
ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ (Toxic Movie) ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಕಿಯಾರಾ ಅಡ್ವಾಣಿ.
ಕಿಯಾರಾ ಅಡ್ವಾಣಿ ಅವರಿಗೆ ಇಂದು (ಜುಲೈ 31) ಜನ್ಮದಿನ. ಬಾಲಿವುಡ್ನಲ್ಲಿ ಹಲವು ಸಿನಿಮಾಗಳನ್ನು ಮಾಡಿರುವ ಅವರು ‘ವಾರ್ 2’ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಭಾಗವೂ ಆಗಲಿದ್ದಾರೆ. ಈ ಮೊದಲು ಯಶ್ ಜನ್ಮದಿನಕ್ಕೆ ಪೋಸ್ಟರ್ ಬಂದಿದ್ದನ್ನು ನೀವು ಗಮನಿಸಿರಬಹುದು. ಅದೇ ರೀತಿ, ಕಿಯಾರಾ ಬರ್ತ್ಡೇಗೂ ಪೋಸ್ಟರ್ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಿಯಾರಾ ಅಡ್ವಾಣಿ ಅವರ ಪಾತ್ರ ಏನು? ಇದಕ್ಕೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಕಿಯಾರಾ ಅವರು ಯಶ್ ಲವ್ ಇಂಟರೆಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗಾಗಿ ಅವರು 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಕೂಡ ವರದಿ ಆಗಿದೆ.
ಇದನ್ನೂ ಓದಿ: ಕಿಯಾರಾ-ಸಿದ್ದಾರ್ಥ್ನ ನೋಡಲು ಬಂದ ಸಲ್ಮಾನ್? ದಂಪತಿ ಮಗು ಫೋಟೋ ಹಂಚಿಕೊಂಡಿದ್ದು ನಿಜವೇ?
ಕಿಯಾರಾ ಇತ್ತೀಚೆಗೆ ಮಗುವಿಗೆ ಜನ್ಮನೀಡಿದರು. ಈ ಸಿನಿಮಾದ ಶೂಟ್ ನಡೆಯುವಾಗಲೇ ಅವರು ಪ್ರೆಗ್ನೆಂಟ್ ಆಗಿದ್ದರು. ಈ ವಿಚಾರ ತಿಳಿದ ಯಶ್ ಅವರು ಇಡೀ ಸಿನಿಮಾದ ಶೂಟ್ನ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರ ಮಾಡಿದ್ದರು ಎಂಬ ವರದಿಗಳು ಇವೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ. ಕಿಯಾರಾ ನಟನೆಯ ‘ವಾರ್ 2’ ಸಿನಿಮಾ ಇದೇ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಜೂನಿಯರ್ ಎನ್ಟಿಆರ್, ಹೃತಿಕ್ ರೋಷನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.