Jawan Movie Song: ಸಾವಿರ ಹುಡುಗಿಯರ ಜೊತೆ ಶಾರುಖ್​ ಖಾನ್​ ಡ್ಯಾನ್ಸ್​; 15 ಕೋಟಿ ರೂ. ಬಜೆಟ್​ನಲ್ಲಿ ‘ಜವಾನ್​’ ಸಾಂಗ್​

Shah Rukh Khan: ಆಗಸ್ಟ್​ ಮೊದಲ ವಾರದಲ್ಲಿ ‘ಜವಾನ್’ ಚಿತ್ರದ ಫಸ್ಟ್​ ಸಾಂಗ್​ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಹಾಡಿನಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಹುಡುಗಿಯರು ಡ್ಯಾನ್ಸ್​ ಮಾಡಿದ್ದಾರೆ.

Jawan Movie Song: ಸಾವಿರ ಹುಡುಗಿಯರ ಜೊತೆ ಶಾರುಖ್​ ಖಾನ್​ ಡ್ಯಾನ್ಸ್​; 15 ಕೋಟಿ ರೂ. ಬಜೆಟ್​ನಲ್ಲಿ ‘ಜವಾನ್​’ ಸಾಂಗ್​
ಶಾರುಖ್​ ಖಾನ್​

Updated on: Jul 27, 2023 | 11:11 AM

ನಟ ಶಾರುಖ್​ ಖಾನ್​ (Shah Rukh Khan) ಅವರ ಅಭಿಮಾನಿಗಳ ಪೂರ್ತಿ ಗಮನ ಈಗ ‘ಜವಾನ್​’ ಸಿನಿಮಾದ ಮೇಲಿದೆ. ಈ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಚಿತ್ರತಂಡದಿಂದ ಬಿಡುಗಡೆ ಆಗುತ್ತಿರುವ ಪ್ರತಿ ಪೋಸ್ಟರ್​ಗಳು ಕೌತುಕ ಸೃಷ್ಟಿಸುತ್ತಿವೆ. ಈಗಾಗಲೇ ಪ್ರಿವ್ಯೂ ನೋಡಿದ ಪ್ರೇಕ್ಷಕರು ವಾವ್​ ಎಂದಿದ್ದಾರೆ. ಈಗ ‘ಜವಾನ್​’ (Jawan Movie) ಸಿನಿಮಾದ ಮೊದಲ ಸಾಂಗ್​ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ‘ಜಿಂದಾ ಬಂದಾ..’ ಎಂಬ ಈ ಹಾಡಿನ ರಿಲೀಸ್​ಗೂ ಮುನ್ನವೇ ಒಂದಷ್ಟು ಇಂಟರೆಸ್ಟಿಂಗ್​ ಸುದ್ದಿಗಳು ಹರಿದಾಡುತ್ತಿವೆ. ಈ ಹಾಡಿಗೆ ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಶಾರುಖ್​ ಖಾನ್​ ನಟನೆಯ ಸಿನಿಮಾ ಎಂದರೆ ಅದ್ದೂರಿಯಾಗಿ ಇರುತ್ತದೆ. ‘ಪಠಾಣ್​’ ಸಿನಿಮಾ ಗೆದ್ದ ಬಳಿಕ ಅವರ ಸಿನಿಮಾಗಳ ಮಾರುಕಟ್ಟೆ ಕೂಡ ವಿಸ್ತಾರ ಆಗಿದೆ. ಈಗ ‘ಜವಾನ್​’ ಸಿನಿಮಾವನ್ನು ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಅದಕ್ಕೆ ‘ಜಿಂದಾ ಬಂದಾ..’ ಗೀತೆಯೇ ಸಾಕ್ಷಿ. ಈ ಹಾಡಿನಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಹುಡುಗಿಯರು ಡ್ಯಾನ್ಸ್​ ಮಾಡಿದ್ದಾರೆ. ಹೈದರಾಬಾದ್​, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ನಗರಗಳ ಡ್ಯಾನ್ಸರ್​ಗಳು ಇದರಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: Jawan Movie: ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ ನಟಿಸಿದ್ದಕ್ಕೆ ಸಿಕ್ತು ಬಲವಾದ ಸಾಕ್ಷಿ; ಸ್ಟಾರ್​ ನಟನ ಸಂಭಾವನೆ ಎಷ್ಟು?

ಆಗಸ್ಟ್​ ಮೊದಲ ವಾರದಲ್ಲಿ ‘ಜವಾನ್’ ಚಿತ್ರದ ಫಸ್ಟ್​ ಸಾಂಗ್​ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ರಿದ್ಧಿ ಡೋಗ್ರಾ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಸಿನಿಮಾಗೆ ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಸೂಪರ್​ ಹಿಟ್​ ಆದರೆ ಚಿತ್ರದ ಕಲೆಕ್ಷನ್​ಗೆ ಬಹಳ ಅನುಕೂಲ ಆಗಲಿದೆ. ಆ ಹಿನ್ನೆಲೆಯಲ್ಲಿ ಅಭಿಮಾನಿಗಳು ಮೊದಲ ಸಾಂಗ್​ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Jawan Poster: ವಿಜಯ್​ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ ನೀಡಿದ ‘ಜವಾನ್​’ ಚಿತ್ರತಂಡ; ಹೊಸ ಪೋಸ್ಟರ್​ ಬಿಡುಗಡೆ

ಶಾರುಖ್​ ಖಾನ್​ ಅವರಿಗೆ ‘ಜವಾನ್​’ ಸಿನಿಮಾದಲ್ಲಿ ಹಲವು ಶೇಡ್​ನ ಪಾತ್ರ ಇದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ಪ್ರಿವ್ಯೂ ವಿಡಿಯೋದಲ್ಲಿ ಅವರು ಬೋಳು ತಲೆಯ ಗೆಟಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅತಿಥಿ ಪಾತ್ರದಲ್ಲಿ ದಳಪತಿ ವಿಜಯ್​ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us