‘2022ರಲ್ಲಿ ಕಡಿಮೆ ಎಫ್ಐರ್ ಬೀಳಲಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’; ದೇವರಲ್ಲಿ ಕಂಗನಾ ವಿಶೇಷ ಪ್ರಾರ್ಥನೆ

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವರ್ಷಕ್ಕೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ತಿರುಪತಿ ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳಿಗೆ ನಿನ್ನೆ (ಜ.1) ನಟಿ ಭೇಟಿ ನೀಡಿದ್ದರು.

‘2022ರಲ್ಲಿ ಕಡಿಮೆ ಎಫ್ಐರ್ ಬೀಳಲಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’; ದೇವರಲ್ಲಿ ಕಂಗನಾ ವಿಶೇಷ ಪ್ರಾರ್ಥನೆ
ಹೊಸ ವರ್ಷದ ಸಂದರ್ಭದಲ್ಲಿ ಕಂಗನಾ ಹಂಚಿಕೊಂಡ ಚಿತ್ರಗಳು (Credits: Kangana/ Instagram)
Edited By:

Updated on: Jan 02, 2022 | 3:40 PM

ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವರ್ಷಕ್ಕೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಇದೀಗ ನಟಿ ತಾವು ದೇವರಲ್ಲಿ ಕೋರಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕಂಗನಾ ಎರಡು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ‘‘2022ನ್ನು ತಿರುಪತಿ ಬಾಲಾಜಿಯ ದರ್ಶನದೊಂದಿಗೆ ಪ್ರಾರಂಭಿಸಿದೆ. ಈ ವರ್ಷ ಸದಾ ನೆನಪಿನಲ್ಲಿ ಉಳಿಯುವ ವರ್ಷವಾಗಿರಲಿ’’ ಎಂದು ಅವರು ಆಶಿಸಿ, ಪೋಸ್ಟ್ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಕಂಗನಾ, ಅದರಲ್ಲಿ ವಿರೋಧಿಗಳಿಗೆ ಟಾಂಗ್ ನೀಡಿದ್ದಲ್ಲದೇ, ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಕಂಗನಾ ಹಂಚಿಕೊಂಡ ಮೊದಲ ಪೋಸ್ಟ್:

ಕಂಗನಾ ಹಂಚಿಕೊಂಡ ಎರಡನೇ ಪೋಸ್ಟ್​ನಲ್ಲಿ ಏನಿದೆ?
ಕಂಗನಾ 2021ರಲ್ಲಿ ಬಹಳಷ್ಟು ಕಾರಣಗಳಿಗೆ ಸುದ್ದಿಯಾಗಿದ್ದರು. ಒಂದಷ್ಟು ಧನಾತ್ಮಕ ವಿಚಾರಗಳಿಗೆ ಸುದ್ದಿಯಾಗಿದ್ದರೆ ಬಹಳಷ್ಟು ವಿವಾದವಾಗಿದ್ದವು. ಯಾವುದೇ ಮುಚ್ಚುಮರೆಯಿಲ್ಲದೇ ತಮಗನಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಅಥವಾ ಮೈಕ್ ಮುಂದೆ ಹೇಳುವ ಕಂಗನಾ, ಎಲ್ಲದರಲ್ಲೂ ವಿರೋಧಿಗಳಿಗೆ ಟಾಂಗ್ ನೀಡುತ್ತಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ಹಲವು ಕಂಪ್ಲೇಂಟ್​ಗಳು ದಾಖಲಾಗಿ ಎಫ್​ಐಆರ್​ಗಳೂ ದಾಖಲಾಗಿದ್ದವು.

ಇದೀಗ ಹೊಸ ವರ್ಷಕ್ಕೆ ದೇವರ ಸನ್ನಿಧಾನಕ್ಕೆ ತೆರಳಿದ್ದ ಕಂಗನಾ, ಅಲ್ಲೂ ವಿರೋಧಿಗಳನ್ನು ಮರೆತಿಲ್ಲ. ಅಷ್ಟೇ ಅಲ್ಲ, ಹೊಸ ವರ್ಷದ ಪೋಸ್ಟ್​ನಲ್ಲೂ ಟೀಕಿಸುವವರಿಗೆ ಟಾಂಗ್ ನೀಡಿಯೇ ಕ್ಯಾಪ್ಶನ್ ನೀಡಿ ಬರೆದಿದ್ದಾರೆ. ತಮ್ಮ ಎರಡನೇ ಪೋಸ್ಟ್​ನಲ್ಲಿ ಕಂಗನಾ ಮೊದಲಿಗೆ ತಾವು ಭೇಟಿ ನೀಡಿದ್ದ ದೇವಸ್ಥಾನದ ವಿಶೇಷತೆ ಹೇಳಿದ್ದಾರೆ. ‘‘ಇದು ವಿಶ್ವದಲ್ಲಿರುವ ಏಕೈಕ ರಾಹು ಕೇತು ದೇವಸ್ಥಾನ. ತಿರುಪತಿಗೆ ಸಮೀಪದಲ್ಲಿದೆ. ಅಲ್ಲಿ ಒಂದಷ್ಟು ಪೂಜೆಗಳನ್ನು ಸಲ್ಲಿಸಿದೆ’’ ಎಂದು ಕಂಗನಾ ಬರೆದಿದ್ದಾರೆ.

ದೇವರೆದುರು ತಾನೇನು ಬೇಡಿಕೊಂಡೆ ಎನ್ನುವುದನ್ನು ವಿವರಿಸಿದ ಕಂಗನಾ, ‘‘ನನ್ನೆಲ್ಲಾ ಪ್ರೀತಿಯ ವಿರೋಧಿಗಳಿಗೆ ದೇವರು ಕರುಣೆ ತೋರಲಿ. ಈ ವರ್ಷ ನನ್ನ ಮೇಲೆ ಕಡಿಮೆ ಪೊಲೀಸ್ ಕಂಪ್ಲೇಂಟ್ ದಾಖಲಾಗಲಿ ಮತ್ತು ಕಡಿಮೆ ಎಫ್​ಐಆರ್​​ ಬೀಳಲಿ. ಹೆಚ್ಚೆಚ್ಚು ಪ್ರೇಮ ಪತ್ರಗಳು ಬರಲಿ’’ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಹಂಚಿಕೊಂಡ ಎರಡನೇ ಪೋಸ್ಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಕಂಗನಾ ಆಕ್ಷನ್ ಥ್ರಿಲ್ಲರ್ ಚಿತ್ರ ‘ಧಾಕಡ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮೇನಲ್ಲಿ ತೆರೆಗೆ ಬರಲು ಅದು ಸಜ್ಜಾಗುತ್ತಿದೆ. ಇದಲ್ಲದೇ ‘ತೇಜಸ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

GGVV: ಪ್ರೇಕ್ಷಕರ ಕಾತರಕ್ಕೆ ಸಿಕ್ತು ಉತ್ತರ; ‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್

ಹೊಸ ವರ್ಷದಂದು ಗಲ್ಲಾ ಪೆಟ್ಟಿಗೆಯಲ್ಲಿ ಭರಪೂರ ಬೆಳೆ ತೆಗೆದ ‘ಪುಷ್ಪ’, ‘83’; ಚಿತ್ರಗಳ ಒಟ್ಟಾರೆ ಕಲೆಕ್ಷನ್ ಎಷ್ಟು?