‘ಎಮರ್ಜೆನ್ಸಿ’ ಸಿನಿಮಾ ರಿಲೀಸ್​ ಒದ್ದಾಟದ ಮಧ್ಯೆ ಮುಂಬೈ ಬಂಗಲೆ ಮಾರಿದ ಕಂಗನಾ

|

Updated on: Sep 10, 2024 | 10:38 AM

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್​ 6ರಂದು ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಈ ಸಿನಿಮಾದ ಬಗ್ಗೆ ಸಿಖ್​ ಸಮುದಾಯದವರು ಆಕ್ಷೇಪ ಎತ್ತಿದ್ದರಿಂದ ಚಿತ್ರದ ಬಿಡುಗಡೆಗೆ ಕೋರ್ಟ್​ ತಡೆ ನೀಡಿತು. ಈ ಸಿನಿಮಾ ರಿಲೀಸ್​ಗೆ ಹೋರಾಡುತ್ತಿರುವಾಗ ಅವರು ತಮ್ಮ ಮುಂಬೈ ಬಂಗಲೆ ಮಾರಿದ್ದಾರೆ.

‘ಎಮರ್ಜೆನ್ಸಿ’ ಸಿನಿಮಾ ರಿಲೀಸ್​ ಒದ್ದಾಟದ ಮಧ್ಯೆ ಮುಂಬೈ ಬಂಗಲೆ ಮಾರಿದ ಕಂಗನಾ
ಕಂಗನಾ
Follow us on

ಕಂಗನಾ ರಣಾವತ್ ಅವರು ಈಗ ಕೇವಲ ನಟಿ ಮಾತ್ರವಲ್ಲ, ಸಂಸದೆ ಕೂಡ ಹೌದು. ಅವರು ಸಿನಿಮಾ ಹಾಗೂ ರಾಜಕೀಯ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದಾರೆ. ಹೀಗಿರುವಾಗಲೇ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆಯನ್ನು 32 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಕಂಗನಾ ಅವರು ಬಾಂದ್ರಾದ ಪಾಲಿ ಹಿಲ್ ಭಾಗದಲ್ಲಿ 32 ಕೋಟಿ ರೂಪಾಯಿ ಮನೆ ಹೊಂದಿದ್ದರು. ಈ ವ್ಯವಹಾರ ಸೆಪ್ಟೆಂಬರ್ 5ರಂದು ಫೈನಲ್ ಆಗಿದೆ. ಇದನ್ನು ಕಂಗನಾ ಅವರು 2017ರಲ್ಲಿ 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಈ ಕಟ್ಟಡ ಸುಮಾರು 3,075 ಚದರ ಅಡಿ ಇದೆ. 565 ಚದರ ಅಡಿ ಪಾರ್ಕಿಂಗ್ ಜಾಗ ಹೊಂದಿದೆ.

ಶ್ವೇತಾ ಭತಿಜಾ ಎಂಬುವವರು ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ತಮಿಳು ನಾಡು ಮೂಲದ ಇವರು 1.92 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ. ಈ ಬಗ್ಗೆ ಕಂಗನಾ ಅವರು ಇನ್ನಷ್ಟೇ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಿದೆ.

ಕಂಗನಾ ಅವರ ಈ ಕಟ್ಟಡ ಮೊದಲಿನಿಂದಲೂ ಚರ್ಚೆಯಲ್ಲಿ ಇತ್ತು. ಬೃಹತ್ ಮುನ್ಸಿಪಲ್ ಕಾರ್ಪೋರೇಷನ್ ಅವರು 2020ರಲ್ಲಿ ಈ ಕಟ್ಟಡದ ಒಂದು ಭಾಗವನ್ನು ಒಡೆದು ಹಾಕಿದ್ದರು. ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗಿದೆ ಎನ್ನುವ ಆರೋಪದಲ್ಲಿ ಈ ಕಟ್ಟಡದ ಒಂದು ಭಾಗ ನಾಶ ಆಗಿತ್ತು. ಇದರ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂದು ಕಂಗನಾ ಆರೋಪಿಸಿದ್ದರು.

ಇದನ್ನೂ ಓದಿ: ಕಂಗನಾ ರಣಾವತ್​ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ?

ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿಲ್ಲ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಮಂಡಳಿ ಇದನ್ನು ಅಧಿಕೃತವಾಗಿ ಹೇಳಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.