AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ರಿನಾ ಕೈಫ್​-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್​

ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ ಮದುವೆಯು ಹಿಂದು ಮತ್ತು ಮುಸ್ಲಿಂ ಸಮುದಾಯದ ಪ್ರಕಾರ ನಡೆಯಲಿದೆ. ಇದಕ್ಕಾಗಿ ಪಾಲಿ ಜಿಲ್ಲೆಯಿಂದ ವಿಶೇಷ ಮೆಹಂದಿಯನ್ನು ತರಿಸಲಾಗುತ್ತಿದೆ ಎಂದು ಸುದ್ದಿ ಆಗಿದೆ.

ಕತ್ರಿನಾ ಕೈಫ್​-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್​
ವಿಕ್ಕಿ ಕೌಶಲ್, ಕತ್ರಿನಾ ಕೈಫ್
TV9 Web
| Updated By: ಮದನ್​ ಕುಮಾರ್​|

Updated on: Nov 25, 2021 | 8:44 PM

Share

ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ದೂರಿತನ ಇರಲೇಬೇಕು. ಚಿಕ್ಕ ವಿಚಾರಗಳಿಗೂ ದೊಡ್ಡದಾಗಿ ಖರ್ಚು ಮಾಡಲಾಗುತ್ತದೆ. ಈಗ ಕತ್ರಿನಾ ಕೈಫ್​ (Katrina Kaif) ಮತ್ತು ವಿಕ್ಕಿ ಕೌಶಲ್​ (Vicky Kaushal) ಅವರ ಮದುವೆ ಕೂಡ ಅದ್ದೂರಿಯಾಗಿ ನಡೆಯಲಿದೆ. ಡಿಸೆಂಬರ್​ನಲ್ಲಿ ಇವರಿಬ್ಬರ ಮದುವೆ (Katrina Kaif Vicky Kaushal Wedding) ಸಮಾರಂಭ ನೆರವೇರಲಿದ್ದು, ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದಕ್ಕೆಲ್ಲ ಕೋಟ್ಯಂತರ ರೂಪಾಯಿ ಮೀಸಲು ಇಡಲಾಗಿದೆ. ಮದುವೆಗೂ ಮುನ್ನ ನಡೆಯುವ ಮೆಹಂದಿ (Mehendi) ಶಾಸ್ತ್ರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಮೆಹಂದಿ ತರಿಸಲಾಗುತ್ತಿರುವುದು ವಿಶೇಷ. ಸದ್ಯ ಈ ವಿಚಾರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಬರೋಬ್ಬರಿ 1 ಲಕ್ಷ ರೂಪಾಯಿಯನ್ನು ಮೆಹಂದಿಗಾಗಿ ಖರ್ಚು ಮಾಡಲಾಗುತ್ತಿದೆ. 

ವಿಕ್ಕಿ ಕೌಶಲ್​ ಹಿಂದು, ಕತ್ರಿನಾ ಕೈಫ್​ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ಇದಕ್ಕಾಗಿ ರಾಜಸ್ಥಾನದ ಐಷಾರಾಮಿ ಹೋಟೆಲ್​ ಬುಕ್​ ಆಗಿದೆ. ಜೋಧ್​ಪುರದ ಪಾಲಿ ಜಿಲ್ಲೆಯಿಂದ ವಿಶೇಷ ಮೆಹಂದಿಯನ್ನು ತರಿಸಲಾಗುತ್ತಿದೆ ಎಂದು ಸುದ್ದಿ ಆಗಿದೆ. ಈ ಮೆಹಂದಿ ಬೆಲೆ ಒಂದು ಲಕ್ಷ ರೂಪಾಯಿ ಎಂಬುದನ್ನು ತಿಳಿದು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.

ಮದುವೆ ಬಳಿಕ ಕತ್ರಿನಾ ಕೈಫ್​ ಹೆಸರು ಕೊಂಚ ಬದಲಾಗಲಿದೆ. ಇನ್ಮುಂದೆ ಅವರನ್ನು KKK ಎಂದು ಅಭಿಮಾನಿಗಳು ಕರೆಯಬಹುದು. ಏನಿದು KKK? ಕತ್ರಿನಾ ಕೈಫ್​ ಕೌಶಲ್​! ಹೌದು, ಈ ಬಗ್ಗೆ ಬಾಲಿವುಡ್​ ಅಂಗಳದಿಂದ ಈಗಾಗಲೇ ಗುಸುಗುಸು ಕೇಳಿಬರುತ್ತಿದೆ. ಮದುವೆ ಬಳಿಕ ತಮ್ಮ ಹೆಸರಿನ ಜೊತೆಯಲ್ಲಿ ಕೌಶಲ್​ ಎಂಬ ಸರ್​ನೇಮ್​ ಸೇರಿಸಿಕೊಳ್ಳಲು ಕತ್ರಿನಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಮದುವೆ ಬಳಿಕ ಅನೇಕ ನಟಿಯರು ತಮ್ಮ ಹೆಸರಿನ ಜೊತೆ ಗಂಡನ ಹೆಸರು ಅಥವಾ ಗಂಡನ ಕುಟುಂಬದ ಸರ್​ನೇಮ್​ ಸೇರಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಕರೀನಾ ಕಪೂರ್ ಖಾನ್​ ಮುಂತಾದವರೇ ಈ ಮಾತಿಗೆ ಉದಾಹರಣೆ. ಅದೇ ರೀತಿ ಕತ್ರಿನಾ ಕೈಫ್​ ಕೂಡ ತಮ್ಮ ಹೆಸರಿನ ಜೊತೆ ಕೌಶಲ್​ ಎಂಬ ಸರ್​ನೇಮ್​ ಸೇರಿಸಿಕೊಳ್ಳಲಿದ್ದು, ಮುಂಬರುವ ಎಲ್ಲ ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ಅವರು ಇದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ:

ಮದುವೆ ಬಳಿಕ ಹನಿಮೂನ್​ಗೆ ಹೋಗಲ್ಲ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​; ಕಾರಣ ಏನು?

ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!