Aditi Rao Hydari: ಅದಿತಿ-ಸಿದ್ದಾರ್ಥ್ ನಡುವಿನ ಪ್ರೇಮಕ್ಕೆ ಸಿಕ್ತು ಹೊಸ ಸಾಕ್ಷಿ; ದಿನದಿನವೂ ಹೆಚ್ಚುತ್ತಿದೆ ಆಪ್ತತೆ
Siddharth | Viral Video: ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರು ಬಹುಬೇಡಿಕೆಯ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಮಾತ್ರವಲ್ಲದೇ ಅವರು ದಕ್ಷಿಣ ಭಾರತದಲ್ಲೂ ಫೇಮಸ್ ಆಗಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ನಲ್ಲಿ ನಟಿಸುವ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕಂತೂ ಅವರ ವೃತ್ತಿಜೀವನ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ ನಡುವೆ ಅವರ ಲವ್ ಸ್ಟೋರಿ ಕೂಡ ಹೆಚ್ಚು ಸುದ್ದಿ ಆಗುತ್ತಿದೆ. ಹೌದು, ನಟ ಸಿದ್ದಾರ್ಥ್ (Siddharth) ಜೊತೆ ಅದಿತಿ ರಾವ್ ಹೈದರಿ ಅವರು ಡೇಟಿಂಗ್ (Dating) ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಸಂಗತಿಗಳು ಎದುರಾಗುತ್ತಿವೆ. ಆದರೆ ಈ ಬಗ್ಗೆ ಪ್ರಯಣ ಪಕ್ಷಿಗಳು ಬಹಿರಂಗವಾಗಿ ಮಾತನಾಡಿಲ್ಲ. ಈಗ ಅವರಿಬ್ಬರ ಒಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ‘ಟಮ್ ಟಮ್..’ ಹಾಡು ಕಿವಿಗೆ ಬೀಳುತ್ತದೆ. ಪ್ರತಿಯೊಬ್ಬರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಫೇಮಸ್ ಆಗಿದೆ ಈ ತಮಿಳು ಗೀತೆ. ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಸಹ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಸಿದ್ದಾರ್ಥ್ ಮತ್ತು ಅದಿತಿ ರಾವ್ ಹೈದರಿ.
ಇದನ್ನೂ ಓದಿ: ‘ಹೃದಯದ ರಾಜಕುಮಾರಿ’; ಅದಿತಿ ರಾವ್ ಹೈದರಿಯನ್ನು ಪ್ರೀತಿಯಿಂದ ಕರೆದ ನಟ ಸಿದ್ದಾರ್ಥ್
ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರು ‘ಟಮ್ ಟಮ್..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ. ದಿಯಾ ಮಿರ್ಜಾ, ಫರ್ಹಾ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ನಟಿ ಅದಿತಿ ರಾವ್ ಜತೆ ತಮಿಳು ನಟ ಸಿದ್ದಾರ್ಥ್ ಡೇಟಿಂಗ್? ಮುಂಬೈನಲ್ಲಿ ಸುತ್ತಾಟ
ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಈ ಹಿಂದೆ ಅವರಿಬ್ಬರು ಬರ್ತ್ಡೇ ಪ್ರಯುಕ್ತ ಪರಸ್ಪರ ವಿಶ್ ಮಾಡಿಕೊಂಡಿದ್ದು ಗಮನ ಸೆಳೆದಿತ್ತು. ಸಿದ್ದಾರ್ಥ್ ಅವರು ‘ಹೃದಯದ ರಾಜಕುಮಾರಿ’ ಎಂಬ ಕ್ಯಾಪ್ಷನ್ನೊಂದಿಗೆ ಅದಿತಿ ಫೋಟೋ ಹಂಚಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಇಬ್ಬರ ಲವ್ ಸ್ಟೋರಿ ಹೆಚ್ಚು ಸುದ್ದಿ ಆಗುತ್ತಿದೆ.
View this post on Instagram
ಕೆಲವೇ ದಿನಗಳ ಹಿಂದೆ ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರು ಒಟ್ಟಾಗಿ ಊಟ ಮಾಡಲು ತೆರಳಿದ್ದರು. ಈಗ ರೀಲ್ಸ್ ಮಾಡಿ ಕಣ್ಣು ಕುಕ್ಕುತ್ತಿದ್ದಾರೆ. ಸಮುದ್ರದ ದಡದಲ್ಲಿ ಇಬ್ಬರೂ ಖುಷಿಯಾಗಿ ಕಾಲ ಕಳೆದ ಫೋಟೋವನ್ನು ಅದಿತಿ ರಾವ್ ಹೈದರಿ ಅವರು ಪೋಸ್ಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.