ಯಾವುದೇ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆದರೂ ಅದನ್ನು ಕೆಲವರು ಜಾಹೀರಾತಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ದೆಹಲಿ ಪೊಲೀಸರು ಈ ವಿಚಾರದಲ್ಲಿ ಮುಂದಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ದೃಶ್ಯ ಹಾಗೂ ಪೋಸ್ಟರ್ ಬಳಕೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಈಗ ಶಾರುಖ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಜವಾನ್’ ಚಿತ್ರದ (Jawan Movie) ಪೋಸ್ಟರ್ ಬಳಕೆ ಮಾಡಿಕೊಂಡು ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ.
ದೆಹಲಿ ಪೊಲೀಸ್ ಟ್ವಿಟರ್ ಖಾತೆಯಿಂದ ಪೋಸ್ಟ್ ಒಂದನ್ನು ಮಾಡಲಾಗಿದೆ. ಶಾರುಖ್ ಖಾನ್ ಮುಖಕ್ಕೆ ಬ್ಯಾಂಡೇಜ್ ಸುತ್ತಿರೋ ಫೋಟೋ ಇದರಲ್ಲಿದೆ. ‘ಸಣ್ಣವರಾಗಿರಲಿ, ಯುವಕರಾಗಿರಲಿ ಅಥವಾ ದೊಡ್ಡವರೇ ಆಗಿರಲಿ ಹೆಲ್ಮೆಟ್ ಜೀವ ಉಳಿಸುತ್ತದೆ’ ಎಂದು ಬರೆಯಲಾಗಿದೆ. ಈ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.
जवान हो या बूढ़े,टू व्हीलर पर बैठने से पहले, हेलमेट कभी न भूलें।#Jawan#RoadSafety pic.twitter.com/tbCf83QlX5
— UP POLICE (@Uppolice) September 9, 2023
BACHCHA, BADA YA JAWAN,
HELMET BACHA SAKTA HAI JAAN!#RoadSafety pic.twitter.com/SAHZpoyjl5— Delhi Police (@DelhiPolice) September 10, 2023
ಉತ್ತರ ಪ್ರದೇಶ ಪೊಲೀಸರು ಕೂಡ ‘ಜವಾನ್’ ಪೋಸ್ಟರ್ ಬಳಕೆ ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ತಲೆಗೆ ಬ್ಯಾಂಡೇಜ್ ಕಟ್ಟಿರುವ ಫೋಟೋ ಒಂದು ಕಡೆ ಇದ್ದರೆ ಮತ್ತೊಂದು ಕಡೆ ಹೆಲ್ಮೆಟ್ ಫೋಟೋ ಇದೆ. ‘ಈ ರೀತಿ ಬ್ಯಾಂಡೇಜ್ ಕಟ್ಟಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಎಂದರೆ ಹೆಲ್ಮೆಟ್ ಧರಿಸಿ’ ಎಂಬರ್ಥದಲ್ಲಿ ಉತ್ತರ ಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟರ್ ವೈರಲ್ ಆಗುತ್ತಿದೆ.
‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಶಾರುಖ್ ಖಾನ್ ಓರ್ವ ಸೂಪರ್ ಸ್ಟಾರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾನುವಾರ (ಸೆಪ್ಟೆಂಬರ್ 10) ಈ ಚಿತ್ರ 80+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಭಾರತದ ಗಳಿಕೆ 287 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಸಿನಿಮಾ 500+ ಕೋಟಿ ರೂಪಾಯಿ ಬಾಚಿಕೊಂಡಿದೆ.
ಇದನ್ನೂ ಓದಿ: ಭಾನುವಾರ ಒಂದೇ ದಿನ 82 ಕೋಟಿ ರೂಪಾಯಿ ಗಳಿಸಿದ ‘ಜವಾನ್’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?
‘ಜವಾನ್’ ಸಿನಿಮಾ ಮೂಲಕ ತಮಿಳು ನಿರ್ದೇಶಕ ಅಟ್ಲಿ ಅವರು ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅವರು ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಕಂಡಿದ್ದಾರೆ. ಶಾರುಖ್ ಖಾನ್ ಅವರು ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಸದ್ಯ ಅಭಿಮಾನಿಗಳು ಈ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ