AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿ ಮಗಳ ಆಸ್ತಿಯನ್ನು 44 ಕೋಟಿ ರೂಪಾಯಿಗೆ ಖರೀದಿಸಿದ ನಟ; ಇದಕ್ಕೆ ಸ್ಫೂರ್ತಿ ಶಾರುಖ್​

ಬಾಲಿವುಡ್​ನಲ್ಲಿ ರಾಜ್​ಕುಮಾರ್​ ರಾವ್​ ಅವರು ಹಲವು ಏಳು-ಬೀಳು ಕಂಡಿದ್ದಾರೆ. ಮುಂಬೈನಲ್ಲಿ ಅವರು ಬರೋಬ್ಬರಿ 44 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಗೆ ಒಡೆಯನಾಗಿದ್ದಾರೆ. ಆ ಮನೆ ಮೊದಲು ಜಾನ್ವಿ ಕಪೂರ್​ಗೆ ಸೇರಿತ್ತು. ಇಂಥ ಒಂದು ಐಷಾರಾಮಿ ಬಂಗಲೆಯನ್ನು ಖರೀದಿಸಲು ತಮಗೆ ಶಾರುಖ್​ ಖಾನ್​ ಸ್ಫೂರ್ತಿ ಎಂದು ರಾಜ್​ಕುಮಾರ್​ ರಾವ್​ ಹೇಳಿದ್ದಾರೆ.

ಶ್ರೀದೇವಿ ಮಗಳ ಆಸ್ತಿಯನ್ನು 44 ಕೋಟಿ ರೂಪಾಯಿಗೆ ಖರೀದಿಸಿದ ನಟ; ಇದಕ್ಕೆ ಸ್ಫೂರ್ತಿ ಶಾರುಖ್​
ಜಾನ್ವಿ ಕಪೂರ್​, ರಾಜ್​ಕುಮಾರ್​ ರಾವ್​
ಮದನ್​ ಕುಮಾರ್​
|

Updated on: May 09, 2024 | 10:23 PM

Share

ಜನಪ್ರಿಯ ನಟ ಶಾರುಖ್​ ಖಾನ್​ (Shah Rukh Khan) ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಅವರು ಇಂದು ಜಗತ್ತಿನ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ಏಳು-ಬೀಳುಗಳನ್ನು ಕಂಡರೂ ಶಾರುಖ್​ ಖಾನ್​ ಕುಗ್ಗಿಲ್ಲ. ಅವರನ್ನು ಮಾದರಿಯಾಗಿ ಇಟ್ಟುಕೊಂಡ ಅನೇಕ ನಟರಿದ್ದಾರೆ. ಬಾಲಿವುಡ್​ ಕಲಾವಿದ ರಾಜ್​ಕುಮಾರ್​ ರಾವ್​ (Rajkummar Rao) ಅವರಿಗೂ ಶಾರುಖ್​ ಖಾನ್​ ಸ್ಫೂರ್ತಿ. ತಮ್ಮ ನೆಚ್ಚಿನ ನಟನ ಮಾತಿನಿಂದ ಪ್ರೇರಿತರಾದ ಅವರು 44 ಕೋಟಿ ರೂಪಾಯಿಯ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಅದು ಕೂಡ ಶ್ರೀದೇವಿ ಮಗಳು ಜಾನ್ವಿ ಕಪೂರ್​ಗೆ (Janhvi Kapoor) ಸೇರಿದ್ದ ಮನೆ ಎಂಬುದು ವಿಶೇಷ.

ಜಾನ್ವಿ ಕಪೂರ್​ ಅವರು 2020ರ ಡಿಸೆಂಬರ್​ನಲ್ಲಿ ಮುಂಬೈನಲ್ಲಿ ಒಂದು ಮನೆಯಲ್ಲಿ 39 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಅದನ್ನು 2022ರಲ್ಲಿ ರಾಜ್​ಕುಮಾರ್​ ರಾವ್​ ಅವರು 44 ಕೋಟಿ ರೂಪಾಯಿಗೆ ಕೊಂಡುಕೊಂಡರು. ಶಾರುಖ್​ ಖಾನ್ ಅವರು ಈ ಮೊದಲು ಹೇಳಿದ್ದ ಒಂದು ಮಾತನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ರಾಜ್​ಕುಮಾರ್​ ರಾವ್​ ಅವರು ಈ ಮನೆ ಖರೀದಿ ಮಾಡಿದ್ದಾಗಿ ಈಗ ಹೇಳಿದ್ದಾರೆ.

ರಾಜ್​ಕುಮಾರ್​ ನಟನೆಯ ‘ಶ್ರೀಕಾಂತ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮನೆ ಖರೀದಿ ಬಗ್ಗೆ ಮಾತನಾಡಿದ್ದಾರೆ. ‘ಶಾರುಖ್​ ಖಾನ್ ಅವರು ಒಂದು ವಿಷಯ ಹೇಳಿಕೊಟ್ಟಿದ್ದಾರೆ. ಮನೆ ಖರೀದಿ ಮಾಡುವಾಗ ನಿನ್ನ ಸಾಮರ್ಥ್ಯಕ್ಕಿಂತಲೂ ಮಿಗಿಲಾದ ಮನೆ ಖರೀದಿಸು. ಅದನ್ನು ಪಡೆಯಲು ನೀನು ಹೆಚ್ಚು ಶ್ರಮಪಡುತ್ತೀಯ ಅಂತ ಶಾರುಖ್​ ಹೇಳಿದ್ದರು. ಆ ಮಾತು ನನಗೆ ತುಂಬ ಇಷ್ಟವಾಯಿತು’ ಎಂದಿದ್ದಾರೆ ರಾಜ್​ಕುಮಾರ್ ರಾವ್​.

ಇದನ್ನೂ ಓದಿ: ಮುಂದಿನ ಸಿನಿಮಾದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ನಟ ಶಾರುಖ್​ ಖಾನ್​

‘ಮುಂಬೈ ನಗರದಲ್ಲಿ ಒಂದು ಮನೆ ಮಾಡುವುದು ನಿಜಕ್ಕೂ ಕನಸು. ನಾನು ಮತ್ತು ಪತ್ರಲೇಖ (ಪತ್ನಿ) ಅದನ್ನು ಕನಸಿನಿಂದ ಕಟ್ಟಿದ್ದೇವೆ’ ಎಂದು ರಾಜ್​ಕುಮಾರ್​ ರಾವ್​ ಹೇಳಿದ್ದಾರೆ. ಅವರು ನಟಿಸಿರುವ ‘ಶ್ರೀಕಾಂತ್​’ ಸಿನಿಮಾ ಮೇ 10ಕ್ಕೆ ಬಿಡುಗಡೆ ಆಗುತ್ತಿದೆ. ಇದಲ್ಲದೇ ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಸ್ತ್ರೀ 2’, ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್