ಹಣ್ಣಿನ ವ್ಯಾಪಾರಿಗಳು ಈಗ ಬಾಲಿವುಡ್​ನ ಶ್ರೀಮಂತ ಕುಟುಂಬ: ಖಾನ್, ಕಪೂರ್ ಅಲ್ಲ

ಬಾಲಿವುಡ್​ನ ಶ್ರೀಮಂತ ಕುಟುಂಬ ಯಾವುದು ಎಂದರೆ ಸಾಮಾನ್ಯವಾಗಿ ಬರುವ ಉತ್ತರ ಖಾನ್ ಕುಟುಂಬ ಅಥವಾ ಕಪೂರ್ ಕುಟುಂಬ, ಆದರೆ ಅಸಲಿಗೆ ಈ ಎರಡೂ ಕುಟುಂಬಗಳು ಸಹ ಬಾಲಿವುಡ್​ನ ಶ್ರೀಮಂತ ಕುಟುಂಬ ಅಲ್ಲ. ಕೆಲ ದಶಕದ ಹಿಂದೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕುಟುಂಬ ಇಂದು ಬಾಲಿವುಡ್​ನ ಶ್ರೀಮಂತ ಕುಟುಂಬ.

ಹಣ್ಣಿನ ವ್ಯಾಪಾರಿಗಳು ಈಗ ಬಾಲಿವುಡ್​ನ ಶ್ರೀಮಂತ ಕುಟುಂಬ: ಖಾನ್, ಕಪೂರ್ ಅಲ್ಲ
Follow us
ಮಂಜುನಾಥ ಸಿ.
|

Updated on: Nov 14, 2024 | 11:59 AM

ಬಾಲಿವುಡ್ ನ ಅತ್ಯಂತ ಶ್ರೀಮಂತರು ಯಾರು ಎಂದಾಗ ಮೊದಲು ನೆನಪಿಗೆ ಬರುವ ಹೆಸರು ಶಾರುಖ್ ಖಾನ್, ಸಲ್ಮಾನ್ ಖಾನ್ ಅವರದ್ದು. ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆವ ಜೊತೆಗೆ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನೂ ಸಹ ಇವರು ಹೊಂದಿದ್ದಾರೆ. ಅದೇ ಬಾಲಿವುಡ್​ನ ಶ್ರೀಮಂತ ಕುಟುಂಬ ಯಾವುದೆಂಬ ಪ್ರಶ್ನೆಗೆ ಕಪೂರ್ ಕುಟುಂಬ ಎಂಬ ಉತ್ತರ ಬರಬಹುದು ಆದರೆ ಅದು ನಿಜವಲ್ಲ. ಕಪೂರ್ ಅಥವಾ ಖಾನ್ ಕುಟುಂಬಕ್ಕಿಂತಲೂ ಶ್ರೀಮಂತ ಕುಟುಂಬ ಬಾಲಿವುಡ್​ನಲ್ಲಿದೆ. ಆದರೆ ಈ ಕುಟುಂಬದವರ ಹೆಸರು ಹೆಚ್ಚು ಜನ ಕೇಳಿರಲಿಕ್ಕಿಲ್ಲ, ಆದರೆ ಇವರ ಸಂಸ್ಥೆಯ ಹೆಸರು ಕೇಳದ ಸಂಗೀತ ಪ್ರೇಮಿಗಳು, ಸಿನಿಮಾ ಪ್ರೇಮಿಗಳು ಅತ್ಯಂತ ವಿರಳ. ಅಂದಹಾಗೆ ಕೆಲವು ದಶಕಗಳ ಹಿಂದೆ ಈ ಕುಟುಂಬದವರು ಸಣ್ಣ ಮಟ್ಟದ ಹಣ್ಣಿನ ವ್ಯಾಪಾರಿಗಳಾಗಿದ್ದರು.

ಕುಮಾರ್ ಕುಟುಂಬ ಎಂದರೆ ಹೆಚ್ಚು ಜನರಿಗೆ ಗೊತ್ತಾಗಲಿಕ್ಕಿಲ್ಲ, ಅದೇ ಟಿ-ಸೀರೀಸ್ ಹೆಸರು ಹೇಳಿದರೆ ಥಟ್ಟನೆ ಪರಿಚಯ ಸಿಗುತ್ತದೆ. ಹೌದು, ಟಿ-ಸೀರೀಸ್ ಮಾಲೀಕತ್ವ ಹೊಂದಿರುವ ಕುಮಾರ್ ಕುಟುಂಬ ಬಾಲಿವುಡ್​ನ ಅತ್ಯಂತ ಶ್ರೀಮಂತ ಕುಟುಂಬ. ಈಗ ಟಿ-ಸೀರೀಸ್ ಸಂಸ್ಥೆಯನ್ನು ಭೂಷಣ್ ಕುಮಾರ್ ಮತ್ತು ಅವರ ಚಿಕ್ಕಪ್ಪ ನಡೆಸುತ್ತಿದ್ದಾರೆ. ಆಡಿಯೋ ಸಂಸ್ಥೆ, ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿಎಫ್​ಎಕ್ಸ್ ಸ್ಟುಡಿಯೋ, ಮ್ಯೂಸಿಕ್ ಸ್ಟುಡಿಯೋ, ರಿಯಲ್ ಎಸ್ಟೇಟ್​ ಇನ್ನೂ ಹಲವು ಉದ್ಯಮಗಳಲ್ಲಿ ಕುಮಾರ್ ಕುಟುಂಬದವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವಿವಿಧ ಕ್ಷೇತ್ರಗಳ ಶ್ರೀಮಂತ ಕುಟುಂಬಗಳ ಪಟ್ಟಿಯನ್ನು ಹುರಾನ್​ ಪ್ರಕಟಿಸಿದ್ದು, ಸಿನಿಮಾ ಕ್ಷೇತ್ರದ ವಿಶೇಷವಾಗಿ ಬಾಲಿವುಡ್​ನ ಅತ್ಯಂತ ಶ್ರೀಮಂತ ಕುಟುಂಬವಾಗಿ ಹೆಸರು ಮಾಡಿದೆ ಕುಮಾರ್ ಕುಟುಂಬ. ವಿಶೇಷವೆಂದರೆ 1970 ರಲ್ಲಿ ಈ ಕುಟುಂಬದವರು ದೆಹಲಿಯಲ್ಲಿ ಸಣ್ಣ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದರು. ಇವರ ಅದೃಷ್ಟ ಬದಲಾಗಿದ್ದು, ಈ ಕುಟುಂಬದ ಹಿರಿಯ ಗುಲ್ಷನ್ ಕುಮಾರ್ ಅವರು ಕ್ಯಾಸೆಟ್ ಅಂಗಡಿ ಇಟ್ಟ ಬಳಿಕ.

ಇದನ್ನೂ ಓದಿ:ಬಾಲಿವುಡ್​ನ ಅತಿ ಶ್ರೀಮಂತ ಕುಟುಂಬ ಇದು; ಒಟ್ಟು ಆಸ್ತಿ 10 ಸಾವಿರ ಕೋಟಿ ರೂಪಾಯಿ

ಹಣ್ಣಿನ ವ್ಯಾಪಾರದಿಂದ ಬಂದ ಹಣದಲ್ಲಿ ಕ್ಯಾಸೆಟ್ ಅಂಗಡಿ ಇರಿಸಿದ ಗುಲ್ಷನ್ ಕುಮಾರ್, ಸಂಗೀತ ಕ್ಷೇತ್ರದ ಒಳ-ಹೊರಗು ತಿಳಿದುಕೊಳ್ಳಲು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಮುಂಬೈಗೆ ಬಂದು ಇಲ್ಲಿ ಕ್ಯಾಸೆಟ್ ಕಂಪೆಸಿ ಸ್ಥಾಪಿಸಿದರು. ಆ ಬಳಿಕ ಆಡಿಯೋ ಸಂಸ್ಥೆ, ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಹಲವು ಗಾಯಕರಿಂದ ಭಜನೆ, ಕೀರ್ತನೆ, ಪಂಜಾಬಿ ಜನಪದಗಳನ್ನು ಹಾಡಿಸಿ ಲಕ್ಷಾಂತರ ರೂಪಾಯಿ ಹಣ ಮಾಡಿದರು. ಆದರೆ ಗುಲ್ಷನ್ ಅವರನ್ನು ಮುಂಬೈ ಭೂಗತ ಪಾತಕಿಗಳು ಹಾಡ ಹಗಲೆ ಗುಂಡಿಕ್ಕಿ ಕೊಂದರು. ಆದರೆ ಅವರ ಬಳಿಕ ಟಿ-ಸೀರೀಸ್ ಅನ್ನು ಗುಲ್ಷನ್ ಅವರ ಪುತ್ರ ಭೂಷಣ್ ಕುಮಾರ್ ಮತ್ತು ಅವರ ಚಿಕ್ಕಪ್ಪ ನಡೆಸಿಕೊಂಡು ಹೋಗುತ್ತಿದ್ದಾರೆ.

ಭೂಷಣ್ ಕುಮಾರ್, ಪ್ರಶ್ತುತ ಭಾರತೀಯ ಚಿತ್ರರಂಗದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಪ್ರಭಾಸ್ ನಟನೆಯ ‘ಆದಿಪುರುಷ್​’ಗೆ ಬಂಡವಾಳ ಹೂಡಿದ್ದು ಇವರೇ. ಮಾತ್ರವಲ್ಲದೆ ಈಗ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾಗಳಾದ ‘ಅನಿಮಲ್’, ‘ಭೂಲ್ ಭುಲಯ್ಯ’, ‘ದೃಶ್ಯಂ 2’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 10 ಸಾವಿರ ಕೋಟಿಗೂ ಹೆಚ್ಚಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ