ಕಿರಿಯ ಮಗಳಿಗಾಗಿ ಹಿಂದಿಯಲ್ಲಿ ‘ಉಪ್ಪೆನಾ’ ರಿಮೇಕ್​ ಮಾಡಲು ಮುಂದಾದ ಬೋನಿ ಕಪೂರ್​

ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಪ್ರತಿಭೆಗೆ ನಿರ್ಮಾಪಕ ಬೋನಿ ಕಪೂರ್​ ಫಿದಾ ಆಗಿದ್ದಾರೆ. ಹಾಗಾಗಿ ಉಪ್ಪೆನಾ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಬೇಕು ಎಂದು ಅವರು ಆಲೋಚಿಸಿದ್ದಾರೆ. ಆ ಸಿನಿಮಾವನ್ನು ಅವರು ತಮ್ಮ ಕಿರಿಯ ಪುತ್ರಿ ಖುಷಿ ಕಪೂರ್​ ಸಲುವಾಗಿ ಅವರು ನಿರ್ಮಾಣ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಕಿರಿಯ ಮಗಳಿಗಾಗಿ ಹಿಂದಿಯಲ್ಲಿ ‘ಉಪ್ಪೆನಾ’ ರಿಮೇಕ್​ ಮಾಡಲು ಮುಂದಾದ ಬೋನಿ ಕಪೂರ್​
ಬೋನಿ ಕಪೂರ್​, ಖುಷಿ ಕಪೂರ್​
Follow us
ಮದನ್​ ಕುಮಾರ್​
|

Updated on: Mar 24, 2024 | 3:19 PM

ನಿರ್ಮಾಪಕ ಬೋನಿ ಕಪೂರ್​ (Boney Kapoor) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದಾರೆ. ಅವರ ಮಕ್ಕಳಾದ ಜಾನ್ವಿ ಕಪೂರ್​ ಮತ್ತು ಖುಷಿ ಕಪೂರ್​ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಜಾನ್ವಿ ಕಪೂರ್​ ಅವರು ದಕ್ಷಿಣದಲ್ಲೂ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರಿಗೆ ಈಗಾಗಲೇ ಭಾರಿ ಜನಪ್ರಿಯತೆ ಸಿಕ್ಕಿದೆ. ಆದರೆ ಕಿರಿಯ ಮಗಳು ಖುಷಿ ಕಪೂರ್​ (Khushi Kapoor) ಈಗತಾನೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಖುಷಿ ಕಪೂರ್​ಗಾಗಿ ‘ಉಪ್ಪೆನಾ’ (Uppena) ಚಿತ್ರವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಬೋನಿ ಕಪೂರ್​ ಉತ್ಸಾಹ ತೋರಿಸಿದ್ದಾರೆ. ಈ ವಿಷಯ ಕೇಳಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಬೋನಿ ಕಪೂರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಲು ಕಾರಣ ಕೂಡ ಇದೆ. ಯಾಕೆಂದರೆ, ‘ಉಪ್ಪೆನಾ’ ಸಿನಿಮಾದ ಕಥೆ ‘ಧಡಕ್​’ ಚಿತ್ರದ ಕಥೆಯ ರೀತಿಯೇ ಇದೆ. ಇನ್ನು, ‘ಧಡಕ್​’ ಸಿನಿಮಾವು ಮರಾಠಿಯ ‘ಸೈರಾಟ್​’ ಚಿತ್ರದ ರಿಮೇಕ್​. ‘ಉಪ್ಪೆನಾ’ ಕ್ಲೈಮ್ಯಾಕ್ಸ್​ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಬಾಲಿವುಡ್​ನಲ್ಲಿ ‘ಉಪ್ಪೆನಾ’ ರಿಮೇಕ್​ ಮಾಡಿದರೆ ಹಿಂದಿ ಪ್ರೇಕ್ಷಕರು ಮತ್ತೊಮ್ಮೆ ಅದೇ ಕಥೆಯನ್ನು ನೋಡಬೇಕಾ ಎಂದು ನೆಟ್ಟಿಗರು ಟ್ರೋಲ್​ ಮಾಡುಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ

ಖುಷಿ ಕಪೂರ್​ ಅವರು ‘ದಿ ಆರ್ಚೀಸ್​’ ಸಿನಿಮಾದ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ಆ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ಬಿಡುಗಡೆ ಆಯಿತು. ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅವರಿಗೆ ಜನಪ್ರಿಯತೆ ಸಿಗುತ್ತಿದೆ. ಸ್ಟಾರ್​ ಕಿಡ್​ ಆದ್ದರಿಂದ ಸುಲಭವಾಗಿ ಅವಕಾಶ ಸಿಕ್ಕಿದ್ದಕ್ಕೆ ನೆಟ್ಟಿಗರೆಲ್ಲ ನೆಪೋಟಿಸಂ ವಿಚಾರವನ್ನು ಕಮೆಂಟ್​ ಬಾಕ್ಸ್​ನಲ್ಲಿ ಎಳೆದುತರುತ್ತಿದ್ದಾರೆ. ಮಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಬೋನಿ ಕಪೂರ್​ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬಾರಿ ದೊಡ್ಡ ಪ್ರಾಜೆಕ್ಟ್​ಗೆ ಕೈ ಹಾಕಿದ ಬೋನಿ ಕಪೂರ್, ಸಾವಿರಾರು ಕೋಟಿ ಯೋಜನೆ

ರಾಮ್​ ಚರಣ್​ ನಟನೆಯ 16ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. ಆ ಚಿತ್ರಕ್ಕೆ ಜಾನ್ವಿ ಕಪೂರ್​ ನಾಯಕಿ. ದಕ್ಷಿಣದಲ್ಲಿ ‘ದೇವರ’ ಬಳಿಕ ಜಾನ್ವಿ ಕಪೂರ್​ ಒಪ್ಪಿಕೊಂಡ 2ನೇ ಸಿನಿಮಾ ಇದೆ. ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಬೋನಿ ಕಪೂರ್​ ಆಗಮಿಸಿದ್ದರು. ಬುಚ್ಚಿ ಬಾಬು ಸನಾ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಉಪ್ಪೆನಾ’ ಸಿನಿಮಾಗೆ ನಿರ್ದೇಶನ ಮಾಡಿದ್ದು ಕೂಡ ಬುಚ್ಚಿ ಬಾಬು ಸನಾ. ಅವರ ಪ್ರತಿಭೆಗೆ ಬೋನಿ ಕಪೂರ್​ ಅವರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್