ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಬ್ಬ ಆಚರಿಸಿದ ಶ್ರೀಲೀಲಾ: ಹೆಚ್ಚಿತು ಅನುಮಾನ

ನಟಿ ಶ್ರೀಲೀಲಾ ಅವರು ತಮ್ಮ ಮೊದಲ ಬಾಲಿವುಡ್​​ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಸ್ಟಾರ್ ನಟ ಕಾರ್ತಿಕ್ ಆರ್ಯನ್​ ಜೊತೆ ಅಭಿನಯಿಸುತ್ತಿದ್ದಾರೆ. ಸಿನಿಮಾದ ಕೆಲಸಗಳ ಹೊರತಾಗಿಯೂ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಗಾಸಿಪ್ ಹಬ್ಬಲು ಇದು ಕಾರಣ ಆಗಿದೆ.

ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಬ್ಬ ಆಚರಿಸಿದ ಶ್ರೀಲೀಲಾ: ಹೆಚ್ಚಿತು ಅನುಮಾನ
Kartik Aaryan

Updated on: Sep 08, 2025 | 10:39 PM

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan) ಜೊತೆ ನಟಿ ಶ್ರೀಲೀಲಾ ಅವರು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಮೂಡಿದೆ. ಈಗಾಗಲೇ ಹಾಡು ಸಖತ್ ಸದ್ದು ಮಾಡುತ್ತಿದೆ. ಶೂಟಿಂಗ್ ಸಂದರ್ಭದ ವಿಡಿಯೋಗಳು ವೈರಲ್ ಆಗಿವೆ. ಇದೆಲ್ಲದರ ನಡುವೆ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡುವೆ ಆಪ್ತತೆ ಹೆಚ್ಚುತ್ತಿದೆ. ಅದಕ್ಕೆ ಹಲವು ಸಾಕ್ಷಿಗಳು ಸಿಗುತ್ತಿವೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ (Sreeleela) ಅವರು ಒಟ್ಟಿಗೆ ಸೇರಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಶ್ರೀಲೀಲಾ ಅವರು ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್​​ನಲ್ಲಿ ಕೂಡ ಅವರಿಗೆ ಅವಕಾಶಗಳು ಹರಿದುಬರುತ್ತಿವೆ. ಹಿಂದಿಯ ಮೊದಲ ಸಿನಿಮಾದಲ್ಲೇ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಜೊತೆ ನಟಿಸುವ ಚಾನ್ಸ್ ಶ್ರೀಲೀಲಾಗೆ ಸಿಕ್ಕಿದೆ. ಅವರಿಬ್ಬರ ಕಾಂಬಿನೇಷನ್ ಬಗ್ಗೆ ಸಿನಿಪ್ರಿಯರಿಗೆ ಭರವಸೆ ಮೂಡಿದೆ. ಜೊತೆಗೆ ಅನುಮಾನಗಳೂ ಹುಟ್ಟಿಕೊಂಡಿವೆ.

ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಗುಮಾನಿ ಇದೆ. ಅದಕ್ಕೆ ಪೂರಕವಾಗಿ ಕಾರ್ತಿಕ್ ಆರ್ಯನ್ ಅವರ ಮನೆಯ ಗಣೇಶ ಹಬ್ಬದಲ್ಲಿ ಶ್ರೀಲೀಲಾ ಪಾಲ್ಗೊಂಡಿದ್ದಾರೆ. ಒಂದೇ ಬಣ್ಣದ ಡ್ರೆಸ್ ಹಾಕಿಕೊಂಡು ಅವರಿಬ್ಬರು ಮಿಂಚಿದ್ದಾರೆ. ಎರಡೂ ಕುಟುಂಬದವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಫೋಟೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಅವರ ಜೋಡಿ ಚೆನ್ನಾಗಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಂತ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುವಂತಿಲ್ಲ. ಕಾರ್ತಿಕ್ ಆರ್ಯನ್ ಯಾವ ನಟಿಯ ಜೊತೆ ಸಿನಿಮಾ ಮಾಡಿದರೂ ಈ ರೀತಿಯ ಡೇಟಿಂಗ್ ವದಂತಿ ಹಬ್ಬಿಸುವುದು ಸಹಜ ಎಂಬಂತಾಗಿದೆ.

ಇದನ್ನೂ ಓದಿ: ಮತ್ತೊಂದು ಬಾಲಿವುಡ್ ಬಿಗ್ ಬಜೆಟ್ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ

ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾಗೆ ಇನ್ನೂ ಟೈಟಲ್ ಏನೆಂಬುದು ಬಹಿರಂಗ ಆಗಿಲ್ಲ. ಖ್ಯಾತ ನಿರ್ದೇಶಕ ಅನುರಾಗ್ ಬಸು ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಗಾಢವಾದ ಲವ್ ಸ್ಟೋರಿ ಇರಲಿದೆ. ‘ತು ಮೇರಿ ಜಿಂದಗಿ ಹೈ..’ ಹಾಡಿನ ಮೂಲಕ ಈ ಸಿನಿಮಾ ಮೇಲಿನ ಹೈಪ್ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.