ಕಂಗನಾ ರಣಾವತ್‌ಗೆ ಶಾಕ್: ‘ಭಾರತ ಭಾಗ್ಯ ವಿಧಾತಾ’ ಚಿತ್ರಕ್ಕೆ ಭಾರಿ ನಷ್ಟದ ಭೀತಿ

ಕಂಗನಾ ರಣಾವತ್ ನಟನೆಯ 'ಭಾರತ್ ಭಾಗ್ಯ ವಿಧಾತಾ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿದೆ. 60 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾ ಕೇವಲ 4 ಕೋಟಿ ಗಳಿಸಿದ್ದು, ನಿರ್ಮಾಪಕರಿಗೆ 45-50 ಕೋಟಿ ನಷ್ಟದ ಭೀತಿ ಎದುರಾಗಿದೆ. ತೆರಿಗೆ ಮುಕ್ತ ಸ್ಥಾನಮಾನ, 'ಒಂದಕ್ಕೆ ಒಂದು ಉಚಿತ' ಆಫರ್ ಕೂಡ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿ, ಕಂಗನಾ ಖಾತೆಗೆ ಮತ್ತೊಂದು ವೈಫಲ್ಯ ಸೇರಿಸಿದೆ.

ಕಂಗನಾ ರಣಾವತ್‌ಗೆ ಶಾಕ್: ಭಾರತ ಭಾಗ್ಯ ವಿಧಾತಾ ಚಿತ್ರಕ್ಕೆ ಭಾರಿ ನಷ್ಟದ ಭೀತಿ
ಕಂಗನಾ

Updated on: Jun 15, 2026 | 7:31 AM

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಜೂನ್ 12 ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ವೀಕೆಂಡ್‌ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ತತ್ತರಿಸಿ ಹೋಗಿದ್ದು, ಚಿತ್ರದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಮುನ್ಸೂಚನೆ ಸಿಕ್ಕಿದೆ. ಯಾವುದೇ ದೊಡ್ಡ ಸಿನಿಮಾದ ಅಬ್ಬರ ಇಲ್ಲದಿದ್ದರೂ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ.

ಕೋಟಿ ಬಜೆಟ್; ಗಳಿಸಿದ್ದು ಕೇವಲ 4 ಕೋಟಿ!

ಮೂಲಗಳ ಪ್ರಕಾರ, ‘ಭಾರತ ಭಾಗ್ಯ ವಿಧಾತಾ’ ಚಿತ್ರವನ್ನು ಬರೋಬ್ಬರಿ 60 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಕಂಗನಾ ರಣಾವತ್ ಅವರ ಸ್ವಂತ ಬ್ಯಾನರ್ ‘ಮಣಿಕರ್ಣಿಕಾ ಫಿಲ್ಮ್ಸ್’ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಆದರೆ, ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಸಿನಿಮಾ ಗಳಿಸಿರುವುದು ಕೇವಲ 4.03 ಕೋಟಿ ರೂಪಾಯಿ ಮಾತ್ರ.

ಬಜೆಟ್‌ನ 10 ಹಣವನ್ನು ಕೂಡ ಸಿನಿಮಾ ಮರಳಿ ಪಡೆಯುವುದು ಅನುಮಾನ ಇದೆ.ಚಿತ್ರದ ಪ್ರದರ್ಶನ ಹೀಗೆಯೇ ಮುಂದುವರಿದರೆ, ನಿರ್ಮಾಣ ಸಂಸ್ಥೆಗೆ ಸುಮಾರು 45 ರಿಂದ 50 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಸಾಮಾನ್ಯವಾಗಿ ವೀಕೆಂಡ್‌ನ ಕೊನೆಯ ದಿನವಾದ ಭಾನುವಾರ ಸಿನಿಮಾಗಳ ಗಳಿಕೆ ಹೆಚ್ಚಾಗುತ್ತದೆ. ಆದರೆ ಈ ಚಿತ್ರದ ವಿಷಯದಲ್ಲಿ ಉಲ್ಟಾ ಆಗಿದೆ. ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಚಿತ್ರದ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎರಡನೇ ದಿನ 1,956 ಶೋ ಪ್ರದರ್ಶನ ಕಂಡಿದ್ದವು. ಅದು ಭಾನುವಾರಕ್ಕೆ 794 ಶೋಗಳಿಗೆ ಬಂದು ನಿಂತಿದೆ. ಭಾನುವಾರ ಥಿಯೇಟರ್‌ಗಳಲ್ಲಿ ಕೇವಲ 14ರಷ್ಟು ಮಾತ್ರ ಸೀಟುಗಳು ಭರ್ತಿಯಾಗಿದ್ದವು.

‘ಒಂದಕ್ಕೆ ಒಂದು ಉಚಿತ’ ಆಫರ್ ಕೊಟ್ಟರೂ ಪ್ರಯೋಜನವಾಗಿಲ್ಲ

ಸಿನಿಮಾದ ಕಲೆಕ್ಷನ್ ಸುಧಾರಿಸಲು ಶನಿವಾರದ ಬಳಿಕ ಚಿತ್ರತಂಡ ದೇಶಾದ್ಯಂತ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ ಎಂಬ ಆಫರ್ ಘೋಷಿಸಿತ್ತು. ಆದರೆ ಈ ಬಿಗ್ ಆಫರ್ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿದೆ. ದೆಹಲಿ ಮತ್ತು ಹರಿಯಾಣ ಸರ್ಕಾರಗಳು ಈ ಚಿತ್ರಕ್ಕೆ ‘ತೆರಿಗೆ ಮುಕ್ತ’ ಸ್ಥಾನಮಾನ ನೀಡಿದ್ದರೂ ಸಹ, ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಪವಾಡ ನಡೆದಿಲ್ಲ.

ಇದನ್ನೂ ಓದಿ: ‘ಪೆದ್ದಿ’ ವಿವಾದ; ನಿರ್ದೇಶಕನ ಬೆಂಬಲಕ್ಕೆ ನಿಂತ ಕಂಗನಾ ರಣಾವತ್ 

ಮುಂಬೈನ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಮುಂಬೈನ ‘ಕಾಮಾ ಆಸ್ಪತ್ರೆ’ಯ ವೈದ್ಯರು ಮತ್ತು ನರ್ಸ್‌ಗಳು ಗರ್ಭಿಣಿಯರು ಹಾಗೂ ನವಜಾತ ಶಿಶುಗಳನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಹೋರಾಡಿದ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ವಿಷಯ ಗಂಭೀರವಾಗಿದ್ದರೂ, ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿರುವುದರಿಂದ ಕಂಗನಾ ರಣಾವತ್ ಖಾತೆಗೆ ಮತ್ತೊಂದು ದೊಡ್ಡ ಸೋಲು ಸೇರ್ಪಡೆಯಾದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us