
ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ವಿವಾದಾತ್ಮಕ ಚಾಟ್ ಶೋ ‘ಕಾಫಿ ವಿತ್ ಕರಣ್’ ತನ್ನ ಕೊನೆಯ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಸುಮಾರು ಎರಡು ದಶಕಗಳ ಕಾಲ ಸೆಲೆಬ್ರಿಟಿಗಳ ಗುಟ್ಟುಗಳು, ಅಳುಕಿಲ್ಲದ ಪ್ರಶ್ನೆಗಳು ಮತ್ತು ಅಚ್ಚರಿಯ ಹೇಳಿಕೆಗಳ ಮೂಲಕ ಸದ್ದು ಮಾಡಿದ್ದ ಈ ಕಾರ್ಯಕ್ರಮದ 9ನೇ ಹಾಗೂ ಅಂತಿಮ ಸೀಸನ್ ಅಕ್ಟೋಬರ್ 14ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈ ಅಂತಿಮ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಬಾಲಿವುಡ್‌ನ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಅತಿಥಿಯಾಗಿ ಭಾಗವಹಿಸುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೀಸರ್‌ನ ಆರಂಭದಲ್ಲೇ ನಿರ್ದೇಶಕ ಹಾಗೂ ನಿರೂಪಕ ಕರಣ್ ಜೋಹರ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಸಲ್ಮಾನ್ ಖಾನ್ ಅವರನ್ನು ಸ್ವಾಗತಿಸುತ್ತಾರೆ. ‘ಒಂದು ಕಾಲದಲ್ಲಿ ಜಾಣರೊಬ್ಬರು ‘ಇಟ್ಸ್ ಡನ್, ಬ್ರೋ’ ಎಂದಿದ್ದರು. ಹಾಗಾಗಿ ನನ್ನ ಈ ಅಂತಿಮ ಸೀಸನ್ ಅನ್ನು ಉದ್ಘಾಟಿಸಲು ಅವರಿಗಿಂತ ಸೂಕ್ತ ವ್ಯಕ್ತಿ ಬೇರೆ ಯಾರಿದ್ದಾರೆ?’ ಎಂದು ಸಲ್ಮಾನ್ ಅವರನ್ನು ಸ್ವಾಗತಿಸುತ್ತಾರೆ.
ನಂತರ ಕಾರ್ಯಕ್ರಮದ ಹಳೆಯ ಸೀಸನ್ ಒಂದನ್ನು ಕರಣ್ ನೆನಪಿಸಿಕೊಂಡರು. ಸಲ್ಮಾನ್ ಖಾನ್ ಈ ಹಿಂದೆ ಕಾರ್ಯಕ್ರಮಕ್ಕೆ ಬಂದಿದ್ದಾಗ ಕೇಳಿದ್ದ ಅದೇ ಕುಖ್ಯಾತ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದ್ದಾರೆ. ‘ನೀವು ಇನ್ನೂ ವರ್ಜಿನ್ ಆಗಿದ್ದೀರಾ?’ ಎಂದು ಕರಣ್ ಹಾಸ್ಯಭರಿತವಾಗಿ ಕೇಳಿದಾಗ, ಸಲ್ಮಾನ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ‘ಕಂಟ್ರೋಲ್, ಯಾ ಬ್ರದರ್, ಕಂಟ್ರೋಲ್’ ಎಂದು ಚುಟುಕಾಗಿ ಉತ್ತರಿಸಿ ನಕ್ಕಿದ್ದಾರೆ.
ಇದು ಶೋನ ಕೊನೆಯ ಸೀಸನ್ ಎಂದು ಕರಣ್ ಘೋಷಿಸಿರುವುದರ ಬಗ್ಗೆಯೂ ಸಲ್ಮಾನ್ ಕಾಲೆಳೆದಿದ್ದಾರೆ. ಇದು ಕೊನೆಯ ಸೀಸನ್ ಎಂದು ಬಿಂಬಿಸಿಯೇ ಸೆಲೆಬ್ರಿಟಿಗಳನ್ನು ಒಪ್ಪಿಸಲಾಗಿದೆ ಎಂದು ಸಲ್ಮಾನ್ ತಮಾಷೆ ಮಾಡಿದ್ದಾರೆ. ಆದರೆ ಅದೇ ಸಮಯದಲ್ಲಿ, ಈ ಜನಪ್ರಿಯ ಶೋ ಮುಕ್ತಾಯಗೊಳ್ಳಬಾರದು ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಯೂಟ್ಯೂಬ್ ಚಾನೆಲ್ ಆರಂಭಿಸಿದ ಸಲ್ಮಾನ್ ಖಾನ್; ಮೊದಲ ವಿಡಿಯೋದಲ್ಲಿ ನಟನೆಯ ಪಾಠ
ಟೀಸರ್‌ನಲ್ಲಿ ಸಲ್ಮಾನ್ ಅವರ ಗಂಭೀರ ಹಾಗೂ ಪ್ರಬುದ್ಧ ವ್ಯಕ್ತಿತ್ವವೂ ಕಾಣಸಿಗುತ್ತದೆ. ಸಲ್ಮಾನ್ ಹಿಂದೆಂದಿಗಿಂತಲೂ ಈಗ ಹೆಚ್ಚು ಶಾಂತರಾಗಿದ್ದಾರೆ ಎಂದು ಕರಣ್ ಹೇಳಿದಾಗ, ಅದಕ್ಕೆ ಉತ್ತರಿಸುವ ಸಲ್ಮಾನ್, ‘ನಾನು ಇತರರಿಗೆ ನೀಡಿದ ಎಲ್ಲಾ ಸಲಹೆಗಳನ್ನು ನಾನೇ ಪಾಲಿಸುವ ಸಮಯ ಈಗ ಬಂದಿದೆ’ ಎಂದು ಬದುಕಿನ ಹೊಸ ಆಯಾಮದ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.