ಕತ್ರಿನಾ ಕೈಫ್​-ವಿಕ್ಕಿ ವಿವಾಹಕ್ಕೆ ಕೊರೊನಾ ಅಡ್ಡಗಾಲು; ಮದುವೆ ಬಗ್ಗೆ ಹೊಸ ಅಪ್​ಡೇಟ್​

| Updated By: ರಾಜೇಶ್ ದುಗ್ಗುಮನೆ

Updated on: Nov 29, 2021 | 4:26 PM

ಡಿಸೆಂಬರ್​ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ.

ಕತ್ರಿನಾ ಕೈಫ್​-ವಿಕ್ಕಿ ವಿವಾಹಕ್ಕೆ ಕೊರೊನಾ ಅಡ್ಡಗಾಲು; ಮದುವೆ ಬಗ್ಗೆ ಹೊಸ ಅಪ್​ಡೇಟ್​
ವಿಕ್ಕಿ ಕೌಶಲ್​, ಕತ್ರಿನಾ ಕೈಫ್
Follow us on

 ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ಆಗುತ್ತಿರುವ ವಿಚಾರದ ಬಗ್ಗೆ ಸಾಕಷ್ಟು ಅಪ್​ಡೇಟ್​ಗಳು ಕೇಳಿ ಬರುತ್ತಲೇ ಇದೆ. ಈ ಜೋಡಿ ಮದುವೆ ಆಗುತ್ತಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇವರು ಮದುವೆ ಆಗುತ್ತಿರುವ ವಿಚಾರ ಬಹುತೇಕ ಖಚಿತವಾಗಿದೆ. ರಾಜಸ್ಥಾನದ ಸವಾಯಿ ಮಾಧೋಪುರ್​ನಲ್ಲಿ ಮದುವೆ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಇವುಗಳ ಮಧ್ಯೆ ಈ ಜೋಡಿ ಮದುವೆಗೆ ಕೊವಿಡ್​ ಕೆಂಗಣ್ಣು ಬಿದ್ದಿದೆ. ಈ ಕಾರಣಕ್ಕೆ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಹಾಗಾದರೆ ಎನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಡಿಸೆಂಬರ್​ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ಹೋಗಿದೆ. ಹೀಗಿರುವಾಗಲೇ ಭಾರತದಲ್ಲಿ ಕೊವಿಡ್​ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಿಯೂ ಪತ್ತೆ ಆಗಿದೆ. ಈ ಕಾರಣಕ್ಕೆ ಮದುವೆಗೆ ಸಮಸ್ಯೆ ಎದುರಾಗುವ ಸೂಚನೆ ಸಿಕ್ಕಿದೆ.

ಕೊವಿಡ್ ರೂಪಾಂತರಿ ಒಮಿಕ್ರಾನ್ ವೈರಸ್ ಆತಂಕ ಹೆಚ್ಚಾಗಿದೆ. ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ ಏರ್ಪಡಿಸೋದು ಅಪಾಯಕಾರಿ. ಒಬ್ಬರಿಗೆ ಕೊವಿಡ್​ ಅಂಟಿದ್ದರೂ ಹಲವರಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ಇದು ಸೆಲೆಬ್ರಿಟಿ ಮದುವೆ. ಈ ಕಾರಣಕ್ಕೆ ವಿವಾಹಕ್ಕೆ ಬರುವ ಬಹುತೇಕರು ಸೆಲೆಬ್ರಿಟಿಗಳೇ ಆಗಿರುತ್ತಾರೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಹೀಗಾಗಿ, ಕತ್ರಿನಾ-ವಿಕ್ಕಿ ಜೋಡಿ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ.

ಈಗಾಗಲೇ ಮದುವೆ ಆಗುವ ಪ್ರದೇಶದ ಸುತ್ತಮುತ್ತಲು 45 ಹೋಟೆಲ್​ಗಳು ಬುಕ್​ ಆಗಿವೆ. 200 ಅತಿಥಿಗಳು ಮದುವೆಗೆ ಬರುತ್ತಿದ್ದಾರೆ. ಈಗ ಕೊವಿಡ್​ ಭಯದಿಂದ ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್​ ಆಯೋಜಿಸಿ, ಆಗ ಹೆಚ್ಚಿನ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡಲು ಚಿಂತಿಸಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಕತ್ರಿನಾ ಕೈಫ್​-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್​

ಕತ್ರಿನಾ ಮದುವೆಗೆ ಬರ್ತಿಲ್ಲ ಸಲ್ಮಾನ್​ ಖಾನ್​? ಭರ್ಜರಿಯಾಗಿ ನಡೆಯಲಿದೆ ಸಂಗೀತ್ ಕಾರ್ಯಕ್ರಮ