ಭಾರಿ ಪ್ರಚಾರ ಮಾಡಿದ್ರೂ ಜಾನ್ವಿ ಹೊಸ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು?

|

Updated on: May 31, 2024 | 10:53 PM

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಚಿತ್ರದ ಪ್ರಚಾರಕ್ಕಾಗಿ ನಟಿ ಜಾನ್ವಿ ಕಪೂರ್​ ಅವರು ಕ್ರಿಕೆಟ್​ ಥೀಮ್​ನ ಕಾಸ್ಟ್ಯೂಮ್​ಗಳನ್ನು ಧರಿಸಿ ಬಂದಿದ್ದರು. ಅವರ ಫೋಟೋಗಳು ವೈರಲ್​ ಆಗಿದ್ದವು. ಈ ಸಿನಿಮಾದ ಪ್ರಚಾರಕ್ಕಾಗಿ ಅವರು ಸಖತ್​ ಶ್ರಮಪಟ್ಟಿದ್ದರು. ಮೇ 31ರಂದು ಈ ಚಿತ್ರ ರಿಲೀಸ್​ ಆಗಿದ್ದು, ಮೊದಲ ದಿನ ಎಷ್ಟು ಕಲೆಕ್ಷನ್​ ಆಗಿರಬಹುದು ಎಂಬ ಅಂದಾಜು ಸಿಕ್ಕಿದೆ.

ಭಾರಿ ಪ್ರಚಾರ ಮಾಡಿದ್ರೂ ಜಾನ್ವಿ ಹೊಸ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು?
ರಾಜ್​ಕುಮಾರ್​ ರಾವ್​, ಜಾನ್ವಿ ಕಪೂರ್​
Follow us on

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ನಟಿ ಶ್ರೀದೇವಿ ಪುತ್ರಿ ಆಗಿದ್ದರೂ ಕೂಡ ಜಾನ್ವಿ ಕಪೂರ್​ ಅವರಿಗೆ ದೊಡ್ಡ ಗೆಲುವು ಸಿಗುವುದು ಬಾಕಿ ಇದೆ. ಈಗ ಅವರು ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ (Mr and Mrs Mahi) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಾಗಿ ಜಾನ್ವಿ ಕಪೂರ್​ ಅವರು ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದಾರೆ. ಮೇ 31ರಂದು ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಬಿಡುಗಡೆ ಆಗಿದೆ. ಮೊದಲ ದಿನದ ಕಲೆಕ್ಷನ್​ (Box Office Collection) ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಅಂದಾಜು 7 ಕೋಟಿ ರೂಪಾಯಿ ಚಾಚಿಕೊಂಡಿದೆ ಎನ್ನಲಾಗಿದೆ.

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದಲ್ಲಿ ಜಾನ್ವಿ ಕಪೂರ್​ ಮತ್ತು ರಾಜ್​ಕುಮಾರ್​ ರಾವ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕ್ರಿಕೆಟ್​ ಕುರಿತಾದ ಕಥೆ ಇದೆ. ಹಾಗಾಗಿ ಜಾನ್ವಿ ಕಪೂರ್​ ಅವರು ಇತ್ತೀಚೆಗೆ ನಡೆದ ಹಲವು ಐಪಿಎಲ್​ ಪಂದ್ಯಗಳಿಗೆ ತೆರಳಿದ್ದರು. ಆ ಮೂಲಕ ತಮ್ಮ ಸಿನಿಮಾಗೆ ಪ್ರಚಾರ ನೀಡಿದ್ದರು. ಅದರ ಫಲವಾಗಿ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾಗೆ ಸಾಧಾರಣ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: ‘ಚಿಕ್ಕವಳಿದ್ದಾಗಲೇ ಅಶ್ಲೀಲ ವೆಬ್​ಸೈಟ್​ಗೆ ನನ್ನ ಫೋಟೋ ಹಾಕಿದ್ರು’: ಜಾನ್ವಿ ಕಪೂರ್​ ಬೇಸರ

ಐಪಿಎಲ್​ ಈಗತಾನೇ ಮುಗಿದಿದೆ. ಎಲ್ಲರೂ ಕ್ರಿಕೆಟ್​ನ ಗುಂಗಿನಲ್ಲಿ ಇರುವಾಗಲೇ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾ ಬಿಡುಗಡೆ ಆಗಿದೆ. ಕ್ರಿಕೆಟ್​ ಕುರಿತ ಕಹಾನಿ ಇರುವುದರಿಂದ ಈ ಚಿತ್ರದ ಬಿಡುಗಡೆ ಇದು ಸೂಕ್ತ ಸಮಯ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಬಹುತೇಕ ಕಡೆಗಳಲ್ಲಿ ಲೋಕಸಭಾ ಎಲೆಕ್ಷನ್​ ಕೂಡ ಮುಗಿದಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇದೆ.

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾಗೆ ಮೊದಲ ದಿನವೇ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಮರ್ಶೆ ಹಂಚಿಕೊಂಡ ಅನೇಕರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಆಗಿದೆ. ಆದ್ದರಿಂದ ವೀಕೆಂಡ್​ನಲ್ಲಿ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಜಾನ್ವಿ ಕಪೂರ್​ ಮತ್ತು ರಾಜ್​ಕುಮಾರ್​ ರಾವ್​ ಅವರ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಜಾನ್ವಿ ಕಪೂರ್​ ಅವರು ಕ್ರಿಕೆಟ್​ ಥೀಮ್​ನ ಬಟ್ಟೆಗಳನ್ನು ಧರಿಸಿ ಕೂಡ ಬಂದಿದ್ದರು. ಆ ಫೋಟೋಗಳು ವೈರಲ್​ ಆಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.