‘ಆಸ್ಕರ್’ಗಾಗಿ ಸಿನಿಮಾ ಟೈಟಲ್ ಬದಲಿಸಿದ ‘ಲಾಪತಾ ಲೇಡೀಸ್’ ಟೀಂ
ನ್ಯೂಯಾರ್ಕ್ನಲ್ಲಿ ‘ಲಾಸ್ಟ್ ಲೇಡಿಸ್’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಶೆಫ್ ವಿಕಾಸ್ ಖನ್ನಾ ಅವರು ನ್ಯೂಯಾರ್ಕ್ನಲ್ಲಿ ಈ ಶೋ ಹೋಸ್ಟ್ ಮಾಡಿದ್ದಾರೆ. ಆಮಿರ್ ಖಾನ್ ನಿರ್ಮಾಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಆಸ್ಕರ್ ಕ್ಯಾಂಪಿಂಗ್ ಮಾಡುತ್ತಿದೆ.
ಆಮಿರ್ ಖಾನ್ ನಿರ್ಮಾಣದ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಒಟಿಟಿಗೆ ಬಂದ ಬಳಿಕ ಜನರು ಹೆಚ್ಚು ಮೆಚ್ಚಿಕೊಂಡರು. ಈ ಸಿನಿಮಾ ‘ಆಸ್ಕರ್ 2025’ ರೇಸ್ನಲ್ಲಿ ಇದೆ. ಈ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈಗ ಆಸ್ಕರ್ ರೇಸ್ನಲ್ಲಿ ಇರುವ ಕಾರಣಕ್ಕೆ ಸಿನಿಮಾದ ಟೈಟಲ್ ಬದಲಿಸಲು ತಂಡ ಮುಂದಾಗಿದೆ. ಆಸ್ಕರ್ ಮಟ್ಟದಲ್ಲಿ ಸಿನಿಮಾ ಕ್ಯಾಂಪೇನ್ ಮಾಡಲು ಈ ಚಿತ್ರಕ್ಕೆ ‘ಲಾಸ್ಟ್ ಲೇಡಿಸ್’ ಎಂದು ಹೆಸರನ್ನು ಇಡಲಾಗಿದೆ.
ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದ ಈ ಬಗ್ಗೆ ಘೋಷಣೆ ಆಗಿದೆ. ‘ಲಾಸ್ಟ್ ಲೇಡಿಸ್’ ಎಂದು ಟೈಟಲ್ ಬದಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ‘ಕಾಯುವಿಕೆ ಪೂರ್ಣಗೊಂಡಿದೆ. ಲಾಸ್ಟ್ ಲೇಡಿಸ್ ಚಿತ್ರದ ಅಧಿಕೃತ ಪೋಸ್ಟರ್. ಫೂಲ್ ಹಾಗೂ ಜಯಾಳ ಪ್ರಯಾಣದ ಬಗ್ಗೆ ಈ ಸಿನಿಮಾ ಹೇಳುತ್ತದೆ’ ಎಂದು ಆಮಿರ್ ಖಾನ್ ಪ್ರೊಡಕ್ಷನ್ಸ್ ಕಡೆಯಿಂದ ಘೋಷಣೆ ಆಗಿದೆ.
ನ್ಯೂಯಾರ್ಕ್ನಲ್ಲಿ ‘ಲಾಸ್ಟ್ ಲೇಡಿಸ್’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಶೆಫ್ ವಿಕಾಸ್ ಖನ್ನಾ ಅವರು ನ್ಯೂಯಾರ್ಕ್ನಲ್ಲಿ ಈ ಶೋ ಹೋಸ್ಟ್ ಮಾಡಿದ್ದಾರೆ. ಆಮಿರ್ ಖಾನ್ ನಿರ್ಮಾಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಆಸ್ಕರ್ ಕ್ಯಾಂಪಿಂಗ್ ಮಾಡುತ್ತಿದೆ.
View this post on Instagram
ಕಿರಣ್ ರಾವ್ ನಿರ್ದೇಶನ ಮಾಡಿರೋದು ಕೆಲವೇ ಕೆಲವು ಸಿನಿಮಾಗಳು. ಆ ಪೈಕಿ ‘ಲಾಸ್ಟ್ ಲೇಡಿಸ್’ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರ ಥಿಯೇಟರ್ನಲ್ಲಿ ಮೆಚ್ಚುಗೆ ಪಡೆಯಿತು. ಒಟಿಟಿಗೆ ಬಂದ ಬಳಿಕ ಈ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದರು.
ಇದನ್ನೂ ಓದಿ: ‘ಗಜಿನಿ 2’ಗೆ ನಿರ್ಮಾಪಕರ ಸಖತ್ ಐಡಿಯಾ, ಸೂರ್ಯ-ಆಮಿರ್ ಖಾನ್ ಒಟ್ಟಿಗೆ ಚಿತ್ರೀಕರಣ
ಈಗಷ್ಟೇ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆ ಆಗುತ್ತಾರೆ. ಹೆಂಡತಿಯರನ್ನು ಕಳೆದುಕೊಂಡ ಗಂಡಂದಿರಿಗೆ ಹುಡುಕುವುದೇ ದೊಡ್ಡ ಕಾಯಕ ಆಗುತ್ತದೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಮುಖ್ಯವಾದ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರಿಗೆ ಇದು ಮೊದಲ ಸಿನಿಮಾ. ರವಿ ಕಿಶನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.