ಕ್ರಿಕೆಟ್​, ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​; ‘83’ ಟೀಮ್​ ಜತೆ ಸೇರಿಕೊಂಡ ಕಿಚ್ಚ ಸುದೀಪ್​

| Updated By: ಮದನ್​ ಕುಮಾರ್​

Updated on: Nov 30, 2021 | 7:58 AM

83 Movie: ಕಿಚ್ಚ ಸುದೀಪ್​ ಅವರಿಗೆ ಸಿನಿಮಾದ ಜತೆಗೆ ಕ್ರಿಕೆಟ್​ ಬಗ್ಗೆಯೂ ಅಷ್ಟೇ ಆಸಕ್ತಿ ಇದೆ. ಹಲವು ಬಾರಿ ಅವರು ಮೈದಾನಕ್ಕೆ ಇಳಿದು ಬ್ಯಾಟ್​ ಬೀಸಿದ್ದಾರೆ. ಈಗ ‘83’ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

ಕ್ರಿಕೆಟ್​, ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​; ‘83’ ಟೀಮ್​ ಜತೆ ಸೇರಿಕೊಂಡ ಕಿಚ್ಚ ಸುದೀಪ್​
‘83’ ಸಿನಿಮಾ ಪೋಸ್ಟರ್​, ಕಿಚ್ಚ ಸುದೀಪ್​
Follow us on

ಬಹುನಿರೀಕ್ಷಿತ ‘83’ ಸಿನಿಮಾ (83 Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ಮೊದಲ ಲಾಕ್​ಡೌನ್​ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿತ್ತು. ಆದರೆ ಲಾಕ್​ಡೌನ್​ ಜಾರಿಯಾದ ಬಳಿಕ ಬಿಡುಗಡೆ ದಿನಾಂಕ ಮುಂದೂಡಿಕೊಳ್ಳುವುದು ಅನಿವಾರ್ಯ ಆಗಿತ್ತು. ರಣವೀರ್​ ಸಿಂಗ್​ (Ranveer Singh) ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿ.24ರಂದು ತೆರೆ ಕಾಣಲಿದೆ. ವಿಶೇಷ ಏನೆಂದರೆ ನಟ ಕಿಚ್ಚ ಸುದೀಪ್​ (Kichcha Sudeep) ಅವರು ಕೂಡ ಈಗ ಈ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಅಂದರೆ, ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್​ ಅರ್ಪಿಸುತ್ತಿದ್ದಾರೆ. ಮೂಲತಃ ಹಿಂದಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ‘83’ ರಿಲೀಸ್​ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್​ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿದ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ‘83’ ಸಿನಿಮಾ ಮೂಡಿಬಂದಿದೆ. ಕಪಿಲ್​ ದೇವ್​ ಪಾತ್ರದಲ್ಲಿ ನಟಿಸಲು ರಣವೀರ್​ ಸಿಂಗ್​ ತುಂಬ ಶ್ರಮಪಟ್ಟಿದ್ದಾರೆ. ಟೀಸರ್​ ಮತ್ತು ಪೋಸ್ಟರ್​ಗಳಲ್ಲಿ ಅವರ ಲುಕ್​ ಗಮನ ಸೆಳೆದಿದೆ. ಇಡೀ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘83’ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.

ಚಿತ್ರ ಬಿಡುಗಡೆ ಮಾಡುವಲ್ಲಿ ಸುದೀಪ್​ ಕೈ ಜೋಡಿಸಿರುವುದು ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಕಬೀರ್ ಖಾನ್ ಅವರಿಗೆ ಸಂತಸ ತಂದಿದೆ. ‘ಇದು ಬಹಳ ಸಂತೋಷದ ಮತ್ತು ಹೆಮ್ಮೆಯ ವಿಚಾರ. ಕಿಚ್ಚ ಸುದೀಪ್ ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ ‘83’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ’ ಎಂದು ಕಬೀರ್ ಖಾನ್ ಹೇಳಿದ್ದಾರೆ.

ಸುದೀಪ್​ ಅವರು ಬಹಳ ಖುಷಿಯಿಂದ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ನನಗೆ ಸಂತೋಷ ಆಗುತ್ತದೆ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಸಿನಿಮಾ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಅಭಿನಯಿಸಿದ್ದರೆ, ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ.

ಇದನ್ನೂ ಓದಿ:

ರವಿಚಂದ್ರನ್​ ಜತೆ ಸುದೀಪ್​ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್​ ಆಗಿದ್ದು ಹೇಗೆ?

ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ