ದೀಪಿಕಾ ಪಡುಕೋಣೆಗಾಗಿ ಬಿಗ್ ಬಜೆಟ್ ಚಿತ್ರ ಹೋಲ್ಡ್ ಮಾಡಿದ ಕರಣ್ ಜೋಹರ್

| Updated By: ರಾಜೇಶ್ ದುಗ್ಗುಮನೆ

Updated on: Mar 05, 2024 | 8:05 AM

‘ಕಾಫಿ ವಿತ್ ಕರಣ್’ ಶೋಗೆ ಕರೆದರೆ ದೀಪಿಕಾ ಖುಷಿಯಿಂದ ತೆರಳುತ್ತಾರೆ. ದೀಪಿಕಾ ಸಿನಿಮಾನ ನಿರ್ಮಾಣ ಮಾಡಬೇಕು ಎಂದರೆ ಖುಷಿ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ ಕರಣ್ ಜೋಹರ್. ಅವರು ವಿಶೇಷವಾಗಿ ದೀಪಿಕಾಗಾಗಿ ಒಂದು ಕಥೆ ತಯಾರಿಸಿದ್ದರಂತೆ. ಆದರೆ, ಸಿನಿಮಾ ಬದಲು ಫ್ಯಾಮಿಲಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.

ದೀಪಿಕಾ ಪಡುಕೋಣೆಗಾಗಿ ಬಿಗ್ ಬಜೆಟ್ ಚಿತ್ರ ಹೋಲ್ಡ್ ಮಾಡಿದ ಕರಣ್ ಜೋಹರ್
ಕರಣ್-ದೀಪಿಕಾ
Follow us on

ದೀಪಿಕಾ ಪಡುಕೋಣೆ (Deepika Padukone) ಅವರು ಇತ್ತೀಚೆಗೆ ತಾಯಿ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರವನ್ನು ರಣವೀರ್ ಸಿಂಗ್ ಹಾಗೂ ಅವರು ಖುಷಿಯಿಂದ ರಿವೀಲ್ ಮಾಡಿದ್ದಾರೆ. ಹೊಸ ಮಗುವಿನ ನಿರೀಕ್ಷೆ ಕುಟುಂಬದ ಖುಷಿ ಹೆಚ್ಚಿಸಿದೆ. ಅವರ ಫ್ಯಾನ್ಸ್ ಕೂಡ ಹೆಚ್ಚು ಸಂಭ್ರಮಿಸುತ್ತಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದಾಗ ಎಲ್ಲರ ಗಮನ ಅವರ ಬೇಬಿ ಬಂಪ್ ಮೇಲೆ ಇತ್ತು. ಸದ್ಯಕ್ಕಂತೂ ದೀಪಿಕಾ ಹೊಸ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಕರಣ್ ಜೋಹರ್ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್​ನಲ್ಲಿ ಎನ್ನಲಾಗಿದೆ.

ಕರಣ್ ಜೋಹರ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ‘ಕಾಫಿ ವಿತ್ ಕರಣ್’ ಶೋಗೆ ಕರೆದರೆ ದೀಪಿಕಾ ಖುಷಿಯಿಂದ ತೆರಳುತ್ತಾರೆ. ಅದೇ ರೀತಿ ದೀಪಿಕಾ ಸಿನಿಮಾನ ನಿರ್ಮಾಣ ಮಾಡಬೇಕು ಎಂದರೆ ಖುಷಿ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ ಕರಣ್ ಜೋಹರ್. ಅವರು ವಿಶೇಷವಾಗಿ ದೀಪಿಕಾಗಾಗಿ ಒಂದು ಕಥೆ ತಯಾರಿಸಿದ್ದರಂತೆ.

ಕರಣ್ ಜೊತೆ ದೀಪಿಕಾ ಈ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದರು. ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ಈ ಮಧ್ಯೆ ಮಗು ಹೊಂದುವ ನಿರ್ಧಾರಕ್ಕೆ ಬಂದರು. ದೀಪಿಕಾ ಪಡುಕೋಣೆ ಅವರು ಮದುವೆ ಆಗಿ ಹಲವು ವರ್ಷ ಕಳೆದಿದೆ. ಹೀಗಾಗಿ, ಮಗು ಪಡೆಯಲು ಇದು ಸರಿಯಾದ ಸಮಯ ಎಂದು ದೀಪಿಕಾ ಹಾಗೂ ರಣವೀರ್​ಗೆ ಅನಿಸಿದೆ. ಈ ಕಾರಣದಿಂದಲೇ ಅವರು ಸಿನಿಮಾ ಬದಲು ಫ್ಯಾಮಿಲಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.

ಕರಣ್ ಜೋಹರ್​ಗೆ ದೀಪಿಕಾ ವಿಶೇಷ ಸೂಚನೆ ಕೂಡ ನೀಡಿದ್ದಾರೆ. ಮಗು ಜನಿಸಿದೋ ಅದರ ಆರೈಕೆ ಎಂದು ಎರಡು ವರ್ಷ ಅವರು ಬ್ರೇಕ್ ಪಡೆಯಬೇಕಾಗುತ್ತದೆ. ಹೀಗಾಗಿ, ಬೇರೆಯವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಂತೆ ದೀಪಿಕಾ ಅವರು ಕರಣ್​ಗೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಕರಣ್ ಜೋಹರ್ ಒಪ್ಪಿಲ್ಲ.

ಈ ಮೊದಲು ಆಲಿಯಾ ಭಟ್ ಅವರು ಪ್ರೆಗ್ನೆಂಟ್ ಆದ ಕಾರಣಕ್ಕೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರು ಕರಣ್. ರಿಲೀಸ್ ದಿನಾಂಕವನ್ನು ಕೂಡ ಮುಂದಕ್ಕೆ ಹಾಕಿಕೊಂಡಿದ್ದರು. ಹೀಗಾಗಿ ದೀಪಿಕಾ ಸಿನಿಮಾಗೂ ಅವರು ಕಾಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ To ಕಂಗನಾ ರಣಾವತ್: ಏರ್​ಫೋರ್ಸ್​ ಪೈಲಟ್ ಪಾತ್ರ ಮಾಡಿದ ನಟಿಯರಿವರು

ದೀಪಿಕಾ ಪಡುಕೋಣೆ ಅವರ ನಟನೆಯ ‘ಫೈಟರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಸದ್ಯ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಇದಲ್ಲದೆ, ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ‘ಸಿಂಗಂ 3’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ದೀಪಿಕಾ ಜೊತೆ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಟೈಗರ್ ಶ್ರಾಫ್ ಮೊದಲಾದವರು ನಟಿಸಿದ್ದಾರೆ.  ಈ ಎರಡೂ ಸಿನಿಮಾಗಳ ಕೆಲಸವನ್ನು ದೀಪಿಕಾ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ