ಅದಿತಿ ರಾವ್​ ಹೈದರಿ-ಸಿದ್ದಾರ್ಥ್​ ಲವ್​ ಸುದ್ದಿಗೆ ಇನ್ನೊಂದು ಸಾಕ್ಷಿ; ಫೋಟೋ ವೈರಲ್​

Aditi Rao Hydari Siddharth Dating: ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಒಟ್ಟಿಗೆ ಕಾಣಿಸಿಕೊಂಡಾಗ ಪಾಪರಾಜಿಗಳು ‘ಸುಂದರ ಜೋಡಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕೆ ನಗುವಿನ ಮೂಲಕ ಅದಿತಿ ಪ್ರತಿಕ್ರಿಯೆ ನೀಡಿದ್ದಾರೆ.

ಅದಿತಿ ರಾವ್​ ಹೈದರಿ-ಸಿದ್ದಾರ್ಥ್​ ಲವ್​ ಸುದ್ದಿಗೆ ಇನ್ನೊಂದು ಸಾಕ್ಷಿ; ಫೋಟೋ ವೈರಲ್​
ಅದಿತಿ ರಾವ್ ಹೈದರಿ, ಸಿದ್ದಾರ್ಥ್

Updated on: Apr 08, 2023 | 7:15 AM

ನಟಿ ಅದಿತಿ ರಾವ್​ ಹೈದರಿ (Aditi Rao Hydari) ಅವರು ಸಿನಿಮಾ ಮತ್ತು ವೆಬ್​ ಸಿರೀಸ್​ನಲ್ಲಿ ಬ್ಯುಸಿ ಆಗಿದ್ದಾರೆ. ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಪ್ರೀತಿ-ಪ್ರೇಮಕ್ಕೂ ಸಮಯ ನೀಡುತ್ತಾರೆ. ಖ್ಯಾತ ನಟ ಸಿದ್ದಾರ್ಥ್​ (Siddharth) ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅನೇಕ ಸಂದರ್ಭದಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ತಮ್ಮಿಬ್ಬರ ಲವ್​ ಸ್ಟೋರಿ (Aditi Rao Hydari Love story) ಕುರಿತು ಅವರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇನ್ನು ಅದಿತಿ ರಾವ್​ ಹೈದರಿ ಅವರ ಇನ್​ಸ್ಟಾಗ್ರಾಮ್​ ಖಾತೆ ನೋಡಿದರೆ ಕೆಲವು ಫೋಟೋಗಳು ರಾರಾಜಿಸುತ್ತವೆ. ಸಿದ್ದಾರ್ಥ್​ ಜೊತೆಗಿನ ಫೋಟೋವನ್ನು ಹಂಚಿಕೊಳ್ಳಲು ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಇತ್ತೀಚೆಗೆ ಅವರು ಮತ್ತೊಂದು ಹೊಸ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸಿದ್ದಾರ್ಥ್​ ಮಾತ್ರವಲ್ಲದೇ ಅವರ ಸ್ನೇಹಿತರ ಗುಂಪು ಕೂಡ ಇದೆ.

ದಿನದಿನಕ್ಕೂ ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ ನಡುವಿನ ಆಪ್ತತೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ‘ಜ್ಯುಬಿಲಿ’ ವೆಬ್​ ಸರಣಿಯ ಪ್ರೀಮಿಯರ್​ ಶೋ ನಡೆಯಿತು. ಏಪ್ರಿಲ್ 7ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ರಿಲೀಸ್ ಆಗಿರುವ ಈ ವೆಬ್​ ಸಿರೀಸ್​ನಲ್ಲಿ ಅದಿತಿ ರಾವ್​ ಹೈದರಿ ನಟಿಸಿದ್ದಾರೆ. ಹಾಗಾಗಿ ಪ್ರೀಮಿಯರ್​ ಶೋಗೆ ಅವರ ಜೊತೆ ಸಿದ್ದಾರ್ಥ್​ ಕೂಡ ಆಗಮಿಸಿದ್ದರು.

ಇದನ್ನೂ ಓದಿ
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಜ್ಯುಬಿಲಿ’ ಪ್ರೀಮಿಯರ್​ ಶೋನಲ್ಲಿ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ಜೊತೆಯಾಗಿ ಕಾಣಿಸಿಕೊಂಡಾಗ ಪಾಪರಾಜಿಗಳು ‘ಸುಂದರ ಜೋಡಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕೆ ನಗುವಿನ ಮೂಲಕ ಅದಿತಿ ರಾವ್​ ಹೈದರಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮಿಬ್ಬರ ಪ್ರೀತಿಯ ಬಗ್ಗೆ ಇವರು ನೇರವಾಗಿ ಮಾತನಾಡದೇ ಇರಬಹುದು. ಹಾಗಂತ ಡೇಟಿಂಗ್​ ವಿಚಾರವನ್ನು ಅಲ್ಲಗಳೆದಿಲ್ಲ ಕೂಡ.

‘ಜ್ಯುಬಿಲಿ’ ಪ್ರೀಮಿಯರ್​ ಶೋ ಮುಗಿದ ಬಳಿಕ ಸಿದ್ದಾರ್ಥ್​ ಮತ್ತು ಅವರ ಸ್ನೇಹಿತರ ಗುಂಪಿನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗೆ ಅದಿತಿ ರಾವ್​ ಹೈದರಿ ಆಕರ್ಷಕ ಕ್ಯಾಪ್ಷನ್​ ನೀಡಿದ್ದಾರೆ. ‘ಇದು ನಾವು.. ಹೆಚ್ಚು ಪ್ರೀತಿ ಪಾತ್ರರು. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವು ಕೂಡ ನನ್ನನ್ನು ಪ್ರೀತಿಸುತ್ತೀರಿ ಎಂಬುದು ನನಗೆ ತಿಳಿದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಹೃದಯದ ರಾಜಕುಮಾರಿ’; ಅದಿತಿ ರಾವ್​ ಹೈದರಿಯನ್ನು ಪ್ರೀತಿಯಿಂದ ಕರೆದ ನಟ ಸಿದ್ದಾರ್ಥ್

ಈ ಹಿಂದೆ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ಒಟ್ಟಾಗಿ ಊಟ ಮಾಡಲು ತೆರಳಿದ್ದರು. ನಂತರ ‘ಟಮ್​ ಟಮ್​..’ ಹಾಡಿಗೆ ರೀಲ್ಸ್​ ಮಾಡಿ ಎಲ್ಲರ ಕಣ್ಣು ಕುಕ್ಕಿದ್ದರು. ಸಮುದ್ರದ ದಡದಲ್ಲಿ ಇಬ್ಬರೂ ಖುಷಿಯಾಗಿ ಕಾಲ ಕಳೆದಿದ್ದ ಫೋಟೋ ಕೂಡ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us