ಸಂಜಯ್ ದತ್ಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಹಣ ಎಷ್ಟು?
Sanjay Dutt: ಸಂಜಯ್ ದತ್ ಅವರು ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ರೇಡಿಯೋ ಕಾರ್ಯಕ್ರಮ ನಡೆಸಿದ್ದು, ನಾಟಕ ಕಂಪನಿ ಸ್ಥಾಪಿಸಿದ್ದು, ಕುರ್ಚಿ ಮತ್ತು ಪೇಪರ್ ಬ್ಯಾಗ್ ತಯಾರಿಸುವ ಮೂಲಕ ಹಣ ಗಳಿಸಿದ್ದರು. ಜೈಲಿನಲ್ಲಿ ಅವರು ಸಾಕಷ್ಟು ಕಷ್ಟಗಳನ್ನು ನೋಡಿದ್ದರು.

ನಟ ಸಂಜಯ್ ದತ್ (Sanjay Dutt) ಬಗ್ಗೆ ಇಂದು ಯಾವುದೇ ಪರಿಚಯದ ಅಗತ್ಯವಿಲ್ಲ. ಇವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣದಲ್ಲೂ ಹೆಸರು ಮಾಡಿದ್ದಾರೆ. ಈ ನಟ ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತಮ್ಮ ಖಾಸಗಿ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಈ ನಟ ತಮ್ಮ ಜೀವನದ ಬಗ್ಗೆ ಅನೇಕ ಬಹಿರಂಗಪಡಿಸುವಿಕೆಗಳನ್ನು ಮಾಡಿದ್ದಾರೆ. ಅಲ್ಲಿ ನಟ ತಮ್ಮ ಜೀವನದ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಜೈಲಿನಲ್ಲಿ ಕಳೆದ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ
ಸಂಜಯ್ ದತ್ ತಮ್ಮ ಸ್ನೇಹಿತ ಮತ್ತು ನಟ ಸುನಿಲ್ ಶೆಟ್ಟಿ ಅವರೊಂದಿಗೆ ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಆಗಮಿಸಿದ್ದರು. ಈ ಬಾರಿ, ನಟ ತಮ್ಮ ಕೆಲವು ದಿನಗಳ ಜೈಲುವಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಜಯ್ ದತ್ ಜೈಲಿನಲ್ಲಿ ಕೆಲಸ ಮಾಡುತ್ತಿದ್ದರು, ಅದಕ್ಕಾಗಿ ಅವರಿಗೆ ಸಂಭಾವನೆಯೂ ಸಿಗುತ್ತಿತ್ತು.
ಸಂಜಯ್ ದತ್ ಜೈಲಿನಲ್ಲಿ ತಮ್ಮದೇ ಆದ ರೇಡಿಯೋ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಇದಲ್ಲದೆ, ನಟ ನಾಟಕ ಕಂಪನಿಯನ್ನು ಸಹ ಸ್ಥಾಪಿಸಿದ್ದರು. ಇದಲ್ಲದೆ, ಸಂಜಯ್ ಜೈಲಿನಲ್ಲಿ ಕುರ್ಚಿಗಳು ಮತ್ತು ಪೇಪರ್ ಬ್ಯಾಗ್‌ಗಳನ್ನು ತಯಾರಿಸುವ ಮೂಲಕವೂ ಹಣ ಸಂಪಾದಿಸಿದರು.
‘ನಾನು ಜೈಲಿನಲ್ಲಿ ನಾನು ನಾಟಕ ಕೂಡ ಮಾಡಿಸಿದೆ. ಕೊಲೆ ಮಾಡಿದ ಜನರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ನಾನು ಕೈದಿಗಳಿಂದ ನಾಟಕಗಳಿಗೆ ಕಥೆಗಳನ್ನು ಬರೆಯುತ್ತಿದ್ದೆ’ ಎಂದು ಅವರು ಹೇಳಿದ್ದಾರೆ. ಸಂಜಯ್ ದತ್ ಅವರು 38 ಸಾವಿರ ರೂಪಾಯಿ ಹಣವನ್ನು ಗಳಿಕೆ ಮಾಡಿದ್ದರು. ಇದರಲ್ಲಿ ಅವರು ಜೈಲಿನಲ್ಲಿ ದಿನ ನಿತ್ಯ ಬಳಕೆ ವಸ್ತುಗಳನ್ನು ಖರೀದಿ ಮಾಡಿದ್ದರು. ಇದರಿಂದ ಅವರಿಗೆ ಕೊನೆಯಲ್ಲಿ ಉಳಿದಿದ್ದು 450 ರೂಪಾಯಿ ಮಾತ್ರ.
1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ಕೇಳಿಬಂದಿತ್ತು. ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಹಲವಾರು ಬಾರಿ ಜೈಲಿಗೆ ಹೋಗಬೇಕಾಯಿತು. ಅವರು ಐದು ವರ್ಷಗಳ ಕಾಲ ಜೈಲಿನಲ್ಲಿದ್ದರು. ಇವು ನಟನ ಜೀವನದ ಅತ್ಯಂತ ಕಠಿಣ ದಿನಗಳು.
ಇದನ್ನೂ ಓದಿ: ಸಂಜಯ್ ದತ್ ಬಗ್ಗೆ ಅಸಮಾಧಾನ ಹೊರಹಾಕಿದ ಮಗಳು ತ್ರಿಶಾಲಾ; ದೊಡ್ಡದಾಯ್ತು ಬಿರುಕು
ಸಂಜಯ್ ದತ್ ಬಗ್ಗೆ ಹೇಳುವುದಾದರೆ, ನಟ ‘ಬಾಘಿ 4′ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. 66 ನೇ ವಯಸ್ಸಿನಲ್ಲೂ ನಟ ಇನ್ನೂ ದೊಡ್ಡ ಪರದೆಯಲ್ಲಿ ಸಕ್ರಿಯರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







