ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ನಟಿಸಿರುವ ಅವರು ಇತ್ತೀಚೆಗೆ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಇಲಿಯಾನಾ ಬಾಲಿವುಡ್ಗೆ ತೆರಳಿದ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಇಲಿಯಾನ ಲವ್ ಲೈಫ್ ಚರ್ಚೆಯಲ್ಲಿದೆ. ಕತ್ರಿನಾ ಕೈಫ್ (Katrina Kaif) ಸಹೋದರ ಸೆಬಾಸ್ಟಿಯನ್ ಜತೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಇತ್ತೀಚೆಗೆ ವೈರಲ್ ಆದ ಫೋಟೋಗಳೇ ಸಾಕ್ಷಿ.
ಜುಲೈ 16ರಂದು ಕತ್ರಿನಾ ಕೈಫ್ ಬರ್ತ್ಡೇ. ಇಡೀ ಕುಟುಂಬದ ಜತೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಮಾಲ್ಡೀವ್ಸ್ಗೆ ತೆರಳಿದ್ದರು. ಅಲ್ಲಿ ಬೀಚ್ನ ರೆಸಾರ್ಟ್ ಒಂದರಲ್ಲಿ ಎಲ್ಲರೂ ಹಾಯಾಗಿ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ವಿಕ್ಕಿ ಕೌಶಲ್, ಆನಂದ್ ತಿವಾರಿ, ಮಿನಿ ಮಾಥೂರ್, ಇಸಾಬೆಲ್ಲಾ ಕೈಫ್, ಇಲಿಯಾನಾ ಹಾಗೂ ಸೆಬಾಸ್ಟಿಯನ್ ಮೈಕಲ್ ಕೂಡ ಇದ್ದರು. ಕತ್ರಿನಾ ಹಾಗೂ ಇಲಿಯಾನಾ ಯಾವುದೇ ಸಿನಿಮಾದಲ್ಲಿ ಒಟ್ಟಾಗಿ ನಟಿಸಿಲ್ಲ. ಇವರು ಮೊದಲಿನಿಂದ ಗೆಳತಿಯರಲ್ಲ. ಹಾಗಿದ್ದರೂ ಕತ್ರಿನಾ-ಇಲಿಯಾನಾ ನಡುವೆ ಇಷ್ಟು ಆಪ್ತತೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಸೆಬಾಸ್ಟಿಯನ್ ಹಾಗೂ ಇಲಿಯಾನಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಕತ್ರಿನಾ ಬರ್ತ್ಡೇಯಲ್ಲಿ ಅವರು ಹಾಜರಿ ಹಾಕಿದ್ದಾರೆ.
ಇಲಿಯಾನಾ ಹಾಗೂ ಸೆಬಾಸ್ಟಿಯನ್ ಕೆಲವು ಸಮಯದಿಂದ ರಿಲೇಶನ್ಶಿಪ್ನಲ್ಲಿದ್ದಾರೆ. ಇಬ್ಬರೂ ಬಾಂದ್ರಾದಲ್ಲಿರುವ ಕತ್ರಿನಾ ಕೈಫ್ ಅವರ ಹಳೆಯ ಮನೆಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಬಾಂದ್ರಾ ಹಾಗೂ ಲಂಡನ್ನಲ್ಲಿರುವ ಇಲಿಯಾನಾ ಮನೆಯಲ್ಲೂ ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ ಎನ್ನಲಾಗುತ್ತಿದೆ.
ಈ ಮೊದಲು ಇಲಿಯಾನಾ ಫೋಟೋಗ್ರಾಫರ್ ಆಂಡ್ರ್ಯೂ ನೀಬೋನ್ ಜತೆ ರಿಲೇಶನ್ಶಿಪ್ನಲ್ಲಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಆದರೆ, ಇಬ್ಬರೂ ಬೇರೆ ಆದರು. ಇದನ್ನು ಇಲಿಯಾನಾ ಕೂಡ ಖಚಿತಪಡಿಸಿದ್ದರು. ಈಗ ಅವರಿಗೆ ಹೊಸ ಪ್ರೀತಿ ಹುಟ್ಟಿದೆ.
ಇದನ್ನೂ ಓದಿ: ನಟಿ ಇಲಿಯಾನಾ ಪ್ರೆಗ್ನೆಂಟ್ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ
ಸೆಬಾಸ್ಟಿಯನ್ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವರ ಇನ್ಸ್ಟಾಗ್ರಾಮ್ ಖಾತೆ ಪ್ರೈವೇಟ್ ಆಗಿದೆ. ಕತ್ರಿನಾ ಮದುವೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಕ್ಯಾಮೆರಾ ಕಣ್ಣಿಗೆ ಅವರು ಬಿದ್ದಿರಲಿಲ್ಲ.