‘ನಾನು ದಕ್ಷಿಣ ಭಾರತದವಳು ಅಂತ ಅವರು ತಿಳಿದುಕೊಂಡಿದ್ರು’: ಜ್ಯೋತಿಕಾ

ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ಅವರು ಮೊದಲು ಬಣ್ಣ ಹಚ್ಚಿದ್ದು ಹಿಂದಿ ಭಾಷೆಯ ಸಿನಿಮಾದಲ್ಲಿ. ಅವರು ನಟಿಸಿದ ‘ಡೋಲಿ ಸಜಾ ಕೆ ರಖ್ನಾ’ ಸಿನಿಮಾ 1998ರಲ್ಲಿ ತೆರೆಕಂಡಿತ್ತು. ಆ ಬಳಿಕ ಅವರಿಗೆ ಬಾಲಿವುಡ್​ನಿಂದ ಯಾವುದೇ ಆಫರ್​ ಸಿಗಲಿಲ್ಲ. ಇಷ್ಟು ವರ್ಷಗಳ ಬಳಿಕ ಅವರು ಮತ್ತೆ ಹಿಂದಿ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

‘ನಾನು ದಕ್ಷಿಣ ಭಾರತದವಳು ಅಂತ ಅವರು ತಿಳಿದುಕೊಂಡಿದ್ರು’: ಜ್ಯೋತಿಕಾ
ಜ್ಯೋತಿಕಾ
Follow us
ಮದನ್​ ಕುಮಾರ್​
|

Updated on: May 09, 2024 | 3:29 PM

ನಟಿ ಜ್ಯೋತಿಕಾ (Jyotika) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಈವರೆಗೂ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ದಕ್ಷಿಣ ಭಾರತ ಸಿನಿಮಾಗಳಲ್ಲಿ. ವಿಶೇಷ ಏನೆಂದರೆ, ಅವರು ವೃತ್ತಿಜೀವನ ಆರಂಭಿಸಿದ್ದು ಬಾಲಿವುಡ್​ನಿಂದ. ಹಾಗಿದ್ದರೂ ಕೂಡ ಅವರಿಗೆ ಹಿಂದಿ ಚಿತ್ರರಂಗದಲ್ಲಿ (Hindi Film Industry) ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆ ರೀತಿ ಆಗಲು ಕಾರಣ ಏನು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜ್ಯೋತಿಕಾ ಅವರು ಈಗ ವಿವರಿಸಿದ್ದಾರೆ. ಬಾಲಿವುಡ್​ನಲ್ಲಿ (Bollywood) ತಮ್ಮ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದ್ದು ಯಾಕೆ ಎಂಬುದನ್ನು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆದ ‘ಶೈತಾನ್​’ ಸಿನಿಮಾದಲ್ಲಿ ಜ್ಯೋತಿಕಾ ಅವರು ಅಜಯ್ ದೇವಗನ್​ಗೆ ಜೋಡಿಯಾಗಿ ನಟಿಸಿದರು. ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಯಶಸ್ವಿ ಆಯಿತು. ಈಗ ಹಿಂದಿಯ ‘ಶ್ರೀಕಾಂತ್​’ ಸಿನಿಮಾದಲ್ಲಿ ಅವರು ರಾಜ್​ಕುಮಾರ್​ ರಾವ್​ ಜೊತೆ ಅಭಿನಯಿಸಿದ್ದಾರೆ. ಕಳೆದ 27 ವರ್ಷಗಳಿಂದ ತಮಗೆ ಹಿಂದಿ ಚಿತ್ರರಂಗದಿಂದ ಅವಕಾಶಗಳೇ ಬಂದಿರಲಿಲ್ಲ ಎಂದು ಜ್ಯೋತಿಕಾ ಹೇಳಿದ್ದಾರೆ.

‘27 ವರ್ಷಗಳ ಹಿಂದೆ ನಾನು ದಕ್ಷಿಣ ಭಾರತದಲ್ಲಿ ಕೆಲಸ ಮಾಡಲು ಆರಂಭಿಸಿದೆ. ನಂತರ ಅಲ್ಲಿಯೇ ಹೆಚ್ಚು ಸಿನಿಮಾ ಮಾಡಿದೆ. ಹಿಂದಿಯಲ್ಲಿ ನನ್ನ ಮೊದಲ ಸಿನಿಮಾ ಯಶಸ್ವಿ ಆಗಲಿಲ್ಲ. ಅದು ಸಿದ್ಧ ಸೂತ್ರಗಳ ಸಿನಿಮಾ ಆಗಿತ್ತು. ನಿಮಗೆ ಹೆಚ್ಚು ಅವಕಾಶ ಸಿಗಬೇಕು ಎಂದರೆ ನಿಮ್ಮ ಮೊದಲ ಸಿನಿಮಾ ಹಿಟ್​ ಆಗಬೇಕು. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಎಲ್ಲ ನಟಿಯರು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆ ಸಿನಿಮಾ ಮಾಡುತ್ತಿದ್ದರು. ನನ್ನ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೂಡ ಒಂದು ದೊಡ್ಡ ಪ್ರೊಡಕ್ಷನ್​ ಹೌಸ್​. ಆದರೆ ದುರದೃಷ್ಟವಶಾತ್​ ಅದು ಓಡಲಿಲ್ಲ. ಪುಣ್ಯಕ್ಕೆ ನಾನು ಒಂದು ದಕ್ಷಿಣದ ಸಿನಿಮಾ ಒಪ್ಪಿಕೊಂಡೆ’ ಎಂದಿದ್ದಾರೆ ಜ್ಯೋತಿಕಾ.

ಇದನ್ನೂ ಓದಿ: ಒಂದೇ ಒಂದು ವಿಡಿಯೋದಿಂದ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಜ್ಯೋತಿಕಾ-ಸೂರ್ಯ

‘ನಾನು ದಕ್ಷಿಣ ಭಾರತದವಳು ಅಂತ ಬಾಲಿವುಡ್​ ಜನರು ಅಂದುಕೊಂಡಿದ್ದರು. ನಾನು ಹಿಂದಿ ಸಿನಿಮಾ ಮಾಡಲ್ಲ ಅಂತ ಅವರು ಊಹಿಸಿದ್ದರು. ಇಲ್ಲಿಯವರೆಗಿನ ಜರ್ನಿ ಚೆನ್ನಾಗಿತ್ತು. ಅದಕ್ಕೆ ನಾನು ಋಣಿ ಆಗಿದ್ದೇನೆ. ದಕ್ಷಿಣದಲ್ಲಿ ನಾನು ಕೆಲವು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದೇನೆ. ಹಿಂದಿ ಸಿನಿಮಾಗಳಿಂದ ನಾನಾಗಿಯೇ ದೂರ ಉಳಿದಿರಲಿಲ್ಲ. ಆದರೆ ನನಗೆ ಯಾವುದೇ ಆಫರ್​ ಸಿಗಲಿಲ್ಲ’ ಎಂದು ಜ್ಯೋತಿಕಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ