ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳಲು ಹೆಲಿಕಾಪ್ಟರ್​ ಏರಿದ ಕತ್ರಿನಾ-ವಿಕ್ಕಿ; ಫೋಟೋ ವೈರಲ್​

| Updated By: ರಾಜೇಶ್ ದುಗ್ಗುಮನೆ

Updated on: Dec 10, 2021 | 4:50 PM

ಕತ್ರಿನಾ ಹಾಗೂ ವಿಕ್ಕಿ ಮದುವೆ ಆಗುವ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ವಿಚಾರದಲ್ಲಿ ಗುಟ್ಟು ಕಾಯ್ದುಕೊಂಡಿದ್ದರು. ಆದರೂ, ವಿಷಯ ಲೀಕ್​ ಆಗಿತ್ತು.

ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳಲು ಹೆಲಿಕಾಪ್ಟರ್​ ಏರಿದ ಕತ್ರಿನಾ-ವಿಕ್ಕಿ; ಫೋಟೋ ವೈರಲ್​
Follow us on

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​​ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ತುಂಬಾನೇ ಗುಟ್ಟಾಗಿ ಈ ಜೋಡಿ ಹಸೆಮಣೆ ಏರಿದೆ. ಇವರ ಮದುವೆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಲೈಕ್​ಗಳ ಮರೆ ಸುರಿದಿದೆ. ಪರಿಣಾಮ ಕತ್ರಿನಾ ಹಾಕಿದ ಫೋಟೋಗೆ ಬಂದ ಲೈಕ್​ಗಳ ಸಂಖ್ಯೆ ಒಂದು ಕೋಟಿ ಸಮೀಪಿಸಿದೆ. ಮದುವೆಗೂ ಮೊದಲು ಹಾಗೂ ಮದುವೆ ನಂತರದಲ್ಲಿ ಇವರ ಬಗ್ಗೆ ಹರಿದಾಡಿದ ಸುದ್ದಿಗಳು ಒಂದೆರಡಲ್ಲ. ಈಗ ಕತ್ರಿನಾ ಮತ್ತು ವಿಕ್ಕಿ ಹೆಲಿಕ್ಯಾಪ್ಟರ್ ಏರಿದ್ದಾರೆ. ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳೋಕೆ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕತ್ರಿನಾ ಹಾಗೂ ವಿಕ್ಕಿ ಮದುವೆ ಆಗುವ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ವಿಚಾರದಲ್ಲಿ ಗುಟ್ಟು ಕಾಯ್ದುಕೊಂಡಿದ್ದರು. ಆದರೂ, ವಿಷಯ ಲೀಕ್​ ಆಗಿತ್ತು. ಕತ್ರಿನಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು. ದೇಶಕ್ಕೆ ದೇಶವೇ ಈ ಬಗ್ಗೆ ಚರ್ಚೆ ಮಾಡುತ್ತಿದ್ದರೂ ಈ ಜೋಡಿ ಮಾತ್ರ ಈ ಬಗ್ಗೆ ಮೌನ ತಾಳಿತ್ತು. ಇದೊಂದು ಸುಳ್ಳಿನ ಕಂತೆ ಎಂದು ಕತ್ರಿನಾ ಆಪ್ತರು ಹೇಳಿಕೊಂಡಿದ್ದರು. ಇವರ ಮದುವೆ ಡಿಸೆಂಬರ್​ 9ರಂದು ನೆರವೇರಿದೆ. ಈಗ ಮರಳಿ ಇಬ್ಬರೂ ಮುಂಬೈಗೆ ತೆರಳಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಮದುವೆ ಆಗಿದ್ದಾರೆ. ಡಿಸೆಂಬರ್​ 7ರಿಂದ 10ರವರೆಗೆ ಮದುವೆ ಕಾರ್ಯಕ್ರಮ ನಡೆದಿದೆ. ಇಂದು (ಡಿಸೆಂಬರ್​ 10) ಈ ಜೋಡಿ ಮರಳಿ ಮುಂಬೈಗೆ ಹೊರಟಿದೆ. ರಸ್ತೆ ಮಾರ್ಗದ ಮೂಲಕ ಹೋದರೆ ಮಾಧ್ಯಮಗಳು ಎದುರಾಗುವ ಸಾಧ್ಯತೆ ಇರುತ್ತದೆ. ಏರ್​ಪೋರ್ಟ್​ ಎಂಟರ್​ ಆಗುತ್ತಿದ್ದಂತೆ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಇದರಿಂದ ತಪ್ಪಿಸಿಕೊಳ್ಳೋಕೆ ಇಬ್ಬರೂ ಚಾಪರ್​ ಮೂಲಕ ಜೈಪುರ ವಿಮಾನ ನಿಲ್ದಾಣ ತಲುಪಿದ್ದಾರೆ. ಸದ್ಯ, ಈ ಫೋಟೋಗಳು ವೈರಲ್​ ಆಗುತ್ತಿವೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಇಬ್ಬರ ಕೈಯಲ್ಲೂ ಹಲವು ಸಿನಿಮಾಗಳಿವೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಈ ಜೋಡಿಹಕ್ಕಿಗಳು ಅದ್ದೂರಿಯಾಗಿಯೇ ಹಸೆಮಣೆ ಏರಿವೆ. ಮದುವೆಗಾಗಿ ಸಿಕ್ಕಾಪಟ್ಟೆ ವೆಚ್ಚ ಮಾಡಲಾಗಿದೆ. ಕೇವಲ ಈ ಒಂದು ಉಂಗುರಕ್ಕೆ 7.4 ಲಕ್ಷ ರೂ. ನೀಡಲಾಗಿದೆ! ಇಷ್ಟು ಹಣದಲ್ಲಿ ಮಧ್ಯಮವರ್ಗದವರು ಮದುವೆಯ ಎಲ್ಲ ಖರ್ಚುವೆಚ್ಚವನ್ನು ಭರಿಸಬಹುದು ಅಂತ ಜನರು ಕಮೆಂಟ್​ ಮಾಡುತ್ತಿದ್ದಾರೆ. ಕೇವಲ ಒಂದು ಉಂಗುರಕ್ಕೆ ಇಷ್ಟು ಖರ್ಚಾದರೆ ಪೂರ್ತಿ ಮದುವೆಗೆ ಎಷ್ಟು ಕೋಟಿ ರೂಪಾಯಿ ತಗುಲಿರಬಹುದು ಎಂದು ಊಹಿಸಲಾಗುತ್ತಿದೆ.

ಇದನ್ನೂ ಓದಿ: ಕತ್ರಿನಾ​ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್​; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ

ಕತ್ರಿನಾ ಕೈಫ್​ಗೆ ವಿಶ್​ ಮಾಡಿ ಟ್ರೋಲ್​ ಆದ ಕರೀನಾ ಕಪೂರ್​; ಇದಕ್ಕಿದೆ ರಣಬೀರ್​ ಲಿಂಕ್​