AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನ ಅತಿ ಶ್ರೀಮಂತ ಕುಟುಂಬ ಇದು; ಒಟ್ಟು ಆಸ್ತಿ 10 ಸಾವಿರ ಕೋಟಿ ರೂಪಾಯಿ

ಈ ಕುಟುಂಬದಲ್ಲಿ ಯಾವುದೇ ಸ್ಟಾರ್ ಹೀರೋ ಇಲ್ಲ. ಹಾಗಿದ್ದರೂ ಕೂಡ ಈ ಫ್ಯಾಮಿಲಿಯ ಒಟ್ಟು ಆಸ್ತಿ ಮೌಲ್ಯ 10 ಸಾವಿರ ಕೋಟಿ ರೂಪಾಯಿ. ಹಿಂದಿ ಚಿತ್ರರಂಗಕ್ಕೆ ಈ ಕುಟುಂಬ ನೀಡಿರುವ ಕೊಡುಗೆ ದೊಡ್ಡದು. ಹಾಗಾದರೆ ಯಾವುದು ಈ ಫ್ಯಾಮಿಲಿ? ಖಾನ್, ಕಪೂರ್​, ಚೋಪ್ರಾ ಅಲ್ಲವೇ ಅಲ್ಲ. ಶ್ರೀಮಂತಿಕೆಯಲ್ಲಿ ನಂಬರ್​ 1 ಸ್ಥಾನ ಪಡೆದಿರುವುದು ಗುಲ್ಷನ್ ಕುಮಾರ್ ಕುಟುಂಬ!

ಬಾಲಿವುಡ್​ನ ಅತಿ ಶ್ರೀಮಂತ ಕುಟುಂಬ ಇದು; ಒಟ್ಟು ಆಸ್ತಿ 10 ಸಾವಿರ ಕೋಟಿ ರೂಪಾಯಿ
ಕ್ರಿಷನ್ ಕುಮಾರ್​, ಭೂಷಣ್ ಕುಮಾರ್​, ಗುಲ್ಷನ್ ಕುಮಾರ್​
ಮದನ್​ ಕುಮಾರ್​
|

Updated on: Nov 13, 2024 | 5:12 PM

Share

ಬಾಲಿವುಡ್​ನಲ್ಲಿ ಸ್ಟಾರ್​ ಕಲಾವಿದರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್​ ಕುಮಾರ್​, ಆಮಿರ್ ಖಾನ್ ಮುಂತಾದವರು ಸಿಕ್ಕಾಪಟ್ಟೆ ಆಸ್ತಿ ಹೊಂದಿದ್ದಾರೆ. ಹಾಗಿದ್ದರೂ ಕೂಡ ಶ್ರೀಮಂತಿಕೆ ವಿಚಾರದಲ್ಲಿ ಅವರು ಯಾರೂ ನಂಬರ್​ ಒನ್ ಆಗಿಲ್ಲ. ಹಿಂದಿ ಚಿತ್ರರಂಗದ ಅತಿ ಶ್ರೀಮಂತ ಕುಟುಂಬ ಯಾವುದು ಎಂದರೆ ಅದಕ್ಕೆ ಉತ್ತರ ನಿರ್ಮಾಪಕ ಗುಲ್ಷನ್ ಕುಮಾರ್​ ಫ್ಯಾಮಿಲಿ. ಹೌದು, ಈ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ. ಇತ್ತೀಚಿನ ವರದಿಯಲ್ಲಿ ಈ ವಿಚಾರ ತಿಳಿದುಕೊಂಡಿದೆ.

ಸಿನಿಮಾ ರಂಗದಲ್ಲಿ ಟೀ-ಸಿರೀಸ್​ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಕ್ಯಾಸೆಟ್ ಕಾಲದಿಂದ ಯೂಟ್ಯೂಬ್ ಜಮಾನಾದ ತನಕ ಹಿಂದಿ ಸಿನಿಮಾಗಳ ಸೂಪರ್​ ಹಿಟ್​ ಹಾಡುಗಳ ಪ್ರಸಾರ ಹಕ್ಕುಗಳನ್ನು ಖರೀದಿಸಿದ ಸಂಸ್ಥೆ ಇದು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರೇ ಗುಲ್ಷನ್ ಕುಮಾರ್. 1997ರಲ್ಲಿ ಅವರು ನಿಧನ ಹೊಂದಿದರು. ಬಳಿಕ ಅವರ ಸಹೋದರ ಕ್ರಿಷನ್ ಕುಮಾರ್​ ಮತ್ತು ಪುತ್ರ ಭೂಷಣ್ ಕುಮಾರ್ ಅವರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸಿನಿಮಾಗಳ ನಿರ್ಮಾಣದಲ್ಲೂ ಈ ಕುಟುಂಬ ತೊಡಗಿಕೊಂಡಿದೆ.

10 ಸಾವಿರ ಕೋಟಿ ರೂಪಾಯಿಗಳಲ್ಲಿ ಬಹುಪಾಲು ಆಸ್ತಿ ಭೂಷಣ್ ಕುಮಾರ್ ಅವರಿಗೆ ಸೇರಿದೆ. ಅವರ ಸಹೋದರಿಯರಾದ ತುಳಸಿ ಕುಮಾರ್ (250 ಕೋಟಿ ರೂಪಾಯಿ) ಹಾಗೂ ಕುಶಾಲಿ ಕುಮಾರ್ (100 ಕೋಟಿ ರೂಪಾಯಿ) ಆಸ್ತಿ ಹೊಂದಿದ್ದಾರೆ. ಇನ್ನುಳಿದ ಪಾಲು ಕ್ರಿಷನ್ ಕುಮಾರ್​ ಅವರಿಗೆ ಸಲ್ಲುತ್ತದೆ. ಗುಲ್ಷನ್ ಕುಮಾರ್ ಅವರ ಬಯೋಪಿಕ್ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರಣಾಂತರಗಳಿಂದ ಈ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ.

ಇದನ್ನೂ ಓದಿ: ಜೂಹಿ ಚಾವ್ಲಾ ಆಸ್ತಿ 4600 ಕೋಟಿ ರೂಪಾಯಿ; ಇಷ್ಟೆಲ್ಲ ಹಣ ಬಂದಿದ್ದು ಎಲ್ಲಿಂದ?

ಇನ್ನುಳಿದ ಕುಟುಂಬಗಳ ಬಗ್ಗೆ ಹೇಳುವುದಾದರೆ, ಯಶ್​ ರಾಜ್​ ಫ್ಯಾಮಿಯ ಒಟ್ಟು ಆಸ್ತಿ 8 ಸಾವಿರ ಕೋಟಿ ರೂಪಾಯಿ. ಶಾರುಖ್ ಖಾನ್ ಕುಟುಂಬದ ಆಸ್ತಿ ಅಂದಾಜು 7500 ಕೋಟಿ ರೂಪಾಯಿ ಎನ್ನಲಾಗಿದೆ. ಸಲ್ಮಾನ್ ಖಾನ್ ಮತ್ತು ಸಹೋದರರ ಒಟ್ಟು ಆಸ್ತಿ ಮೌಲ್ಯ 3500 ಕೋಟಿ ರೂಪಾಯಿ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್