ಸೆಲೆಬ್ರಿಟಿಗಳಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಅವಕಾಶ ಸಿಕ್ಕರೆ ಸಾಕು, ವಿವಿಧ ರೀತಿಯ ಬಟ್ಟೆ ಹಾಕಿ ಮಿಂಚುತ್ತಾರೆ. ಕೆಲ ನಟಿಯರು ಹಾಕುವ ಡ್ರೆಸ್ ಎಲ್ಲರ ಗಮನ ಸೆಳೆಯುತ್ತದೆ. ಆದರೆ, ಕೆಲವೊಮ್ಮೆ ಅವರಿಗೆ ತಾವು ಹಾಕುವ ಬಟ್ಟೆಯಿಂದಲೇ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ನಟಿ ಜಾನ್ವಿ ಕಪೂರ್ (Janhvi Kapoor) ಅವರಿಗೂ ಇದೇ ರೀತಿ ಆಗಿದೆ. ಇತ್ತೀಚೆಗೆ ಅವರು ಕೆಂಪುಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ಬಾಲಿವುಡ್ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಆದಾಗ್ಯೂ ಅವರು ಸುಮ್ಮನೆ ಕುಳಿತಿಲ್ಲ. ಹೊಸಹೊಸ ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಈ ಮಧ್ಯೆ ಹಲವು ಅವಾರ್ಡ್ ಫಂಕ್ಷನ್ಗಳಿಗೆ ಹಾಜರಿ ಹಾಕುತ್ತಿದ್ದಾರೆ. ಇತ್ತೀಚೆಗೆ ಅವರು ಫ್ಯಾಷನ್ ಇವೆಂಟ್ ಒಂದಕ್ಕೆ ತೆರಳಿದ್ದರು. ರೆಡ್ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ಈ ವೇಳೆ ಟೈಟ್ ಗೌನ್ ಧರಿಸಿ ಬಂದಿದ್ದರು.
ಜಾನ್ವಿ ಕಪೂರ್ ಅವರ ಗೌನ್ ತುಂಬಾನೇ ಉದ್ದ ಇತ್ತು. ಹೀಗಾಗಿ ಒಂದಷ್ಟು ಭಾಗ ನೆಲಕ್ಕೆ ಅಲೆಯುತ್ತಿತ್ತು. ಹೀಗಾಗಿ, ಅವರ ಡ್ರೆಸ್ ಕಾಲಿಗೆ ಸಿಗುತ್ತಿತ್ತು. ಇದರಿಂದ ಅವರು ಬೀಳುವವರಾಗಿದ್ದರು. ಆದರೆ, ಹೇಗೋ ಸುಧಾರಿಸಿಕೊಂಡರು. ಇದು ಅವರಿಗೆ ಮುಜುಗರ ತಂದಿದೆ. ಅನೇಕರು ಅವರ ಡ್ರೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ‘ಬಟ್ಟೆಯನ್ನು ಮಾನ ಮುಚ್ಚಲು ಹಾಕಿಕೊಳ್ಳಬೇಕು. ಈ ರೀತಿ ಕಷ್ಟ ಪಡೋಕೆ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅವರ ಬಟ್ಟೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡ ಜಾನ್ವಿ ಕಪೂರ್? ಸ್ಟಾರ್ ಕಿಡ್ಗೆ ಜೊತೆಯಾದ ನಟಿ
ಜಾನ್ವಿ ಕಪೂರ್ ಅವರು ಸದ್ಯ ಜೂನಿಯರ್ ಎನ್ಟಿಆರ್ ಅವರ 30ನೇ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಲ್ಲದೆ, ಇನ್ನೂ ಹಲವು ಸಿನಿಮಾಗಳು ಅವರನ್ನು ಹುಡುಕಿ ಬರುತ್ತಿದೆ. ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೋಲು ಕಂಡಿತು. ಸದ್ಯ ಅವರು ಹೊಸ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಅಖಿಲ್ಗೆ ನಾಯಕಿ ಆಗಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ