‘ನಾನು ನಿಮ್ಮ ಸಿನಿಮಾಗಳನ್ನು ನೋಡಿಯೇ ಇಲ್ಲ’; ‘ಅನಿಮಲ್’ ನಿರ್ದೇಶಕನ ಟೀಕೆಗೆ ಆಮಿರ್ ಪತ್ನಿಯ ಉತ್ತರ

ಆಮಿರ್ ಖಾನ್ ಅವರ ನಟನೆಯ ‘ದಿಲ್’ ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು ಸಂದೀಪ್. ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರು ರೇಪ್ ಮಾಡಿಯೇ ಬಿಟ್ಟರು ಎನ್ನುವ ರೀತಿಯ ದೃಶ್ಯ ಇತ್ತು. ಈ ದೃಶ್ಯವನ್ನು ಸಂದೀಪ್ ರೆಡ್ಡಿ ವಂಗ ಪ್ರಶ್ನೆ ಮಾಡಿದ್ದರು. ಇದಕ್ಕೂ ಕಿರಣ್ ರಾವ್ ಅವರು ಉತ್ತರ ನೀಡಿದ್ದಾರೆ.

‘ನಾನು ನಿಮ್ಮ ಸಿನಿಮಾಗಳನ್ನು ನೋಡಿಯೇ ಇಲ್ಲ’; ‘ಅನಿಮಲ್’ ನಿರ್ದೇಶಕನ ಟೀಕೆಗೆ ಆಮಿರ್ ಪತ್ನಿಯ ಉತ್ತರ
ಕಿರಣ್​, ಆಮಿರ್, ಸಂದೀಪ್
Edited By:

Updated on: Feb 06, 2024 | 9:04 AM

ನಿರ್ಮಾಪಕಿ ಹಾಗೂ ಆಮಿರ್ ಖಾನ್ (Aamir Khan) ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಇತ್ತೀಚೆಗೆ ಸುದ್ದಿ ಆಗಿದ್ದರು. ಅವರು ಕಳೆದ ನವೆಂಬರ್ ತಿಂಗಳಲ್ಲಿ ಸಿನಿಮಾಗಳಲ್ಲಿ ಸ್ತ್ರೀ ದ್ವೇಷದ ವಿಚಾರದ ಬಗ್ಗೆ ಮಾತನಾಡಿದ್ದರು. ಈ ವೇಳೆ ಅವರು ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಕಬೀರ್ ಸಿಂಗ್’ ಚಿತ್ರವನ್ನು ಟೀಕೆ ಮಾಡಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂದೀಪ್ ಅವರು ತಿರುಗೇಟು ನೀಡಿದ್ದರು. ಅವರ ಮಾತಿಗೆ ಕಿರಣ್ ರಾವ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸಂದೀಪ್ ನಿರ್ದೇಶನದ ಸಿನಿಮಾಗಳನ್ನು ನೋಡಿಯೇ ಇಲ್ಲ’ ಎಂದು ಹೇಳಿದ್ದಾರೆ.

‘ಸಂದೀಪ್ ರೆಡ್ಡಿ ವಂಗ ಅವರ ಚಿತ್ರಗಳ ಬಗ್ಗೆ ನಾನು ಎಂದಿಗೂ ಪ್ರತಿಕ್ರಿಯಿಸಿಲ್ಲ. ಏಕೆಂದರೆ ನಾನು ಅವರ ನಿರ್ದೇಶನದ ಸಿನಿಮಾಗಳನ್ನು ನಾನು ನೋಡಿಯೇ ಇಲ್ಲ. ಸಿನಿಮಾಗಳಲ್ಲಿ ಸ್ತ್ರೀದ್ವೇಷ ಇರುವ ಬಗ್ಗೆ ನಾನು ಆಗಾಗ ಮಾತನಾಡಿದ್ದೇನೆ. ಅವಕಾಶ ಸಿಕ್ಕಾಗ ವಿವಿಧ ವೇದಿಕೆಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಆದರೆ ನಾನು ಯಾವುದೇ ಸಿನಿಮಾಗಳ ಹೆಸರನ್ನು ತೆಗೆದುಕೊಂಡಿಲ್ಲ. ಇದು ಕೆಲವು ನಿರ್ದಿಷ್ಟ ಸಿನಿಮಾಗಳ ಬಗ್ಗೆ ಅಲ್ಲ. ನಾನು ಅವರದ್ದೇ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸಂದೀಪ್ ರೆಡ್ಡಿ ವಂಗ ಏಕೆ ಭಾವಿಸಿದ್ದಾರೆ ಎಂದು ಅವರನ್ನೇ ಕೇಳಬೇಕು. ನಾನು ಅವರ ಸಿನಿಮಾಗಳನ್ನು ನೋಡಿಯೇ ಇಲ್ಲ’ ಎಂದಿದ್ದಾರೆ ಕಿರಣ್ ರಾವ್.

ಆಮಿರ್ ಖಾನ್ ಬಗ್ಗೆ

ಆಮಿರ್ ಖಾನ್ ನಟನೆಯ ‘ದಿಲ್’ ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು ಸಂದೀಪ್ ರೆಡ್ಡಿ ವಂಗ. ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರು ರೇಪ್ ಮಾಡಿಯೇ ಬಿಟ್ಟರು ಎನ್ನುವ ರೀತಿಯ ದೃಶ್ಯ ಇತ್ತು. ಈ ದೃಶ್ಯವನ್ನು ಸಂದೀಪ್ ರೆಡ್ಡಿ ವಂಗ ಪ್ರಶ್ನೆ ಮಾಡಿದ್ದರು. ಇದಕ್ಕೂ ಕಿರಣ್ ರಾವ್ ಉತ್ತರ ನೀಡಿದ್ದಾರೆ. ‘ಬಹಳ ಕಡಿಮೆ ಜನರು ತಮ್ಮ ಕೆಲಸವನ್ನು ಹಿಂತಿರುಗಿ ನೋಡುತ್ತಾರೆ. ಅಲ್ಲಿ ತಪ್ಪು ಕಂಡಾಗ ಕ್ಷಮೆ ಕೇಳುತ್ತಾರೆ. ಈ ಸಾಲಿನಲ್ಲಿ ಆಮಿರ್ ಖಾನ್ ಇದ್ದಾರೆ’ ಎಂದಿದ್ದಾರೆ ಕಿರಣ್ ರಾವ್.

ಇದನ್ನೂ ಓದಿ: ‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ

ಸಂದೀಪ್ ಬಗ್ಗೆ ಟೀಕೆ..

ಸಂದೀಪ್ ರೆಡ್ಡಿ ನಿರ್ದೇಶನ ಮಾಡಿರುವ ‘ಅರ್ಜುನ್ ರೆಡ್ಡಿ’, ಈ ಚಿತ್ರದ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ ಹಾಗೂ ಇತ್ತೀಚೆಗೆ ರಿಲೀಸ್ ಆದ ‘ಅನಿಮಲ್’ ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಎದ್ದು ಕಾಣುತ್ತದೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ‘ಅನಿಮಲ್’ ಚಿತ್ರವು ಗೊತ್ತು ಗುರಿ ಇಲ್ಲದೆ ಸಾಗುತ್ತದೆ. ಈ ವಿಚಾರವನ್ನು ಅನೇಕರು ಟೀಕೆ ಮಾಡಿದ್ದಾರೆ. ಈ ಟೀಕೆಗಳನ್ನು ಸ್ವೀಕರಿಸಲು ಸಂದೀಪ್ ಸಿದ್ಧರಿಲ್ಲ. ಇದರ ಜೊತೆಗೆ ಅನೇಕರು ಅವರ ಸಿನಿಮಾಗಳನ್ನು ಹೊಗಳುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಪ್ರಭಾಸ್ ಜೊತೆ ಅವರು ‘ಸ್ಪಿರಿಟ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ‘ಅನಿಮಲ್ ಪಾರ್ಕ್’ ಸಿನಿಮಾ ಕೂಡ ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us