ಖ್ಯಾತಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಸಣ್ಣ ರಿಲೀಫ್ ಸಿಕ್ಕಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಜಾಮೀನು ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲಾ ಕೋರ್ಟ್ನಲ್ಲಿ ಅವರಿಗೆ ಬೇಲ್ (Jacqueline Fernandez Bail) ಸಿಕ್ಕಿದೆ. ವಿಚಾರಣೆ ಮುಗಿಸಿ ಹೊರಬಂದ ಅವರನ್ನು ಅನೇಕರು ಮುತ್ತಿಕೊಂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಪ್ರತಿಕ್ರಿಯೆ ಪಡೆಯಲು ಮತ್ತು ಅವರ ಫೋಟೋ, ವಿಡಿಯೋಗಳನ್ನು ಚಿತ್ರಿಸಲು ಮಾಧ್ಯಮದ ಕ್ಯಾಮೆರಾಗಳು ಮುಗಿಬಿದ್ದಿವೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು (Jacqueline Fernandez Viral Video) ನೋಡಿದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ ಎಂದು ಛಾಟಿ ಬೀಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಹಾಯಾಗಿ ಸಿನಿಮಾ ಮಾಡಿಕೊಂಡಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಕೇಶ್ ಚಂದ್ರಶೇಖರ್ ಸಹವಾಸದಿಂದ ಕಾನೂನಿನ ಸಂಕಷ್ಟ ಎದುರಾಗುವಂತಾಯಿತು. ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್ ಚಂದ್ರಶೇಖರ್ ಮೇಲಿದೆ. ಅವರ ಜೊತೆ ಆಪ್ತವಾಗಿದ್ದರು ಮತ್ತು ಅನೇಕ ಗಿಫ್ಟ್ಗಳನ್ನು ಪಡೆದಿದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಕೂಡ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ತನಿಖಾಧಿಕಾರಿಗಳು ಹಲವು ಬಾರಿ ಜಾಕ್ವೆಲಿನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನವೆಂಬರ್ 15ರಂದು ಅವರಿಗೆ ಜಾಮೀನು ಸಿಕ್ಕಿದೆ.
ತಮ್ಮ ಲೀಗಲ್ ಟೀಮ್ ಸದಸ್ಯರ ಜೊತೆ ನ್ಯಾಯಾಲಯದಿಂದ ಹೊರಬರುವಾಗ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ಮಾಧ್ಯಮದವರು ಸುತ್ತುವರಿಸಿದ್ದಾರೆ. ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ‘ಅವರಿಗೆ ಕನಿಷ್ಠ ಉಸಿರಾಡಲು ಬಿಡಿ..’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಜಾಕ್ವಲಿನ್ ಫರ್ನಾಂಡಿಸ್ ವಾದ ಮಂಡಿಸುತ್ತಿದ್ದಾರೆ.
#WATCH | Jacqueline Fernandez leaves from Delhi’s Patiala House Court after getting bail in Rs 200 crores money laundering case involving alleged conman Sukesh Chandrashekhar pic.twitter.com/d1qjSaLZeg
— ANI (@ANI) November 15, 2022
ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ತುಂಬ ಆಪ್ತವಾಗಿರುವ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು. ಸುಕೇಶ್ ಅವರಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಗಳನ್ನು ಜಾಕ್ವೆಲಿನ್ ಪಡೆದುಕೊಂಡಿದ್ದರು. ಸುಕೇಶ್ ನಡೆಸುವ ವ್ಯವಹಾರಗಳ ಬಗ್ಗೆ ನಟಿಗೆ ಮಾಹಿತಿ ಇತ್ತು ಎಂಬ ಆರೋಪ ಕೂಡ ಇದೆ. ಅಂತಿಮವಾಗಿ ಕೇಸ್ ಏನಾಗಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬಾಲಿವುಡ್ನಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡದ ಪ್ರೇಕ್ಷಕರಿಗೂ ಅವರು ಪರಿಚಿತರಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್ಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.