ಲೋಕಸಭಾ ಚುನಾವಣೆಗೆ (Lok Sabha Election) ಸ್ಪರ್ಧಿಸಲಿರುವ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರಲ್ಲಿ ನಟಿ ಕಂಗನಾ ರಣಾವತ್ (Kangana Ranaut) ಅವರ ಹೆಸರು ಕೂಡ ಇದೆ. ಮೊದಲಿನಿಂದಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತಾ ಬಂದಿದ್ದ ಕಂಗನಾ ರಣಾವತ್ ಅವರಿಗೆ ಈಗ ಬಿಜೆಪಿ ಟಿಕೆಟ್ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ (BJP) ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಧಿಕೃತವಾಗಿ ಕಂಗನಾ ರಣಾವತ್ ಅವರು ರಾಜಕೀಯದ ಅಖಾಡಕ್ಕೆ ಇಳಿಯುತ್ತಿದ್ದಾರೆ.
‘ನಾನು ರಾಜಕೀಯಕ್ಕೆ ಎಂಟ್ರಿ ನೀಡುವುದಾದರೆ ಇದು ಸೂಕ್ತ ಸಮಯ’ ಎಂದು ಕಂಗನಾ ರಣಾವತ್ ಅವರು ಇತ್ತೀಚೆಗೆ ಹೇಳಿದ್ದರು. ಆ ಮೂಲಕ ಅವರು ಸೂಚನೆ ನೀಡಿದ್ದರು. ಜನರ ಊಹೆ ಈಗ ನಿಜವಾಗಿದೆ. ಮೂಲತಃ ಹಿಮಾಚಲ ಪ್ರದೇಶದವರಾದ ಕಂಗನಾಗೆ ಮಂಡಿ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಸ್ಟಾರ್ ನಟಿಯಾಗಿರುವ ಅವರು ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಅವರ ರಾಜಕೀಯ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
My beloved Bharat and Bhartiya Janta’s own party, Bharatiya Janta party ( BJP) has always had my unconditional support, today the national leadership of BJP has announced me as their Loksabha candidate from my birth place Himachal Pradesh, Mandi (constituency) I abide by the high…
— Kangana Ranaut (@KanganaTeam) March 24, 2024
‘ನನ್ನ ಪ್ರೀತಿಯ ಭಾರತ ಹಾಗೂ ಭಾರತೀಯರ ಸ್ವಂತ ಪಕ್ಷವಾದ ಭಾರತೀಯ ಜನತಾ ಪಾರ್ಟಿಗೆ ನಾನು ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದೇನೆ. ಇಂದು ರಾಷ್ಟ್ರೀಯ ನಾಯಕರು ನನ್ನ ಜನ್ಮ ಸ್ಥಳವಾದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಚುನಾವಣಾ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಹೈಕಮಾಂಡ್ ತೆಗೆದುಕೊಂಡ ಈ ನಿರ್ಧಾರವನ್ನು ನಾನು ಪಾಲಿಸುತ್ತೇನೆ. ಅಧಿಕೃತವಾಗಿ ಪಕ್ಷವನ್ನು ಸೇರಿಕೊಂಡಿದ್ದಕ್ಕೆ ನನಗೆ ಹೆಮ್ಮೆ ಮತ್ತು ಗೌರವ ಎನಿಸುತ್ತಿದೆ. ನಂಬಿಕಾರ್ಹ ಜನಸೇವಕಿ ಹಾಗೂ ಕಾರ್ಯಕರ್ತೆಯಾಗುತ್ತೇನೆ’ ಎಂದು ಕಂಗನಾ ರಣಾವತ್ ಅವರು ಪ್ರತಿಕ್ರಿಯಿಸಿದ್ದಾರೆ.
Arun Govil: ‘ರಾಮಾಯಣ’ ಧಾರಾವಾಹಿ ನಟ ಅರುಣ್ ಗೋವಿಲ್ಗೆ ಬಿಜೆಪಿ ಟಿಕೆಟ್
ನೇರ ಮತ್ತು ನಿಷ್ಠುರವಾದ ನಡೆ-ನುಡಿಯಿಂದಾಗಿ ಕಂಗನಾ ರಣಾವತ್ ಅವರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದು ಕೂಡ ಉಂಟು. ಸಿನಿಮಾದಲ್ಲಿ ಜನಪ್ರಿಯತೆ ಪಡೆದ ಅವರು ಈಗ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಹಿಂದೆ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗುವ ಮೂಲಕವೂ ಕಂಗನಾ ಸುದ್ದಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Sun, 24 March 24