ ಸಾಕಷ್ಟು ಬಾರಿ ಪಬ್ಲಿಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರೆ ಎನ್ನುವ ಮಾತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಕೂಡ ನಡೆದಿದೆ. ಆದರೆ, ಈ ಬಗ್ಗೆ ಮಲೈಕಾ ಹೇಳೋದೇ ಬೇರೆ. ‘ನಮ್ಮಿಬ್ಬರ ನಡುವೆ ಮದುವೆ ವಿಚಾರವೇ ಬಂದಿಲ್ಲ. ನಾವಿಬ್ಬರೂ ಪರಸ್ಪರ ನಮ್ಮ ಸಾಂಗತ್ಯವನ್ನು ಎಂಜಾಯ್ ಮಾಡುತ್ತಿದ್ದೇವೆ’ ಎಂದು ಹೇಳುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ.
ಟಾಪ್ ಐಟಂ ಡ್ಯಾನ್ಸರ್ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್ ಕಪೂರ್ಗೆ 35ರ ಪ್ರಾಯ. ಮಲೈಕಾಗೆ ಮದುವೆ ಆಗಿ ಒಂದು ಮಗು ಕೂಡ ಇದೆ. ನಟ, ನಿರ್ಮಾಪಕ ಅರ್ಬಾಜ್ ಖಾನ್ ಜೊತೆ ಮದುವೆ ಆಗಿದ್ದ ಮಲೈಕಾ ನಂತರ ವಿಚ್ಛೇದನ ಪಡೆದಿದ್ದರು. ಬಾಂದ್ರಾ ಸಮೀಪದಲ್ಲೇ ಅರ್ಜುನ್ ಕಪೂರ್ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕಾಗಿ ಅವರು 20 ಕೋಟಿ ರೂಪಾಯಿ ನೀಡಿದ್ದರು. ಇದು ಮಲೈಕಾ ಅರೋರ ಅವರ ಲಕ್ಸುರಿ ಮನೆ ಸಮೀಪವೇ ಇದೆ. ಈ ವಿಲ್ಲಾವನ್ನು ಮಲೈಕಾ ತುಂಬಾನೇ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್ ಮನೆ ಕೂಡ ಇದೇ ಭಾಗದಲ್ಲಿದೆ.
ಇದನ್ನೂ ಓದಿ: Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?
Malaika Arora: ಬಾತುಕೋಳಿಯಂತೆ ನಡೆದು ಟ್ರಾಲ್ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ
Published On - 2:12 pm, Thu, 23 September 21