AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಟನೆ ಬಗ್ಗೆ ಆಸಕ್ತಿ ಇಲ್ಲ, ಗೂಂಡಾಗಿರಿ ಮಾತ್ರ ಗೊತ್ತು’; ಸಲ್ಲು ವಿರುದ್ಧ ಅವರದ್ದೇ ಸಿನಿಮಾ ನಿರ್ದೇಶಕನ ಆರೋಪ

ದಬಾಂಗ್ ಚಿತ್ರದ 15ನೇ ವಾರ್ಷಿಕೋತ್ಸವದಲ್ಲಿ, ನಿರ್ದೇಶಕ ಅಭಿನವ್ ಕಶ್ಯಪ್ ಅವರು ಸಲ್ಮಾನ್ ಖಾನ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಗೆ ನಟನೆಯಲ್ಲಿ ಆಸಕ್ತಿ ಇಲ್ಲ ಮತ್ತು ಅವರು ಗೂಂಡಾ ಎಂದು ಅಭಿನವ್ ಹೇಳಿದ್ದಾರೆ. ಈ ಹೇಳಿಕೆ ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

‘ನಟನೆ ಬಗ್ಗೆ ಆಸಕ್ತಿ ಇಲ್ಲ, ಗೂಂಡಾಗಿರಿ ಮಾತ್ರ ಗೊತ್ತು’; ಸಲ್ಲು ವಿರುದ್ಧ ಅವರದ್ದೇ ಸಿನಿಮಾ ನಿರ್ದೇಶಕನ ಆರೋಪ
ಸಲ್ಮಾನ್-ಅಭಿನವ್
ರಾಜೇಶ್ ದುಗ್ಗುಮನೆ
|

Updated on: Sep 08, 2025 | 11:43 AM

Share

ಸಲ್ಮಾನ್ ಖಾನ್ (Salman Khan) ನಟನೆಯ ‘ದಬಂಗ್’ ಚಿತ್ರಕ್ಕೆ 15 ವರ್ಷಗಳು ಪೂರ್ಣಗೊಳ್ಳುವುದರಲ್ಲಿದೆ. ಹೀಗಿರುವಾಗಲೇ ಈ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ ಅವರು ಸಲ್ಲು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಲ್ಮಾನ್ ಖಾನ್​ಗೆ ನಟನೆ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅವರನ್ನು ಗೂಂಡಾ ಎಂದು ಕೂಡ ಕರೆದಿದ್ದಾರೆ. ಸದ್ಯ ಅವರು ನೀಡಿರುವ ಹೇಳಿಕೆ ಎಲ್ಲೆಡೆ ಚರ್ಚೆ ಆಗುತ್ತಾ ಇದೆ.

2010ರಲ್ಲಿ ‘ದಬಾಂಗ್’ ಸಿನಿಮಾ ರಿಲೀಸ್ ಆಯಿತು. ಆಗಿನ ಕಾಲದಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತು. ಅಭಿನವ್ ಅವರು ಸಲ್ಲು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಸಲ್ಮಾನ್ ಖಾನ್ ಅವರು ಸಿನಿಮಾ ಬಗ್ಗೆ ಯಾವಾಗಲೂ ಆಸಕ್ತಿ ತೋರಿಸಿಲ್ಲ. ನಟನೆಯ ಬಗ್ಗೆ ಅವರಿಗೆ ಆಸಕ್ತಿಯೇ ಇಲ್ಲ. ಕಳೆದ 25 ವರ್ಷಗಳಿಂದ ಇದೇ ನಡೆದುಕೊಂಡು ಬಂದಿದೆ. ಸೆಲೆಬ್ರಿಟಿ ಎನ್ನುವ ಟ್ಯಾಗ್ ಅವರಿಗೆ ಬೇಕಷ್ಟೆ. ಅವರು ಗೂಂಡಾ’ ಎಂದಿದ್ದಾರೆ ಅಭಿನವ್.

‘ಬಾಲಿವುಡ್​ನ ಸ್ಟಾರ್​ಗಿರಿ ವ್ಯವಸ್ಥೆಯ ಪಿತಾಮಹನೇ ಸಲ್ಮಾನ್ ಖಾನ್. ಅವರು ಸಿನಿಮಾ ಕುಟುಂಬ ಹಿನ್ನೆಲೆಯಿಂದ ಬಂದವರು. ಅವರು ಆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಸೇಡಿನ ಮನುಷ್ಯ. ಅವರು ಸಂಪೂರ್ಣ ಪ್ರಕ್ರಿಯೆಯನ್ನೇ ನಿಯಂತ್ರಿಸುತ್ತಾರೆ. ಅವರು ಹೇಳಿದಂತೆ ಕೇಳದಿದ್ದರೆ ನಿಮಗೆ ತೊಂದರೆ ಗ್ಯಾರಂಟಿ’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
Image
‘ಹಳ್ಳಿ ಪವರ್​​’ನಲ್ಲಿ ಮೊದಲ ವಾರವೇ ಇಬ್ಬರು ಎಲಿಮಿನೇಟ್
Image
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
Image
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

ಅಭಿನವ್ ಕಶ್ಯಪ್ ಸಹೋದರ ಅನುರಾಗ್ ಕಶ್ಯಪ್ ಕೂಡ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. 2003ರಲ್ಲಿ ಸಲ್ಲು ಹಾಗೂ ಅನುರಾಗ್ ಸಿನಿಮಾ ಮಾಡಬೇಕಿತ್ತು. ಆದರೆ, ಬೋನಿ ಕಪೂರ್ ಜೊತೆಗೆ ಆದ ಕಿರಿಕ್​ನಿಂದ ಅನುರಾಗ್ ಅವರು ಹೊರ ನಡೆದರು. ‘ನನ್ನ ಸಹೋದರ ಅನುರಾಗ್​ಗೂ ತೊಂದರೆ ಆಯಿತು. ಸಲ್ಮಾನ್ ಜೊತೆ ನಿನಗೆ ಸಿನಿಮಾ ಮಾಡೋದು ಸುಲಭ ಇಲ್ಲ ಎಂದು ಅನುರಾಗ್ ನನಗೆ ಸಲಹೆ ನೀಡಿದ್ದ. ಆದರೆ, ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದನ್ನು ಏಕೆ ಹೇಳಿದ್ದ ಎಂಬುದು ನನಗೆ ಆರಂಭದಲ್ಲಿ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ ಪಡ್ತೀನಿ’; ಸಲ್ಮಾನ್ ಖಾನ್

ಸಲ್ಲು ವಿರುದ್ಧ ಅಭಿನವ್ ಈ ಮೊದಲೂ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಈ ಬಗ್ಗೆ ಸಲ್ಮಾನ್ ಖಾನ್ ಅವರು ಎಂದಿಗೂ ಮಾತನಾಡಿಲ್ಲ. ಅವರು ಈ ವಿಚಾರದಲ್ಲಿ ಮೌನ ತಾಳಿಕೊಂಡುಕೊಂಡು ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.