ಅರೇಬಿಕ್ ಸಿನಿಮಾದ ಕಥೆ ಕದ್ದು ‘ಲಾಪತಾ ಲೇಡೀಸ್’ ಮಾಡಿದ ಕಿರಣ್ ರಾವ್; ಸಿಕ್ತು ಸಾಕ್ಷಿ

ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ಮೇಲೆ ಈಗ ಒಂದು ಆರೋಪ ಎದುರಾಗಿದೆ. ಅರೇಬಿಕ್ ಸಿನಿಮಾದ ಕಥೆಯನ್ನು ಕದ್ದು ‘ಲಾಪತಾ ಲೇಡೀಸ್’ ಸಿನಿಮಾ ಮಾಡಲಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ಅರೇಬಿಕ್ ಸಿನಿಮಾದ ಕಥೆ ಕದ್ದು ‘ಲಾಪತಾ ಲೇಡೀಸ್’ ಮಾಡಿದ ಕಿರಣ್ ರಾವ್; ಸಿಕ್ತು ಸಾಕ್ಷಿ
Burqa City, Laapataa Ladies

Updated on: Apr 01, 2025 | 7:52 PM

2024ರಲ್ಲಿ ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾ ಸಖತ್ ಸದ್ದು ಮಾಡಿತು. ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ (Kiran Rao) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದರು. ಭಾರತದಿಂದ ಆಸ್ಕರ್ ಸ್ಪರ್ಧೆಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ ಅಂತಿಮ ಸುತ್ತಿಗೆ ಆಯ್ಕೆ ಆಗಲು ವಿಫಲವಾಯ್ತು. ಈಗ ನಿರ್ದೇಶಕಿ ಕಿರಣ್ ರಾವ್ ಮೇಲೆ ಕಥೆ ಕದ್ದ ಆರೋಪ ಎದುರಾಗಿದೆ. ‘ಲಾಪತಾ ಲೇಡೀಸ್’ ಸಿನಿಮಾದ ಕಥೆ ಒರಿಜಿನಲ್ ಅಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋ ತುಣುಕು ವೈರಲ್ ಆಗಿದೆ.

ನೆಟ್ಟಿಗರು ಆರೋಪಿಸುತ್ತಿರುವಂತೆ ‘ಲಾಪತಾ ಲೇಡೀಸ್’ ಸಿನಿಮಾದ ಕಥೆಯನ್ನು ಅರೇಬಿಕ್ ಭಾಷೆಯ ‘ಬುರ್ಕಾ ಸಿಟಿ’ ಕಿರುಚಿತ್ರದಿಂದ ಕದಿಯಲಾಗಿದೆ. ಬುರ್ಕಾ ಧರಿಸಿದ್ದ ಕಾರಣದಿಂದ ತನ್ನ ಪತ್ನಿಯನ್ನು ಕಳೆದುಕೊಂಡು, ಬೇರೆ ಮಹಿಳೆಯನ್ನು ಮನೆಗೆ ಕರೆದುಕೊಂಡು ಬರುವ ವ್ಯಕ್ತಿಯ ಕಥೆ ‘ಬುರ್ಕಾ ಸಿಟಿ’ ಕಿರುಚಿತ್ರದಲ್ಲಿದೆ. ಅದೇ ಕಥೆಯನ್ನು ಇಟ್ಟುಕೊಂಡು ಕಿರಣ್ ರಾವ್ ಅವರು ‘ಲಾಪತಾ ಲೇಡೀಸ್’ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಸೋಶಿಯಲ್ ಮೀಡಿಯಾದಲ್ಲಿ ‘ಬುರ್ಕಾ ಸಿಟಿ’ ಕಿರುಚಿತ್ರದ ತುಣುಕುಗಳನ್ನು ಶೇರ್ ಮಾಡಲಾಗುತ್ತಿದೆ. ಇದರಲ್ಲಿನ ಪಾತ್ರಗಳು ಹಾಗೂ ಸನ್ನಿವೇಶಗಳು ‘ಲಾಪತಾ ಲೇಡೀಸ್’ ಚಿತ್ರಕ್ಕೆ ಹೋಲಿಕೆ ಆಗುತ್ತಿವೆ. ರವಿ ಕಿಶನ್ ನಿಭಾಯಿಸಿದ ಪೊಲೀಸ್ ಅಧಿಕಾರಿಯ ಪಾತ್ರದ ರೀತಿಯೇ ‘ಬುರ್ಕಾ ಸಿಟಿ’ ಕಿರುಚಿತ್ರದಲ್ಲಿ ಕೂಡ ಪೊಲೀಸ್ ಪಾತ್ರ ಗಮನ ಸೆಳೆದಿದೆ. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

‘ಬುರ್ಕಾ ಸಿಟಿ’ ಶಾರ್ಟ್​ ಫಿಲ್ಮ್ 2019ರಲ್ಲಿ ಬಿಡುಗಡೆ ಆಗಿತ್ತು. ‘ಲಾಪತಾ ಲೇಡೀಸ್’ ಸಿನಿಮಾ 2024ರ ಮಾರ್ಚ್​ 1ರಂದು ರಿಲೀಸ್ ಆಯಿತು. ಎರಡೂ ಸಿನಿಮಾದಲ್ಲೂ ಒಂದೇ ರೀತಿಯ ಮೆಸೇಜ್ ಇದೆ. ಪುರುಷ ಪ್ರಧಾನ ಸಮಾಜವು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಈ ಸಿನಿಮಾಗಳನ್ನು ತೋರಿಸಲಾಗಿದೆ. ಆದ್ದರಿಂದ ‘ಲಾಪತಾ ಲೇಡೀಸ್’ ಸಿನಿಮಾದ ಕಥೆ ಕಾಪಿ ಎಂಬ ಆರೋಪ ಎದುರಾಗಿದೆ. ಈ ಆರೋಪಕ್ಕೆ ನಿರ್ದೇಶಕಿ ಕಿರಣ್ ರಾವ್ ಅವರು ಯಾವ ರೀತಿ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ಮೆಟ್ ಗಾಲಾ’ದಲ್ಲಿ ‘ಲಾಪತಾ ಲೇಡಿಸ್​’ ಚಿತ್ರದ ಫೂಲ್​ ಕುಮಾರಿ; ಫೋಟೋ ವೈರಲ್

ನಟ ಆಮಿರ್ ಖಾನ್ ಅವರು ‘ಲಾಪತಾ ಲೇಡೀಸ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಿತಾಂಷಿ ಗೋಯಲ್, ಪ್ರತಿಭಾ ರಂಟಾ, ಸ್ಪರ್ಶ್ ಶ್ರೀವಾಸ್ತವ, ಛಾಯಾ ಕದಂ, ರವಿ ಕಿಶನ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.