AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ’; ಖುಷಿ ಸುದ್ದಿ ಕೊಟ್ಟ ಕಂಗನಾ

ಇತ್ತೀಚೆಗೆ ಸೆನ್ಸಾರ್ ಮಂಡಳಿ ಹೇಳಿದ ಸೂಚನೆಗಳನ್ನು ಮನ್ನಿಸಿ, ಅದನ್ನು ಪರಿಗಣಿಸಲಾಗುವುದು ಎಂದು ತಂಡ ಹೇಳಿಕೊಂಡಿತ್ತು. ಅಂತೆಯೇ ಈಗ ಬದಲಾವಣೆಗಳಿಗೆ ತಂಡ ಒಪ್ಪಿದೆ. ಹೀಗಾಗಿ, ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿ ಸುದ್ದಿಯನ್ನು ಕಂಗನಾ ಫ್ಯಾನ್ಸ್ ಬಳಿ ಹಂಚಿಕೊಂಡಿದ್ದಾರೆ.

‘ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ’; ಖುಷಿ ಸುದ್ದಿ ಕೊಟ್ಟ ಕಂಗನಾ
ಕಂಗನಾ ರನೌತ್
ರಾಜೇಶ್ ದುಗ್ಗುಮನೆ
|

Updated on: Oct 18, 2024 | 12:54 PM

Share

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಭರ್ಜರಿ ಹೈಪ್ ಪಡೆಯಿತು. ಈ ಸಿನಿಮಾ ವಿವಾದದ ಕೇಂದ್ರ ಬಿಂದು ಕೂಡ ಆಗಿತ್ತು. ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ನೀಡಲು ವಿಳಂಬ ಮಾಡಿದ್ದರು. ಇದರಿಂದ ಕಂಗನಾ ಕೆಂಡಾಮಂಡಲ ಆಗಿದ್ದರು. ಕೊನೆಗೂ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿಯ ಸುದ್ದಿಯನ್ನು ಕಂಗನಾ ಹಂಚಿಕೊಂಡಿದ್ದಾರೆ.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಈ ಘಟನೆಗಳ ಸುತ್ತಮುತ್ತದ ವಿಷಯಗಳನ್ನು ಅಧ್ಯಯನ ನಡೆಸಿ ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ, ಸೆನ್ಸಾರ್ ಮಂಡಳಿಯವರು ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಸೂಚಿಸಿದ್ದರು. ಅದನ್ನು ಒಪ್ಪದಿದ್ದರೆ ಸೆನ್ಸಾರ್ ಪ್ರಮಾಣಪತ್ರ ನೀಡಲಾಗದು ಎಂದು ಖಡಕ್ ಆಗಿ ಹೇಳಿದ್ದರು.

ಇತ್ತೀಚೆಗೆ ಸೆನ್ಸಾರ್ ಮಂಡಳಿ ಹೇಳಿದ ಸೂಚನೆಗಳನ್ನು ಮನ್ನಿಸಿ, ಅದನ್ನು ಪರಿಗಣಿಸಲಾಗುವುದು ಎಂದು ತಂಡ ಹೇಳಿಕೊಂಡಿತ್ತು. ಅಂತೆಯೇ ಈಗ ಬದಲಾವಣೆಗಳಿಗೆ ತಂಡ ಒಪ್ಪಿದೆ. ಹೀಗಾಗಿ, ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿ ಸುದ್ದಿಯನ್ನು ಕಂಗನಾ ಫ್ಯಾನ್ಸ್ ಬಳಿ ಹಂಚಿಕೊಂಡಿದ್ದಾರೆ.

‘ನಮ್ಮ ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರೆತಿದೆ ಎಂದು ತಿಳಿಸಲು ಖುಷಿ ಆಗುತ್ತಿದೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ವರ್ಷವೇ ಚಿತ್ರ ಬಿಡುಗಡೆ ಆಗುತ್ತದೆಯೇ ಅಥವಾ ಮುಂದಿನ ವರ್ಷಕ್ಕಾಗಿ ಕಾಯಬೇಕೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಕಂಗನಾ ಫೈಟರ್’: ನಟಿಯನ್ನು ಹಾಡಿ ಹೊಗಳಿದ ಬಾಲಿವುಡ್ ನಾಯಕಿ

‘ಎಮರ್ಜೆನ್ಸಿ’ ಚಿತ್ರಕ್ಕೆ ಸಿಖ್ ಸಮುದಾಯದವರು ತಕರಾರರು ತೆಗೆದಿದ್ದಾರೆ. ಈ ಸಿನಿಮಾದಲ್ಲಿ ಸಿಖ್ ಸಮುದಾಯದವರನ್ನು ಟೀಕಿಸುವ ಕೆಲಸ ಆಗಿದೆ ಎಂದು ಹೇಳಿದ್ದರು. ಈ ವಿಚಾರ ಕೋರ್ಟ್ ​ಮೆಟ್ಟಿಲನ್ನೂ ಹತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.