‘ಖಾನ್, ಕಪೂರ್​ಗಳೇ ಒಜಿ​ಗಳು, ಹೊಸಬರು ಬಂದು ಫ್ರಾಂಚೈಸಿ ಕದಿಯುತ್ತಾರೆ’; ಕರಣ್ ಜೋಹರ್

ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್ ನಡುವೆ ಈ ಮೊದಲು ಮನಸ್ತಾಪ ಇತ್ತು. ಆದರೆ, ಈಗ ಇಬ್ಬರ ಮಧ್ಯೆ ಸಮನ್ವಯ ಬಂದಿದೆ. ಕಾರ್ತಿಕ್ ಅವರನ್ನು ಚಿತ್ರದಿಂದ ಹೊರಗಿಟ್ಟಿದ್ದ ಕರಣ್, ಈಗ ಅವರ ಯಶಸ್ಸನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭೂಲ್ ಭುಲಯ್ಯ 2"ನ ಯಶಸ್ಸು ಮತ್ತು ಕರಣ್ ಅವರ "ಕಿಂಗ್ ಮೇಕರ್" ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿವೆ.

‘ಖಾನ್, ಕಪೂರ್​ಗಳೇ ಒಜಿ​ಗಳು, ಹೊಸಬರು ಬಂದು ಫ್ರಾಂಚೈಸಿ ಕದಿಯುತ್ತಾರೆ’; ಕರಣ್ ಜೋಹರ್
ಕರಣ್​-ಕಾರ್ತಿಕ್

Updated on: Mar 18, 2025 | 7:35 AM

ಕರಣ್ ಜೋಹರ್ (Karan Johar) ಹಾಗೂ ಕಾರ್ತಿಕ್ ಆರ್ಯನ್ ಮಧ್ಯೆ ಸಾಕಷ್ಟು ಮನಸ್ತಾಪಗಳು ಇದ್ದವು. ಕಾರ್ತಿಕ್ ಆರ್ಯನ್ ಅವರನ್ನು ಸಿನಿಮಾ ಒಂದರಿಂದ ಕರಣ್ ಜೋಹರ್ ಹೊರಕ್ಕೆ ಇಟ್ಟಿದ್ದರು. ಕಾರ್ತಿಕ್ ಆರ್ಯನ್ ಹೊರಗಿನ ವ್ಯಕ್ತಿ ಎಂದು ಯಾವಾಗಲೂ ಅಂದುಕೊಳ್ಳುತ್ತಲೇ ಬರುತ್ತಿದ್ದ ಕರಣ್ ಜೋಹರ್ ಈಗ ಬದಲಾದಂತೆ ಕಾಣುತ್ತಿದ್ದಾರೆ. ಈಗ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡಿದ್ದಾರೆ. ಈ ಸಂದರ್ಭ ಸಂಭಾಷಣೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

‘ನಾನು ನಿಮಗೆ ರಾಜಮನೆತನದವರನ್ನು ಪರಿಚಯಿಸುತ್ತೇನೆ. ಇಲ್ಲಿ ಖಾನ್ ಹಾಗೂ ಕಪೂರ್​ಗಳೇ ಒರಿಜಿನಲ್ ಗ್ಯಾಂಗ್​ಸ್ಟರ್​ಗಳು. ಈಗಿನ ಕಾಲದ ಹೀರೋಗಳು ಫ್ರಾಂಚೈಸಿಗಳನ್ನು ಕದಿಯುತ್ತಾರೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ಇದು ಅವರು ಕಾರ್ತಿಕ್ ಆರ್ಯನ್​ಗೆ ಹೇಳಿದ ಮಾತು. ಅಲ್ಲದೆ ತಮ್ಮನ್ನು ತಾವು ಅವರು ಕಿಂಗ್​ಮೇಕರ್ ಎಂದು ಕರೆದುಕೊಂಡಿದ್ದಾರೆ.

‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಮೊದಲು ಅಕ್ಷಯ್ ಕುಮಾರ್ ಅವರು ನಟಿಸಿದ್ದರು. ಆ ಬಳಿಕ ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಎಂಟ್ರಿ ಆಯಿತು. ಎರಡನೇ ಪಾರ್ಟ್​ಗೆ ಅವರೇ ಹೀರೋ ಆದರು. ಈ ಸಿನಿಮಾ ಹಿಟ್ ಆದ ಬಳಿಕ ಅವರನ್ನೇ ಸಿನಿಮಾದಲ್ಲಿ ಮುಂದುವರಿಸಲಾಗಿದೆ. ಈ ವಿಚಾರ ಇಟ್ಟುಕೊಂಡೇ ಕರಣ್ ಜೋಹರ್ ಅವರು ಕಾರ್ತಿಕ್ ಆರ್ಯನ್​ನ ಕಾಲೆಳೆದಿದ್ದಾರೆ.

ಇದನ್ನೂ ಓದಿ
ಕರಣ್ ಜೋಹರ್​ಗೆ ಇರೋದು ರೋಗವೇ? ವಿಪರೀತ ತೂಕ ಇಳಿದಿದ್ದಕ್ಕೆ ಕಾರಣ ಇಲ್ಲಿದೆ
‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ
‘ದೊಡ್ಡ ಬಜೆಟ್​ ಸಿನಿಮಾಗಳಿಂದ ಲಾಭ ಇಲ್ಲ’; ಕರಣ್ ಜೋಹರ್
‘ನಾವು ಸುಳ್ಳುಬುರುಕರು’; ಬಾಲಿವುಡ್​ನ ಕರಾಳ ಮುಖ ಬಿಚ್ಚಿಟ್ಟ ಕರಣ್ ಜೋಹರ್

ಕಾರ್ತಿಕ್ ಆರ್ಯನ್ ಅವರನ್ನು ಹೊರಗಿನವರು ಎಂದೇ ಎಲ್ಲರೂ ಗುರುತಿಸುತ್ತಾ ಬಂದರು. ಆದರೆ, ಅವರಿಗೆ ಆ ಬಗ್ಗೆ ಬೇಸರ ಇಲ್ಲ. ಇದನ್ನು ಮೆಟ್ಟಿ ಅವರು ನಿಂತಿದ್ದಾರೆ. ಈಗ ಸಾಲುಸಾಲು ಸಿನಿಮಾಗಳು ಹಿಟ್ ಆದ ಬೆನ್ನಲ್ಲೇ ಅವರನ್ನು ಬಾಲಿವುಡ್​ನ ಸ್ಟಾರ್ ಎಂದು ಪರಿಗಣಿಸಲಾಗುತ್ತಿದೆ. ಅವರ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದೆ.

ಇದನ್ನೂ ಓದಿ: ಕರಣ್ ಜೋಹರ್​ಗೆ ಇರೋದು ರೋಗವೇ? ವಿಪರೀತ ತೂಕ ಇಳಿದಿದ್ದಕ್ಕೆ ಕಾರಣ ನೀಡಿದ ನಿರ್ಮಾಪಕ

‘ಭೂಲ್ ಭುಲಯ್ಯ 2’ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಿದಾಗ ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದರಂತೆ. ಅವರಿಗೆ ಗೆಲುವು ಸಿಗುತ್ತದೆಯೋ ಅಥವಾ ಇಲ್ಲವೋ ಎಂದು ಅನುಮಾನಿಸಿದ್ದರಂತೆ. ಕೊನೆಗೂ ಆ ಅನುಮಾನ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us