ಕತ್ರಿನಾ ಮದುವೆಗೆ ಬರ್ತಿಲ್ಲ ಸಲ್ಮಾನ್​ ಖಾನ್​? ಭರ್ಜರಿಯಾಗಿ ನಡೆಯಲಿದೆ ಸಂಗೀತ್ ಕಾರ್ಯಕ್ರಮ

ವಿಕ್ಕಿ ಕೌಶಲ್​ ‘ಭೂತ್​’ ಹಾಗೂ ‘ಗೋವಿಂದ್​ ಮೆರಾ ನಾಮ್​’ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಶಶಾಂಕ್​ ಖೈತಾನ್​ ಜತೆ ವಿಕ್ಕಿಗೆ ಒಳ್ಳೆಯ ಬಾಂಧವ್ಯ ಇದೆ. ಮೊದಲ ಅತಿಥಿಯಾಗಿ ಅವರಿಗೆ ಆಮಂತ್ರಣ ಹೋಗಿದೆ.

ಕತ್ರಿನಾ ಮದುವೆಗೆ ಬರ್ತಿಲ್ಲ ಸಲ್ಮಾನ್​ ಖಾನ್​? ಭರ್ಜರಿಯಾಗಿ ನಡೆಯಲಿದೆ ಸಂಗೀತ್ ಕಾರ್ಯಕ್ರಮ
ಸಲ್ಮಾನ್​-ಕತ್ರಿನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 28, 2021 | 4:44 PM

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಜೋಡಿ ಮದುವೆ ಆಗುತ್ತಿಲ್ಲ ಎಂದು ಕತ್ರಿನಾ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸದ್ದಿಲ್ಲದೆ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ವಿವಾಹ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಒಬ್ಬೊಬ್ಬರಾಗಿ ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರ ತಲುಪುತ್ತಿದೆ. ಮದುವೆಗೂ ಮೊದಲು ಭರ್ಜರಿಯಾಗಿ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಈಗ ವರದಿಯೊಂದು ಹೊರ ಬಿದ್ದಿದೆ.

ವಿಕ್ಕಿ ಕೌಶಲ್​ ‘ಭೂತ್​’ ಹಾಗೂ ‘ಗೋವಿಂದ್​ ಮೆರಾ ನಾಮ್​’ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಶಶಾಂಕ್​ ಖೈತಾನ್​ ಜತೆ ವಿಕ್ಕಿಗೆ ಒಳ್ಳೆಯ ಬಾಂಧವ್ಯ ಇದೆ. ಮೊದಲ ಅತಿಥಿಯಾಗಿ ಅವರಿಗೆ ಆಮಂತ್ರಣ ಹೋಗಿದೆ. ಮೂಲಗಳ ಪ್ರಕಾರ ಪಂಜಾಬ್​ ಶೈಲಿಯಲ್ಲಿ ಹಸೆಮಣೆ ಏರುವ ಸಮಾರಂಭ ನಡೆಯಲಿದೆಯಂತೆ.

ಇನ್ನು, ಮದುವೆ ಹಿಂದಿನ ದಿನ ಸಂಗೀತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ದೊಡ್ಡದೊಡ್ಡ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ವಿಕ್ಕಿ ಜತೆ ಒಳ್ಳೆಯ ಗೆಳೆತನ ಹೊಂದಿರುವ ಕರಣ್​ ಜೋಹರ್​ ಅವರು ವರನ ಕಡೆಯಿಂದ ಹಾಗೂ ಕತ್ರಿನಾಗೆ ಕ್ಲೋಸ್​ ಇರುವ ಫರ್ಹಾ ಖಾನ್​ ವಧು ಕಡೆಯಿಂದ ಸಂಗೀತ್​ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.

ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಶರ್ಮಾ ಹಾಗೂ ಅಲ್ವಿರಾ ಅಗ್ನಿಹೋತ್ರಿ ಈ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸಲ್ಮಾನ್​ ಖಾನ್​ ಅವರು ಈ ವಿವಾಹ ಸಮಾರಂಭ ಪಾಲ್ಗೊಳ್ಳುತ್ತಿಲ್ಲ ಎಂದು ವರದಿ ಆಗಿದೆ. ಸಲ್ಮಾನ್​ ಖಾನ್​ ಉದ್ದೇಶಪೂರ್ವಕವಾಗಿಯೇ ಈ ಮದುವೆಗೆ ಬರುತ್ತಿಲ್ಲ ಎನ್ನಲಾಗಿದೆ.

ಶಾರುಖ್​ ಖಾನ್​ ಅವರು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ 200 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಬಹುತೇಕರು ಸೆಲೆಬ್ರಿಟಿಗಳು. ಎಲ್ಲರಿಗೂ ಉಳಿದುಕೊಳ್ಳೋಕೆ ಹೋಟೆಲ್​ನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್​ 9ರಂದು ಮದುವೆ ಸಮಾರಂಭ ನಡೆಯಲಿದೆ.  ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಮದುವೆ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ:  ‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ​ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್​ ಸಂಬಂಧಿ

Antim Box Office Collection: ಕೇವಲ 4.5 ಕೋಟಿ ಗಳಿಸಿದ ‘ಅಂತಿಮ್​’ ಚಿತ್ರ; ಸಲ್ಮಾನ್​ ಖಾನ್​ ಸಿನಿಮಾದ ಹಣೆಬರಹ ಏನಾಗಬಹುದು?

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ