ಕರಣ್ ಜೋಹರ್ (Karan Johar) ಎಂದಾಕ್ಷಣ ನೆನಪಾಗೋದು ಸ್ಟಾರ್ ಕಿಡ್ಗಳ ಮಕ್ಕಳು. ಸೆಲೆಬ್ರಿಟಿಗಳ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಕರಣ್ ಜೋಹರ್ ಸದಾ ಮುಂದಿರುತ್ತಾರೆ. ಅನನ್ಯಾ ಪಾಂಡೆ (Ananya Panday) ಸೇರಿದಂತೆ ಹಲವರಿಗೆ ಅವರು ಅವಕಾಶ ನೀಡಿದ್ದಾರೆ. ಇದರಿಂದ ಕರಣ್ ಅವರನ್ನು ಹಲವರು ಟೀಕೆ ಮಾಡಿದ್ದಾರೆ. ಈ ಮಧ್ಯೆ ಕರಣ್ ಜೋಹರ್ ಅವರು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ. ‘ಬಾಲಿವುಡ್ ಕಲಾವಿದರಲ್ಲಿ ಟ್ಯಾಲೆಂಟ್ ಸಿಕ್ಕಿಲ್ಲ’ ಎಂದು ನೇರ ನುಡಿಯಲ್ಲಿ ಹೇಳಿದ್ದಾರೆ. ಅವರು ಇದನ್ನು ತಮಾಷೆಗೆ ಹೇಳಿದ್ದೋ ಅಥವಾ ಈ ತಮಾಷೆಯ ಹಿಂದೆ ಗಂಭೀರತೆ ಇದೆಯೋ ಎಂಬ ವಿಚಾರದ ಬಗ್ಗೆ ಫ್ಯಾನ್ಸ್ಗೆ ಗೊಂದಲ ಮೂಡಿದೆ.
ಕರಣ್ ಜೋಹರ್ ಅವರು ‘ಕಾಫಿ ವಿತ್ ಕರಣ್’ ಶೋ ನಡೆಸಿಕೊಡುತ್ತಾರೆ. ಇದಕ್ಕೆ ಸ್ಟಾರ್ ನಟರು ಮತ್ತು ಅವರ ಮಕ್ಕಳನ್ನು ಕರೆತರುತ್ತಾರೆ ಎಂಬ ಆರೋಪವೂ ಇದೆ. ಇನ್ನು, ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್ನಲ್ಲಿ ಅವರು ದೊಡ್ಡ ದೊಡ್ಡ ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ನೀಡುತ್ತಾರೆ ಎಂಬ ದೂರು ಕೂಡ ಇದೆ. ಈ ಆರೋಪಗಳ ಬಗ್ಗೆ ಕರಣ್ ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ಅವರು ನೀಡಿದ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿದೆ.
ಅಮೇಜಾನ್ ಮಿನಿ ಟಿವಿಯಲ್ಲಿ ಬರುವ ‘ಕೇಸ್ ತೋ ಬಂತಾ ಹೈ’ ಶೋನಲ್ಲಿ ಕರಣ್ ಅತಿಥಿಯಾಗಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ರಿತೇಶ್ ದೇಶ್ಮುಖ್ ಅವರು ಕೇಳಿದ ಪ್ರಶ್ನೆಗೆ ಕರಣ್ ನೇರವಾಗಿ ಉತ್ತರಿಸಿದ್ದಾರೆ. ಕರಣ್ ಜೋಹರ್ ಅವರ ಉತ್ತರ ಕಂಡು ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
‘ನೀವು ಯಾವುದಾದರೂ ಕಲಾವಿದರನ್ನು ಆಯ್ಕೆ ಮಾಡಿದಾಗ ಲುಕ್ಗೆ ಮಾತ್ರ ಆದ್ಯತೆ ನೀಡುತ್ತೀರಾ’ ಎಂದು ಕರಣ್ಗೆ ರಿತೇಶ್ ಪ್ರಶ್ನೆ ಮಾಡಿದರು. ‘ನಾನು ಎಂಟರ್ಟೇನ್ಮೆಂಟ್ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಟ್ಯಾಲೆಂಟ್ಗಾಗೂ ಹುಡುಕಾಟ ನಡೆಸುತ್ತೇನೆ. ಆದರೆ, ಅದು ಈವರೆಗೆ ಸಿಕ್ಕಿಲ್ಲ’ ಎಂದಿದ್ದಾರೆ. ಈ ಮೂಲಕ ಬಾಲಿವುಡ್ ಕಲಾವಿದರಲ್ಲಿ ಟ್ಯಾಲೆಂಟ್ ಕಂಡಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
‘ಕೇಸ್ ತೋ ಬಂತಾ ಹೈ’ ಅನ್ನೋದು ಕಾಮಿಡಿ ಶೋ. ಕೋರ್ಟ್ ಮಾದರಿಯಲ್ಲೇ ಈ ಶೋ ನಡೆಯುತ್ತದೆ. ರಿತೇಶ್ ಅವರು ಡಿಫೆನ್ಸ್ ಲಾಯರ್ ರೀತಿಯಲ್ಲಿ ಕಾಣಿಸಿಕೊಂಡರೆ, ವರುಣ್ ಶರ್ಮಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕುಶಾ ಕಪಿಲ್ ಜಡ್ಜ್ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ ಡಾರ್ಲಿಂಗ್’; ಕರಣ್ ಜೋಹರ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ
ಕರಣ್ ಜೋಹರ್ ನಿರ್ಮಾಣದ ‘ಬ್ರಹ್ಮಾಸ್ತ್ರ’ ಸಿನಿಮಾ ಶುಕ್ರವಾರ (ಸೆಪ್ಟೆಂಬರ್ 9) ಬಿಡುಗಡೆ ಆಗಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ.
Published On - 7:34 am, Sat, 10 September 22