ಆಮಿರ್​ ಖಾನ್​ ಮಗನ ಮೊದಲ ಸಿನಿಮಾಗೆ ವಿಘ್ನ; ತಕರಾರು ತೆಗೆದ ವಿಎಚ್​ಪಿ

|

Updated on: Jun 09, 2024 | 10:23 PM

ಚಿತ್ರರಂಗದಲ್ಲಿ ಆಮಿರ್​ ಖಾನ್​ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಮಗ ಜುನೈದ್​ ಖಾನ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ. ಅವರ ಮೊದಲ ಸಿನಿಮಾ ‘ಮಹಾರಾಜ್​’ ವಿವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಆ ಬಗ್ಗೆ ವಿಶ್ವ ಹಿಂದೂ ಪರಿಷತ್​ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಬಿಡುಗಡೆಗೂ ಮೊದಲು ತಮಗೆ ಮೊದಲು ಸಿನಿಮಾ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಮಿರ್​ ಖಾನ್​ ಮಗನ ಮೊದಲ ಸಿನಿಮಾಗೆ ವಿಘ್ನ; ತಕರಾರು ತೆಗೆದ ವಿಎಚ್​ಪಿ
ಮಹಾರಾಜ್​ ಸಿನಿಮಾ ಪೋಸ್ಟರ್​
Follow us on

ನಟ ಆಮಿರ್​ ಖಾನ್​ (Aamir Khan) ಅವರ ಮಗ ಜುನೈದ್​ ಖಾನ್ (Junaid Khan)​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಮಹಾರಾಜ್​’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ನೆಟ್​ಫ್ಲಿಕ್ಸ್​ ಮೂಲಕ ಜೂನ್​ 14ರಂದು ರಿಲೀಸ್​ ಆಗಲಿದೆ. ಆದರೆ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಒಂದು ವಿಘ್ನ ಎದುರಾಗಿದೆ. ವಿಶ್ವ ಹಿಂದೂ ಪರಿಷತ್​ ಸದಸ್ಯರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೂ ಮೊದಲು ತಮಗೆ ‘ಮಹಾರಾಜ್​’ (Maharaj) ಸಿನಿಮಾವನ್ನು ತೋರಿಸಬೇಕು ಎಂದು ವಿಎಚ್​ಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.

ವಿಶ್ವ ಹಿಂದೂ ಪರಿಷತ್​ನ ಗೌತಮ್​ ಅವರು ನೆಟ್​ಫ್ಲಿಕ್ಸ್​ಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ. ಹಿಂದೂ ಧರ್ಮದ ಮುಖಂಡರಿಗೆ ಈ ಸಿನಿಮಾದಲ್ಲಿ ಅವಮಾನ ಆಗಿರುವ ಸೂಚನೆ ಕಾಣಿಸುತ್ತಿದೆ ಎಂದು ಪೋಸ್ಟರ್​ ನೋಡಿದರೆ ಅನಿಸುತ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಬಹುದು ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಬಿಡುಗಡೆಗೂ ಮುನ್ನ ‘ಮಹಾರಾಜ್​’ ಸಿನಿಮಾವನ್ನು ವಿಎಚ್​ಪಿ ಸದಸ್ಯರಿಗೆ ತೋರಿಸಬೇಕು. ಆ ಬಳಿಕ ಮುಂದಿನ ನಿರ್ಧಾರ ತಿಳಿಸಲಾಗುವುದು. ಸಿನಿಮಾದಲ್ಲಿ ಆಕ್ಷೇಪಾರ್ಹ ಅಂಶ ಇದ್ದರೆ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್​ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಮಗ ಜುನೈದ್​ ಖಾನ್​ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್​ ಜೋಡಿ

‘ಮಹಾರಾಜ್​’ ಸಿನಿಮಾದಲ್ಲಿ ಜುನೈದ್​ ಖಾನ್​ ಜೊತೆ ‘ಪಾತಾಳ್​ ಲೋಕ್​’ ಖ್ಯಾತಿಯ ಜಯದೀಪ್​ ಅಹಲಾವತ್​ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಶಾಲಿನಿ ಪಾಂಡೆ ಮತ್ತು ಶಾರ್ವರಿ ಅವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ಹಿಚ್ಕಿ’ ಸಿನಿಮಾದ ಖ್ಯಾತಿಯ ಸಿದ್ದಾರ್ಥ್​ ಪಿ. ಮಲ್ಹೋತ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮಹಾರಾಜ್​’ ಮಾತ್ರವಲ್ಲದೇ ಇನ್ನೂ ಕೆಲವು ಸಿನಿಮಾಗಳನ್ನು ಜುನೈದ್​ ಖಾನ್ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳ ಶೂಟಿಂಗ್​ ಪ್ರಗತಿಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.