ಜೊತೆಯಾಗಿ ಸುತ್ತಾಡುತ್ತಿರುವ ಶ್ರೀಲೀಲಾ, ಕಾರ್ತಿಕ್ ಆರ್ಯನ್; ಸಿಕ್ತು ಸಾಕ್ಷಿ

ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್ ಅವರು ಈಗ ಶ್ರೀಲೀಲಾ ಜೊತೆ ಸುತ್ತಾಡಲು ಆರಂಭಿಸಿದ್ದಾರೆ. ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ. ಆದರೆ ಅವರಿಬ್ಬರು ತಮ್ಮ ರಿಲೇಷನ್​ಶಿಪ್ ಬಗ್ಗೆ ಮೌನ ಮುರಿದಿಲ್ಲ. ಅನುರಾಗ್ ಬಸು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅವರಿಬ್ಬರು ನಟಿಸುತ್ತಿದ್ದಾರೆ. ಸಿನಿಮಾದ ಆಚೆಗೂ ಅವರ ನಡುವೆ ನಂಟು ಬೆಳೆದಿದೆ.

ಜೊತೆಯಾಗಿ ಸುತ್ತಾಡುತ್ತಿರುವ ಶ್ರೀಲೀಲಾ, ಕಾರ್ತಿಕ್ ಆರ್ಯನ್; ಸಿಕ್ತು ಸಾಕ್ಷಿ
Kartik Aaryan, Sreeleela

Updated on: Jul 03, 2025 | 3:18 PM

ನಟಿ ಶ್ರೀಲೀಲಾ (Sreeleela) ಅವರು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಅಲ್ಲದೇ ಅವರಿಗೆ ಬಾಲಿವುಡ್​ ಕೂಡ ಕೈ ಬೀಸಿ ಕರೆದಿದೆ. ಈಗಾಗಲೇ ಅವರು ಕಾರ್ತಿಕ್ ಆರ್ಯನ್ (Kartik Aaryan) ಜೊತೆಗಿನ ಹೊಸ ಸಿನಿಮಾಗೆ ಶೂಟಿಂಗ್ ಮಾಡುತ್ತಿದ್ದಾರೆ. ಅಚ್ಚರಿ ಏನೆಂದರೆ, ಶೂಟಿಂಗ್ ಹೊರತಾಗಿಯೂ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಬ್ಬರು ಒಟ್ಟಿಗೆ ಡೇಟಿಂಗ್​ಗೆ ತೆರಳಿರುವ ವಿಷಯ ಬಹಿರಂಗ ಆಗಿದೆ. ಇಬ್ಬರೂ ಒಂದೇ ರೆಸ್ಟೋರೆಂಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಇದ್ದ ಅನುಮಾನಕ್ಕೆ ಇನ್ನಷ್ಟು ಬಲ ಬಂದಂತೆ ಆಗಿದೆ.

ಕಾರ್ತಿಕ್ ಆರ್ಯನ್ ಜೊತೆ ಯಾವುದೇ ನಟಿ ಸಿನಿಮಾ ಮಾಡಿದರೂ ಕೂಡ ಗಾಸಿಪ್ ಹುಟ್ಟಿಕೊಳ್ಳುತ್ತದೆ. ಈ ಮೊದಲು ಸಾರಾ ಅಲಿ ಖಾನ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಸಿನಿಮಾ ಹೊರತಾಗಿಯೂ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಫೋಟೋ ಮತ್ತು ವಿಡಿಯೋ ಸಾಕ್ಷಿ ಆಗಿದೆ.

ಇದನ್ನೂ ಓದಿ
ಡ್ಯಾನ್ಸರ್ ಎಂದ ನಿರೂಪಕಿಗೆ ಜಾಡಿಸಿದ ನಟಿ ಶ್ರೀಲೀಲಾ
ಶ್ರೀಲೀಲಾ ಬಗ್ಗೆ ತೆಲುಗು ನಿರ್ಮಾಪಕರ ಬೇಸರ, ಸಂಘಕ್ಕೆ ದೂರು ಸಾಧ್ಯತೆ
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ: ಈ ವಿಚಾರ ಗೊತ್ತೇ?
‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ

ಶ್ರೀಲೀಲಾ ಅವರು ಕಾರ್ತಿಕ್ ಆರ್ಯನ್ ಜೊತೆ ಊಟಕ್ಕೆ ತೆರಳಿದ್ದಾರೆ. ಒಂದೇ ರೆಸ್ಟೋರೆಂಟ್​ನಲ್ಲಿ ಊಟ ಮಾಡಿದ್ದರೂ ಕೂಡ ಅವರು ಅಲ್ಲಿಂದ ಹೊರಡುವಾಗ ಪ್ರತ್ಯೇಕವಾಗಿ ಹೊರಗೆ ಬಂದಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಜೊತೆಯಾಗಿ ಕಾಣಿಸಿಕೊಳ್ಳುವುದು ಬೇಡ ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಕೂಡ ಕೆಲವು ಫೋಟೋಗಳು ಲಭ್ಯವಾಗಿವೆ.

ವೈರಲ್ ಆಗಿರುವ ವಿಡಿಯೋಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೋಡಿ ಚೆನ್ನಾಗಿದೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ತಮ್ಮಿಬ್ಬರ ರಿಲೇಷನ್​​ಶಿಪ್ ಏನು ಎಂಬ ಬಗ್ಗೆ ಅವರಿಬ್ಬರು ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಒಟ್ಟಿನಲ್ಲಿ ಗಾಸಿಪ್ ಜೋರಾಗಿ ಹಬ್ಬುತ್ತಲೇ ಇದೆ.

ಇದನ್ನೂ ಓದಿ: ಶ್ರೀಲೀಲಾ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ: ಕಾರಣವೇನು?

ದಕ್ಷಿಣ ಭಾರತಕ್ಕಿಂತಲೂ ಬಾಲಿವುಡ್ ಕಡೆಗೆ ಶ್ರೀಲೀಲಾ ಅವರಿಗೆ ಆಸಕ್ತಿ ಹೆಚ್ಚಿದಂತಿದೆ. ರಶ್ಮಿಕಾ ಮಂದಣ್ಣ ರೀತಿ ಶ್ರೀಲೀಲಾ ಕೂಡ ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಹಿಟ್ ಆದರೆ ಶ್ರೀಲೀಲಾಗೆ ಅವಕಾಶಗಳ ಹೊಳೆಯೇ ಹರಿಯಲಿದೆ. ತೆಲುಗಿನಲ್ಲಿ ಈಗಾಗಲೇ ಅವರು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.