ಸಂಜಯ್ ದತ್ ಬಗ್ಗೆ ಅಸಮಾಧಾನ ಹೊರಹಾಕಿದ ಮಗಳು ತ್ರಿಶಾಲಾ; ದೊಡ್ಡದಾಯ್ತು ಬಿರುಕು
Sanjay Dutt: ಸಂಜಯ್ ದತ್ ಬಾಲಿವುಡ್ನ ವಿವಾದಾತ್ಮಕ ನಟ. ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಅವರು ಎದುರಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರು ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಖಾಸಗಿ ಜೀವನದಲ್ಲಿಯೂ ಹಲವು ಏಳು-ಬೀಳುಗಳನ್ನು ಎದುರುಗೊಂಡಿದ್ದಾರೆ. ಕೆಲ ವಿಚ್ಛೇದನಗಳು ಸಹ ಆಗಿವೆ. ಇದೀಗ ಸಂಜಯ್ ದತ್ ಪುತ್ರಿ ತಂದೆಯ ವಿರುದ್ಧ ಪರೋಕ್ಷ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟ ಸಂಜಯ್ ದತ್ (Sanjay Dutt) ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿ ತ್ರಿಶಾಲ ದತ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಿಂದಾಗಿ ಸಂಜಯ್ ಮತ್ತು ತ್ರಿಶಾಲ ನಡುವಿನ ಸಂಬಂಧ ಎಲ್ಲೆಡೆ ಚರ್ಚೆಯಾಗುತ್ತಿದೆ. ತ್ರಿಶಾಲ ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಪೋಸ್ಟ್ ನೋಡಿದ ನಂತರ, ಸಂಜಯ್ ದತ್ ಮತ್ತು ತ್ರಿಶಾಲ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆಯೇ ಎಂದು ಅನೇಕರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಕುಟುಂಬದ ಇಮೇಜ್ ಅನ್ನು ಕಾಪಾಡುವುದಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು’ ಎಂದು ತ್ರಿಶಾಲ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತ್ರಿಶಾಲ , ‘ಪ್ರತಿಯೊಬ್ಬ ವ್ಯಕ್ತಿಯು ನಿಮ್ಮ ಜೀವನದಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಎಲ್ಲಾ ಸಮಯದಲ್ಲೂ ಆಗುವುದಿಲ್ಲ. ನೀವು ರಕ್ತಸಂಬಂಧಿಗಳಾಗಿದ್ದರೂ ಸಹ, ಅದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅತ್ಯಂತ ದಣಿದ, ಅಸಮ್ಮತಿ ಸೂಚಿಸುವ ಮತ್ತು ತಿರಸ್ಕರಿಸುವ ಜನರು ನಿಮ್ಮ ಸ್ವಂತ ಕುಟುಂಬವಾಗುತ್ತಾರೆ, ಅದು ಯಾವಾಗ ಎಂದು ನಿಮಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಾಂತಿಯನ್ನು ಬಯಸುತ್ತಾರೆ. ಕುಟುಂಬದ ಇಮೇಜ್ ಅನ್ನು ಕಾಪಾಡಿಕೊಳ್ಳುವುದಕ್ಕಿಂತ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ’ ಎಂದು ಹೇಳಿದ್ದಾರೆ.
‘ನಿರಂತರವಾಗಿ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮತ್ತು ನೋಯಿಸುವ ಜನರಿಂದ ದೂರವಿರಿ. ಹಾಗಾದರೆ ಆ ವ್ಯಕ್ತಿ ನಿಮ್ಮನ್ನು ನೋಡಿಕೊಂಡಿದ್ದರೂ ಪರವಾಗಿಲ್ಲ. ಆ ವ್ಯಕ್ತಿಯನ್ನು ನಿಮ್ಮ ಹತ್ತಿರಕ್ಕೂ ಬರಲು ಬಿಡಬೇಡಿ. ಪೋಷಕರು ಕುಟುಂಬ ಹೇಗಿದೆ ಎನ್ನುವುದಕ್ಕಿಂತ ಜಗತ್ತಿನಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸಿದಾಗ, ಅದು ಒಂದು ಸಮಸ್ಯೆಯಾಗಿದೆ’ ಎಂದು ತ್ರಿಶಾಲ ಪೋಸ್ಟ್‌ನಲ್ಲಿ ಹೇಳಿದ್ದಾರೆ .
ಇದನ್ನೂ ಓದಿ:66ನೇ ವಯಸ್ಸಿಗೆ ಕಾಲಿಟ್ಟ ಸಂಜಯ್ ದತ್; ಈಗಲೂ ಸಖತ್ ಬೇಡಿಕೆ
ಸಂಜಯ್ ದತ್ ಮತ್ತು ತ್ರಿಶಾಲಾ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ಎಂಬ ವಿಚಾರ ಆಗಾಗ್ಗ ಬೆಳಕಿಗೆ ಬರುತ್ತಲೇ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲೂ ಅವರ ಸಂಬಂಧದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಆದರೆ ತ್ರಿಶಾಲಾ ಕೂಡ ತಂದೆಯ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಆದರೆ ಈಗ ನಿಗೂಢ ಪೋಸ್ಟ್ ನಂತರ, ಅವರ ಸಂಬಂಧದ ಬಗ್ಗೆ ಚರ್ಚೆಗಳು ಮತ್ತೆ ಪ್ರಾರಂಭವಾಗಿವೆ.
ತ್ರಿಶಾಲಾ ಬಣ್ಣದ ಪ್ರಪಂಚದಿಂದ ದೂರವಾಗಿ ವಿಭಿನ್ನ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ತ್ರಿಶಾಲಾ ಅಮೆರಿಕದಲ್ಲಿ ಮನೋವೈದ್ಯೆ. ತ್ರಿಶಾಲಾ ಸಾಮಾಜಿಕ ಮಾಧ್ಯಮದಲ್ಲಿಯೂ ಸದಾ ಸಕ್ರಿಯರಾಗಿದ್ದಾರೆ. ತ್ರಿಶಾಲಾ ತನ್ನ ಅಜ್ಜಿಯರೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



